Saturday, January 2, 2010
ಕವಬಾಟನ ‘ಸಾವಿರ ಪಕ್ಷಿಗಳು’

ಯಸುನಾರಿ ಕವಬಾಟ- ಜಪಾನೀ ಸಾಹಿತ್ಯದಲ್ಲಿ ಅತಿ ವಿಶಿಷ್ಟವಾದ ಧ್ವನಿ. ಮೊಟ್ಟ ಮೊದಲ ಬಾರಿಗೆ ಜಪಾನಿನ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಹೆಗ್ಗಳಿಕೆ ಈತನದು. ತನ್ನ ಸರಳವಾದ ಗದ್ಯದಿಂದಲೇ ಮಹತ್ತರವಾದ, ಜೀವನದ ಅನೇಕ ಸಂಕೀರ್ಣಗಳ ಅರ್ಥವನ್ನು ಹುಡುಕಹೊರಟು ಅದರಲ್ಲಿ ಯಶಸ್ಸನ್ನು ಪಡೆದಾತ. ಭಾಷೆ ಸರಳವಾಗುತ್ತಾ ಹೋದಲ್ಲಿ ಅಪ್ರಯತ್ನಪೂರ್ವಕವಾಗಿ ಹೇಳುವ ಕಥನವೂ, ಆಯ್ದುಕೊಳ್ಳುವ ವಿಷಯಗಳೂ ಸರಳವಾಗುತ್ತವೆ ಎಂಬ ನಂಬಿಕೆಗೆ ತದ್ವಿರುದ್ಧವಾದ ಚಿಂತನಕ್ರಮ ಈತನದು. ಭಾಷೆಯನ್ನು ಮೇಣದಂತೆ ತನಗೆ ಬೇಕಾದ ಅಭಿವ್ಯಕ್ತಿಗೆ ರೂಡಿಸಿಕೊಂಡದ್ದು ಈತನ ಸಾಧನೆ. ಎಲ್ಲಿಯೂ ಈತ ಝಳಪಿಸುವುದಿಲ್ಲ, ಬೊಬ್ಬೆ ಹಾಕುವುದಿಲ್ಲ ಅಥವಾ ಗರ್ಜಿಸುವುದಿಲ್ಲ. ತನ್ನ ಮೃದುವಾದ ಧ್ವನಿಯಲ್ಲಿಯೇ ಮೆದುವಾದ, ಆಪ್ತವಾದ ಆದರೆ ಅಷ್ಟೇ ಗರಿಮುರಿಯಾದ ಗದ್ಯವನ್ನು ಉಣಬಡಿಸುವುದು ಈತನ ವೈಶಿಷ್ಟ್ಯ. ಭಾಷೆ ಸರಳವಾದಷ್ಟೂ ಸಂಕೀರ್ಣ ಸಂಗತಿಗಳು ಓದುಗರಿಗೆ ಹೆಚ್ಚು ಆಪ್ತವಾಗುತ್ತವೆ ಎಂತಲೇ ಈತ ಕೊನೆತನಕ ನಂಬಿದ್ದ. ಈತನ ಕಥನದ ಶೈಲಿ ಹೈಕುಗಳಿದ್ದಂತೆ, ಮೂರೇ ಸಾಲಿನಲ್ಲಿ ಹೇಳಬೇಕಾದ್ದು ಹೇಳಿ ಇನ್ನೂ ಏನೋ ಇದೆ ಎನಿಸುವ, ಮತ್ತಿನ್ನಷ್ಟು ಓದಬೇಕು ಎನಿಸುವ ಹೃದ್ಯ ಶೈಲಿ ಈತನದು.
ಕವಬಾಟನ ಒಟ್ಟು ಕಥನದ ಥೀಮ್-ಸ್ಥೂಲವಾಗಿ ಹೇಳಬೇಕೆಂದರೆ ‘ತೀವ್ರವಾದ ಹಂಬಲ’. ಈ ತೀವ್ರವಾದ ತೀರದ ಹಂಬಲ ಅವನ ಮಹತ್ವದ ಕಾದಂಬರಿಗಳಾದ ‘ಸ್ನೋ ಕಂಟ್ರಿ’ ‘ಥೌಸೆಂಡ್ ಕ್ರೇನ್ಸ್’ ಮುಂತಾದುವುಗಳಲ್ಲಿ ಪುನರಾವರ್ತಿತವಾಗಿವೆ, ಈ ಹಂಬಲವೇ ನಮ್ಮ ಜೀವನದ ಉಸಿರು ಎಂದು ತಿಳಿದಾತ. ಈ ಹಂಬಲ ಎಷ್ಟು ತೀವ್ರವಾಗಿರಬೇಕೆಂದರೆ ಅದರ ಸಾಧನೆಯ ಹಾದಿಯಲ್ಲಿ ನಾವು ಮುಕ್ತಿಹೊಂದಬೇಕೇ ಹೊರತು ಸಾಧಿಸಿಬಿಟ್ಟರೆ ಈ ಹಂಬಲಕ್ಕೇ ಅರ್ಥವಿರುವುದಿಲ್ಲ ಎನ್ನುವುಷ್ಟು ಅಚಲವಾಗಿತ್ತು ಆತನ ನಂಬಿಕೆ. ಹಾಗಾಗಿಯೇ ಯಶಸ್ಸಿನ ಬಗ್ಗೆಯೂ ಆತನಿಗೆ ನಂಬಿಕೆಯಿರಲಿಲ್ಲ. ಈ ರೀತಿಯ ತೀರದ ಹಂಬಲವನ್ನು ಆತನೇ ಕೆಲವುಕಡೆ ‘ವ್ಯರ್ಥ ಪ್ರಯತ್ನ’(Wasted efforts)ಗಳೆಂದು ಕರಕೊಂಡಿದ್ದಾನೆ. ಇಂಥ ಪ್ರಯತ್ನದಲ್ಲಿ ಕೂಡ ಬದುಕನ್ನು ತೀವ್ರವಾಗಿ ಅನುಭವಿಸುವ ಹಂಬಲವಿದ್ದಾಗ ಅದು ವ್ಯರ್ಥವಲ್ಲ ಎಂದು ಈತನ ನಂಬಿಕೆ.
ಈತ ನಿತ್ಯನಗರಿಯ ತಾಕಲಾಟವನ್ನು ಬರೆಯುವ ವಾಸ್ತವವಾದಿ ಬರಹಗಾರರನ್ನು ದ್ವೇಷಿಸುತ್ತಿದ್ದ. ಆತನಿಗೆ ಸೌಂದರ್ಯದ ಅಸ್ತಿತ್ವದ ಬಗ್ಗೆ ಬಹಳವಾದ ನಂಬಿಕೆಯಿದ್ದಿದ್ದಷ್ಟೇ ಅಲ್ಲ, ಈ ಸೌಂದರ್ಯವನ್ನು ಅರಸುವುದು ಮತ್ತು ಅದನ್ನು ಅದನ್ನು ತೀರ ಶುದ್ಧವಾಗಿ ತನ್ನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರ ಪ್ರಯತ್ನದಲ್ಲಿ ಯಾವತ್ತೂ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ.. ‘ಈ ಬದುಕೆಂಬುದು ಸತ್ಯ- ಮಿಥ್ಯಗಳ, ಶುದ್ಧ- ಅಶುದ್ಧಗಳ, ಪ್ರಾಮಾಣಿಕತೆ- ಕೃತ್ರಿಮಗಳ ಸಂಗಮ. ಒಬ್ಬ ಕಾದಂಬರಿಕಾರ ಸತ್ಯ, ಶುದ್ಧ, ಪ್ರಾಮಾಣಿಕವಾದವುಗಳನ್ನು ಹೆಕ್ಕಿ, ಜೋಡಿಸಿ ದೈನಿಕವನ್ನು ಮೀರಿದ ಸುಂದರ ವಾಸ್ತವವನ್ನು ಸೃಷ್ಟಿಸಬೇಕು. ಇಂಥ ಶೋಧದಲ್ಲಿ ಮಾತ್ರ ನನಗೆ ಸುಖ ಸಿಗುವುದು’ ಎಂದು ಆತ ಬಹಳ ಬಾರಿ ಹೇಳಿದ್ದ. ಒಂದು ಉದಾಹರಣೆ ನೋಡಿ. ಆತನ ‘ಸ್ನೋ ಕಂಟ್ರಿ’ ಎಂಬ ಅದ್ಭುತ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ನಾಯಕ ಶಿಮಮುರ ಜಪಾನಿನ ಉತ್ತರಭಾಗದಲ್ಲಿರುವ ಹಿಮಾಚ್ಛಾಧಿತ ಪ್ರದೇಶಕ್ಕೆ ಒಂದು ರೈಲಿನಲ್ಲಿ ಹೋಗುತ್ತಿರುತ್ತಾನೆ. ರೈಲಿನ ಇನ್ನೊಂದು ಮೂಲೆಯಲ್ಲಿ ಯೋಕೋ ಎಂಬ ಒಬ್ಬ ಸುಂದರ ಹುಡುಗಿ ತನ್ನ ರೋಗಿಷ್ಠ ಪ್ರಿಯತಮನ ಜತೆ ಕೂತಿದ್ದಾಳೆ. ಹೊರಗೆ ನಿಧಾನಕ್ಕೆ ಕತ್ತಲಾಗುತ್ತಿದೆ. ರೈಲು ನಿಧಾನವಾಗಿ ಈ ಹಿಮದ ಮಧ್ಯೆ ಹೋಗುತ್ತಾ ಇದೆ. ಆಗ ಆ ಪರ್ವತದ ಮೇಲಿನಿಂದ ಪ್ರತಿಫಲಿಸಿದ ಬೆಳಕಿನ ಕಿರಣದ ಹೊಳಪನ್ನು ಆ ಸುಂದರ ಹುಡುಗಿಯ ಕಣ್ಣಿನಲ್ಲಿ ಶಿಮಮುರ ರೈಲಿನ ಮಬ್ಬು ಗಾಜಿನ ಕಿಟಕಿಯಲ್ಲಿನ ಆ ಹುಡುಗಿಯ ಪ್ರತಿಬಿಂಬದಲ್ಲಿ ಕಾಣುತ್ತಾನೆ. ಇದು ಶಿಮಮುರನಿಗೆ ಅತ್ಯಂತ ಸುಂದರವಾದ ಅನುಭವ. ಹೊರಗೆ ಕೊರೆಗಟ್ಟುವ ಚಳಿ, ಎಲ್ಲೆಲ್ಲೂ ಹಿಮ, ಇದಲ್ಲದೆ ಈ ಸುಂದರ ಹುಡುಗಿ ಆರೈಸುತ್ತಿರುವುದು ಅಕೆಯ ರೋಗಗ್ರಸ್ತ ಗೆಳೆಯನನ್ನು. ಆತ ಅಲ್ಲಿಯೇ ತಳ್ಳುಕುರ್ಛಿಯಲ್ಲಿದ್ದಾನೆ. ಹೊರಗೆ ಕತ್ತಲಾಗುತ್ತಿದೆ, ಪ್ರಯಾಣದಿಂದ ಎಲ್ಲರೂ ಬಳಲಿದ್ದಾರೆ. ಕಿಟಕಿಯ ಗಾಜು ಕನ್ನಡಿಯಂತಲ್ಲ ಅದು ಯಾವ ಬಿಂಬವನ್ನೂ ಪೂರ್ತಾ ಪ್ರತಿಬಿಂಬಿಸಲಾರದು. ಮತ್ತೆ ಕತ್ತಲಿನ ಮಬ್ಬು ಬೆಳಕಿನಲ್ಲಿ ಈ ಹೊರಗಿನ ಕಿರಣ ಪರ್ವತದ ಮೇಲಿಂದ ಪ್ರತಿಫಲಿಸಿ, ಹುಡುಗಿಯ ಕಣ್ಣಲ್ಲಿ ಮಿಂಚುತ್ತಿದ್ದನ್ನು ನಾಯಕ ಶಿಮಮೂರ ಆಕೆಯ ಮಬ್ಬು ಬಿಂಬದಲ್ಲಿ ಕಾಣುತ್ತಾನೆ.- ಇಂಥ ಪ್ರತಿಮೆಗಳನ್ನು ಮರೆಯುವುದು ಕಷ್ಟ. ಕವಬಾಟನ ಸೌಂದರ್ಯದ ಶೋಧವೂ ಹೀಗೇ. ಶಿಮಮೂರನ ಇಡೀ ರೈಲಿನ ವ್ಯರ್ಥ ಪ್ರಯಾಣಕ್ಕೆ ಈ ಒಂದು ಬೆಳಕಿನ ಕಿರಣದ ಪ್ರತಿಫಲನದ ಸೌಂದರ್ಯ ಗೊತ್ತಿಲ್ಲದ ಸಾರ್ಥಕ್ಯವನ್ನು ಒದಗಿಸುತ್ತದೆ. ಇಂಥ ಸೌಂದರ್ಯವನ್ನು ಹುಡುಕುವುದು, ದಾಖಲಿಸುವುದು ಒಬ್ಬ ಕಾದಂಬರಿಕಾರನ ಗುರಿಯಾಗಬೇಕೆಂದು ಆತ ಯಾವತ್ತೂ ಪ್ರತಿಪಾzಸುತ್ತಿದ್ದ,
ಬದುಕನ್ನು ತೀವ್ರವಾಗಿ ಅನುಭವಿಸಬೇಕಾದಲ್ಲಿ ಅದಕ್ಕೆ ಬೇಕಾದದ್ದು ಮುಗ್ಧತೆ ಮತ್ತು ಮುಕ್ತತೆ ಎಂದು ಕವಬಾಟ ಎಂದಿಗೂ ನಂಬಿದ್ದ. ಇದು ಆತನ ಯಾವತ್ತೂ ಆಶಯ ಕೂಡ. ಈ ಮುಗ್ಧತೆಯನ್ನು ಆತ ಸಣ್ನ ಮಕ್ಕಳಲ್ಲಿ, ಎಳೆಯ ಪ್ರಾಯದ ತರುಣಿಯರಲ್ಲಿ ಮತ್ತು ಸಾಯುತ್ತಿರುವ ಗಂಡಸರಲ್ಲಿ ಕಂಡಿದ್ದ. ಹಾಗಾಗಿ ಆತನ ಪ್ರಸಿದ್ಧ ಕಾದಂಬರಿಗಳಲ್ಲಿ ಈ ಬಗೆಯ ಪಾತ್ರಗಳು ಪುನರಾವರ್ತಿತವಾಗುತ್ತವೆ. ಮಕ್ಕಳ ಮುಗ್ಧತೆಗೆ ಯಾರೂ ಕಾರಣ ಕೇಳುವುದಿಲ್ಲ. ಆದರೆ, ಎಳೆಯ ತರುಣಿಯರು ಮತ್ತು ಸಾಯುತ್ತಿರುವ ಗಂಡಸರಲ್ಲಿ ಇಂಥ ಮುಗ್ಧತೆಯನ್ನು ಆತ ಮತ್ತೆಮತ್ತೆ ಕಂಡಿದ್ದು ಕುತೂಹಲಕರವಾದ ವಿಷಯ. ಅಷ್ಟೇ ಅಲ್ಲ, ಈ ಮುಗ್ಧತೆಯಿಲ್ಲದ ಬರಹಗಾರರನ್ನಾಗಲೀ ಅಥವಾ ಅಂತಹ ಯಾವುದೇ ಬರವಣಿಗೆಯನ್ನೂ ಕವಬಾಟ ಒಪ್ಪಿಕೊಳ್ಳುತ್ತಿರಲಿಲ್ಲ. ಇದನ್ನು ಆತ ತನ್ನ ಸಾಹಿತ್ಯಿಕ ಜೀವನದಲ್ಲಿಯೂ ಯಾವತ್ತೂ ಒಂದು ವ್ರತದಂತೆ ಪಾಲಿಸಿದ. ವೃತ್ತಿಪರ ಬರಹಗಾರರನ್ನು ಆತ ಯಾವತ್ತೂ ಇಷ್ಟಪಟ್ಟಿರಲಿಲ್ಲ. ಹಾಗೆಯೇ ಏನೂ ಹೆಸರು ಮಾಡಿರದ ಹೊಸಬರಹಗಾರರನ್ನು ಆತ ಕೊಂಚ ಹೆಚ್ಚಾಗಿಯೇ ಓಲೈಸುತ್ತಿದ್ದ ಎಂಬ ಅಪವಾದವೂ ಇದೆ. ಆದರೆ, ಮಗುವಿನ ಮುಗ್ಶತೆಯಿಂದ ನೋಡಲಾಗದ ಜಗತ್ತನ್ನು ಆತ ಎಂದೂ ನಿರಾಕರಿಸಿದ್ದ. ಆತನ ಪ್ರಕಾರ ಮುಗ್ಧತೆಯೆಂದರೆ ಯಾರಿಗೂ ದಕ್ಕದ, ಯಾರಿಗೂ ದಕ್ಕಿರದ ಪ್ರೀತಿ.
ತನ್ನ ಸಾಹಿತ್ಯ ಮತ್ತು ಅದರ ಆಶಯದ ಬಗ್ಗೆ ಕವಬಾಟ ಯಾವತ್ತೂ ಸ್ಪಷ್ಟವಾಗಿದ್ದ. ಅದರ ಬಗ್ಗೆ ಆತನಿಗೆ ಕೊಂಚವೂ ಅನುಮಾನವಿರಲಿಲ್ಲ. ಪ್ರತಿಯೊಂದು ಕ್ರಿಯೆಯೂ ಕೇವಲ ಸಾಂದರ್ಭಿಕ ಮಾತ್ರ ಎಂದು ಆತ ಬಹಳವಾಗಿ ನಂಬಿದ್ದ. ಒಳ್ಳೆಯದಕ್ಕೆ ಅರ್ಥ ಬರಬೇಕಾದರೆ ಈ ಒಳ್ಳೆಯತನವನ್ನು ಸುತ್ತುವರಿಯುವ ಸಂದರ್ಭ ಮಾತ್ರ ಮುಖ್ಯ, ಹಾಗೆಯೇ ಕೆಟ್ಟದೆನ್ನುವುದು ಕೆಟ್ಟದಾಗುವುದು ಕೂಡ ಆ ಸಂದರ್ಭಾನುಸಾರ ಮಾತ್ರ. ಯಾವುದೇ ಕ್ರಿಯೆಯನ್ನು ಆ ಕ್ರಿಯೆಯ ಸಾಂದರ್ಭಿಕ ಅರ್ಥದಿಂದ ಹೊರತುಪಡಿಸಿ ಆತ ನೋಡಲು ಇಷ್ಟಪಡುತ್ತಿರಲಿಲ್ಲ.ಒಂದು ಸಣ್ನ ಉದಾಹರಣೆ ಕೊಡಬೇಕೆಂದರೆ ಜಪಾನಿನ ಒಬ್ಬ ದೂರದ ಓಟಗಾರ ೧೯೬೮ರಲ್ಲಿ ಒಂದು ಹೋಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆತ ತನ್ನ ಆತ್ಮಹತ್ಯಾ ಒಕ್ಕಣೆಯಲ್ಲಿ ‘ನನ್ನ ಪ್ರೀತಿಯ ಅಪ್ಪ, ಅಮ್ಮ- ನೀವು ಬಡಿಸಿದ ಟ್ಯೊರೊರೋ ಅನ್ನವನ್ನು ನಾನು ಬಹಳ ಖುಷಿಯಿಂದ ಉಂಡಿದ್ದೇನೆ’ ಎಂದು ಆರಂಭಿಸಿ ತನ್ನ ಇಡೀ ಪರಿವಾರವನ್ನು ಉದ್ದೇಶಿಸಿ ಧನ್ಯವಾದವನ್ನು ಹೇಳಿ ಕೊನೆಗೆ ಎಲ್ಲರ ಕ್ಷಮೆ ಕೇಳಿ ಸಾಯುತ್ತಾನೆ. ಈ ಆತ್ಮಹತ್ಯಾ ಪತ್ರ ಕವಬಾಟನನ್ನು ಬಹಳ ಕಾಡಿತ್ತು. ‘ಈ ಅತಿಭಾವುಕ ಅನ್ನುವ ಪತ್ರದಲ್ಲಿ ಈತ ತೀರ ಸರಳವಾಗಿ ನಾನು ಖುಷಿಪಟ್ಟಿದ್ದೇನೆ ಎಂದು ಹೇಳಿಕೊಳ್ಳುವ ಈ ಪದಗಳು ಆತ ಬದುಕಿದ ಅಪ್ಪಟ ಬದುಕನ್ನು ಉಸಿರಿಸುತ್ತದೆ. ಆತ್ಮಹತ್ಯಾ ಒಕ್ಕಣೆಯ ಅರ್ಥವನ್ನು ಮೀರಿಸುವ ಒಂದು ತಾಳ ಈ ಪದಗಳಿಗಿವೆ. ಎಷ್ಟು ಸುಂದರ, ಗಾಢ ಮತ್ತು ವಿಷಾದಕರ.’ ಎಂದು ಕವಬಾಟ ಹೇಳಿದ್ದ. ಈ ರೀತಿಯ ಸೌಂದರ್ಯ ಮತ್ತು ವಿಷಾದ ತುಂಬಿದ ಬರವಣಿಗೆಗೆ ಕವಬಾಟ ಹಾತೊರೆಯುತ್ತಿದ್ದ ಎನ್ನುವುದು ಅವನ ಕಾದಂಬರಿಗಳನ್ನು ಓದಿದವರಿಗೆ ಸ್ಪಷ್ಟವಾಗುತ್ತದೆ.
ಈತನ ಸಾವೂ ಒಂದು ವಿಚಿತ್ರಕರವಾಗಿಯೇ ಆಯಿತೆಂದು ಹೇಳಲಾಗುತ್ತದೆ. ಈತನ ಆತ್ಮ ಸ್ನೇಹಿತ ಯುಕಿಯೋ ಮಿಶಿಮಾ ಎಂಬ ಲೇಖಕ ೧೯೭೦ರಲ್ಲಿ ವಿಧಿವತ್ತಾಗಿ ಆತ್ಮಹತ್ಯೆಯನ್ನು ಮಾಡಿಕೊಂಡ. ೧೯೭೨ರಲ್ಲಿ ಯಾವ ಸೂಚನೆಯನ್ನೂ ಕೊಡದೆ ಮನೆಯಿಂದ ಹೊರಹೋದ ಕವಬಾಟ ಒಂದು ಗ್ಯಾಸ್ ನಳಿಕೆಯನ್ನು ಬಾಯಲ್ಲಿಟ್ಟುಕೊಂಡು ಸತ್ತ. ಆತ ಯಾಕೆ ಸತ್ತ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ನೋಬೆಲ್ ಸಮಿತಿಯ ವೆಬ್‌ಸೈಟಿನಲ್ಲಿ ಈತನ ಮರಣ ಆತ್ಮಹತ್ಯೆಯಿಂದಲೇ ಆಯಿತು ಎಂದು ಬರೆಯಲಾಗಿದೆ.
ಕವಬಾಟ ಅನೇಕ ಕಾದಂಬರಿಗಳನ್ನು, ಕಥೆಗಳನ್ನು ಮತ್ತು ಅನೇಕ ಸಣ್ಣ ಸಣ್ಣ ಕತೆಗಳನ್ನೂ ಕೂಡ ಅಪೂರ್ಣವಾಗಿಯೇ ಉಳಿಸಿದ್ದ. ‘ಕಲೆ ಅದಾಗಿಯೇ ಪರಿಪೂರ್ಣವಾಗಬೇಕು’ ಎಂಬುದು ಆತನ ನಂಬಿಕೆ. ಅದಕ್ಕೆ ಒಂದು ಸಮಯದ ಪರಿಧಿಯನ್ನು ಹಾಕಿಟ್ಟುಕೊಂಡು ಇಷ್ಟುದಿನದೊಳಗೆ ಒಂದು ಕಾದಂಬರಿಯನ್ನು ಮುಗಿಸುತ್ತೇನೆ ಎಂಬುದರ ಬಗ್ಗೆ ಆತನಿಗೆ ನಂಬಿಕೆಯಿರಲಿಲ್ಲ. ಆತನ ಬಹು ಮುಖ್ಯ ಕಾದಂಬರಿಗಳೆಂದು ಗುರುತಿಸಲಾಗುವ ‘ಸ್ನೋ ಕಂಟ್ರಿ’ ಮತ್ತು ‘ಥೌಸೆಂಡ್ ಕ್ರೇನ್ಸ್’ ಅನ್ನು ಆತ ವರ್ಷಾನುಗಟ್ಟಲೆ ಬರೆದ.
ಈತನ ಒಂದು ಬಹುಮುಖ್ಯ ಕಾದಂಬರಿ ‘ಥೌಸೆಂಡ್ ಕ್ರೇನ್ಸ್’ ಅನ್ನು ಕನ್ನಡಕ್ಕೆ ‘ಸಾವಿರ ಪಕ್ಷಿಗಳು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ, ಕೃಷ್ಣರಾಜುರವರು. ಕವಬಾಟನ ಈ ಅತ್ಯಂತ ಸೋಪಜ್ಞ ಕೃತಿಯನ್ನು ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿ ನಮಗೆಲ್ಲ ಈತನ ಬರವಣಿಗೆಯ, ಭಾಷೆಯ ಮತ್ತು ಈತ ಬದುಕುತ್ತಿದ್ದ ಪ್ರಪಂಚವನ್ನು ನಮಗೆ ಪರಿಚಯಿಸಿದ್ದಾರೆ ಕೃಷ್ಣರಾಜುರವರು. ಎಷ್ಟು ಓದಿದರೂ ಇನ್ನೂ ಓದಬೇಕೆನ್ನಿಸುವ ಈ ಮಹಾಕಾದಂಬರಿಕಾರನನ್ನು ಕನ್ನಡಕ್ಕೆ ಪರಿಚಯಮಾಡಿಸಿದ್ದಕ್ಕಾಗಿ ನಾನು ಕೃಷ್ಣರಾಜುರವರಿಗೆ ಧನ್ಯವಾದವನ್ನು ಹೇಳುತ್ತೇನೆ.
ಕಾದಂಬರಿಯ ಕಥನವಸ್ತುವನ್ನು, ಭಾಷೆಯನ್ನು ನಾನು ಚರ್ಚಿಸಲು ಹೋದರೆ ಕಾದಂಬರಿಕಾರನಿಗೆ ಮತ್ತು ಅನುವಾದಕರ ಪ್ರಯತ್ನಕ್ಕೆ ಯಾವರೀತಿಯಲ್ಲಿಯೂ ನ್ಯಾಯ ಒದಗಿಸಲಾರೆ. ಅನುವಾದಕನ ಜಾಣ್ಮೆ ಮತ್ತು ಮೂಲಕೃತಿಯ ಬಗೆಗಿನ ನಿಷ್ಟೆ, ಕಾಳಜಿಗಳು ಅನುವಾದದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಒಂದು ಸಣ್ಣ ಉದಹರಣೆಯನ್ನು ನೋಡಿ.
ಕಾದಂಬರಿಯ ಮೊದಲಲ್ಲಿಯೇ ನಾಯಕ ಕಿಕುಜಿಯ ತಂದೆಯ ಪ್ರೇಯಸಿ ಚಿಕಕೋಳ ಮೊಲೆಯ ಮೇಲಿನ ಮಚ್ಚೆಯೊಂದರ ವಿವರಣೆ ಬರುತ್ತದೆ. ಅದರ ಅನುವಾದ ಹೀಗಿದೆ.
‘ಅದನ್ನು ಓದುತ್ತಾ ಕಿಕುಜಿಗೆ ಚಿಕಕೊಳ ಮೊಲೆಯ ಮೇಲಿನ ಮಚ್ಚೆ ನೆನಪಿಗೆ ಬಂತು.
ಅವನಿಗಾಗ ಎಂಟೋ ಒಂಬತ್ತೋ ವರ್ಷ. ಅಪ್ಪನೊಟ್ಟಿಗೆ ಅವಳ ಮನೆಗೆ ಹೋಗಿದ್ದ. ಅಡಿಗೆಮನೆಯಲ್ಲಿ ಮಂಡಿಯೂರಿ ಕುಳಿತಿದ್ದಳು. ಎದುರಿಗೆ ಹರಡಿದ ನ್ಯೂಸ್ ಪೇಪರ್. ಕಿಮೋನೋ ಸರಿದು ಬತ್ತಲೆ ಮೊಲೆ ಮುಂದೆ ಜೋತಿದೆ. ಎಡ ಮೊಲೆಯ ಮೇಲಿಂದ ನಡುವಿನ ಕಣಿವೆಯವರೆಗೆ ಹಬ್ಬಿದ ಕೈ-ಅಗಲದ ಕೆನ್ನೀಲಿ ಮಚ್ಚೆ. ಅದರ ಮೇಲೆ ತೆಳುವಾಗಿ ಬೆಳೆದಿದ್ದ ಕೂದಲುಗಳನ್ನು ಸಣ್ಣ ಕತ್ತರಿಯಿಂದ ಕತ್ತರಿಸುತ್ತಿದ್ದಾಳೆ...
...ಅವಳ ಮಂಡಿಯ ಮುಂದಿನ ಪೇಪರಿನ ಮೇಲೆ ಬಿದ್ದಿದ್ದ ಗರಿ ಗರಿ, ನಿಮಿರು ನಿಮಿರಿನ ಕೂದಲನ್ನು ಕಿಕುಜಿ ದುರುಗುಟ್ಟಿ ನೋಡಿದ.’
...ಆ ಮಗು ತನ್ನ ಜೀವನದಲ್ಲಿ ಮೊಟ್ಟ ಮೊದಲು ನೋಡೋದು ಅಮ್ಮನ ಮಚ್ಚೆ ಹರಡಿದ ಮೊಲೆ. ಅದರ ಮೂಲಕಾನೇ ಮಗುಗೆ ಅದರಮ್ಮನ ನೆನಪು. ಜನ್ಮದುದ್ದಕ್ಕೂ ಆ ಕುರೂಪಿ ಮೊಲೇನ ಮರೆಯೋಕಾಗಲ್ಲ,
ಚಿಕಕೊಳ ಮೊಲೆಯ ಮೇಲಿನ ಮಚ್ಚೆಯ ಈ ಪ್ರತಿಮೆಯನ್ನು ಕಣ್ಣಿನಿಂದ ಅಳಿಸಲು ಪ್ರಯತ್ನ ಮಾಡಿನೋಡಿ. ಅಷ್ಟೇ ಅಲ್ಲ, ಕಣ್ಣು ಬಿಟ್ಟ ತಕ್ಷಣ ಮೊಲೆಯ ಮೇಲಿನ ಮಚ್ಚೆಯನ್ನು ನೋಡುವ ಮಗುವಿನ ಪ್ರತಿಮೆ. ಎರಡೂ ಕೊನೆಯವರೆಗೂ ಏನು, ಕಾದಂಬರಿಯೋದಿಯಾದ ಮೇಲೆಯೂ ಕಣ್ಣಮುಂದೆ ದಟ್ಟವಾಗಿ ಉಳಿಯುವುದರಲ್ಲಿ ಆಶ್ಚರ್ಯವಿಲ್ಲ.
* * *
ಈ ಅನುವಾದಕ್ಕೆ ಕೃಷ್ಣರಾಜುರವರು ಉಪಯೋಗಿಸಿರುವ ಭಾಷೆ ಸಮಕಾಲೀನ ಕನ್ನಡದ ಓದುಗ ಆಡುನುಡಿಯಲ್ಲಿ ಬಳಸುವಂಥದ್ದು. ಯಾವುದೇ ಗ್ರಾಂಥಿಕ ನುಡಿಗಟ್ಟನ್ನಾಗಲೀ ಅಥವಾ ಪಾಂಡಿತ್ಯಪೂರ್ಣತೆಗಾಗಲೀ ಅವರು ತಲೆಕೆಡಿಸಿಕೊಂಡಿಲ್ಲ. ನಡುವೆ ಬೇಕಾಗಿಯೇ ಕೆಲವು ಇಂಗ್ಲಿಷ್ ಪದಗಳನ್ನೂ ಉಪಯೋಗಿಸುತ್ತಾರೆ॒
ಸರಳತೆ ಅವಶ್ಯವಾಗಿದ್ದಾಗ ಈ ರೀತಿಯ ಅನುವಾದದ ಅಗತ್ಯ ಎಷ್ಟಿದೆ ಅಂದು ನನಗೆ ಅರ್ಥವಾದದ್ದು ಒ ಎಲ್ ನಾಗಭೂಷಣಸ್ವಾಮಿಯವರ ಟಾಲ್‌ಸ್ಟಾಯ್ ಕಥೆಗಳು, ವಾರ್ ಅಂಡ್ ಪೀಸ್‌ನ ಕೆಲವು ಅಧ್ಯಾಯಗಳು ಮತ್ತು ರಿಲ್ಕೆಯ ಪತ್ರಗಳ ಅನುವಾದಗಳನ್ನು ಓದಿದಾಗ. ಟಾಲ್‌ಸ್ಟಾಯ್ ಕತೆಗಳಲ್ಲಿ ಹಾರಿಬಲ್, ಈಡಿಯಟ್ಟು, ಇಂಥ ಪದಗಳನ್ನು ಬಳಸಿದಾಗ ಒಂದು ರೀತಿ ಪುಳಕವಾಗಿ ಟಾಲ್‌ಸ್ಟಾಯ್‌ನ ಇನ್ನೊಂದು ಮುಖದ ಪರಿಚಯವಾದಂತೆ ಆಗಿ, ಟಾಲ್‌ಸ್ಟಾಯ್ ಅನ್ನು ಹೀಗೂ ಓದಿಕೊಳ್ಳಬಹುದು ಎಂದನಿಸಿತ್ತು. ಈ ಮಹಾಕಾದಂಬರಿಗಳು ತಮ್ಮನ್ನು ತಮ್ಮ ಲೋಕಕ್ಕೆ ಬೇರೆಯೇ ಬಾಗಿಲಿನ ಮೂಲಕ ಪ್ರವೇಶ ದೊರಕಿಸಿಕೊಳ್ಳುತ್ತವೆ. ಇದು ಅನುವಾದಕನ ಓದು, ಎರಡೂ ಭಾಶೆಗಳ ಮೇಲೆ ಇರುವ ಪರಿಣಿತಿ ಮತ್ತು ಈ ರೀತಿಯ ಅನುವಾದ ಮುಟ್ಟಬೇಕಾಗಿರುವ ‘ಟಾರ್ಗೆಟ್’ ಓದುಗರು- ಎಲ್ಲದರ ಬಗೆಗಿನ ಕಾಳಜಿಯನ್ನೂ ತೋರುತ್ತದೆ. ಈ ‘ಅನುವು ಆಗುವ’ ಕ್ರಿಯೆಯಲ್ಲಿ ನಮ್ಮ ಕಾಲದ ಕಾಳಜಿಗಳು ನಮಗೆ ಗೊತ್ತಿಲ್ಲದೇ ಕೆಲಸ ಮಾಡಿರುತ್ತವೆ.
ನನಗೆ ತಿಳಿದ ಮಟ್ಟಿಗೆ ಕನ್ನಡ ಕಾದಂಬರಿ ಲೋಕಕ್ಕೆ ಇದು ಮೊಟ್ಟ ಮೊದಲ ಜಪಾನೀ ಭಾಷೆಯ ಕಾದಂಬರಿಯ ಅನುವಾದ. ತಪ್ಪದೇ ಓದಲೇಬೇಕಾದ ಕೃತಿ.
(ಮುನ್ನುಡಿಯಿಂದ)
Friday, November 27, 2009
ಬಿದ್ದು ಹೋಗುವ ಮಾತು.
ನನ್ನ ವೃತ್ತಿಯಲ್ಲಿ ಕೆಲವುಬಾರಿ ಇದಕ್ಕೆ ‘ಕರ್ಬ್ ಸೈಡಿಂಗ್’ಎನ್ನುತ್ತೇವೆ. ಒಂದು ಸಣ್ಣ ಉದಾಹರಣೆ ಕೊಡುತ್ತೇನೆ-ಒಬ್ಬಾತ ಬಿದ್ದು ಹಿಮ್ಮಡಿ ನೋವುಮಾಡಿಕೊಂಡು ಬಂದಿದ್ದಾನೆ, ಆತನಿಗೆ ಎಕ್ಸ್‌ರೇ ಮಾಡಿರುತ್ತೇನೆ ಎಂದುಕೊಳ್ಳಿ. ಅಮೆರಿಕಾದ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕೆಲಸ ಮಾಡುವ ಡಾಕ್ಟರುಗಳಿಗೆ ಒಂದು ವಿಚಿತ್ರವಾದ ಸಮಸ್ಯೆಯಿದೆ. ಅದೆಂದರೆ, ಎಲ್ಲ ಬಲ್ಲವರಾಗಿರಬೇಕು, ಜೀವ ಉಳಿಸುವಷ್ಟು, ನೋವು ಶಮನ ಮಾಡುವಷ್ಟು, ಯಾವುದೇ ಶಾಶ್ವತ ಹಾನಿಯಾಗದೇ ಇರುವ ಹಾಗೆ ಕಾಯುವಷ್ಟು. ಅಂದರೆ, ಒಬ್ಬ ರೋಗಿಯ ಎಕ್ಸ್ ರೇ ನೋಡಿ ‘ಅವನಿಗೆ ತುರ್ತಾಗಿ- ಅಂದರೆ ಅವತ್ತಿನ ತುರ್ತು ಭೇಟಿಯ ಸಮಯದಲ್ಲಿ ನಾನು ಸರಿಪಡಿಸಬಹುದಾದಂತಹ ಯಾವ ತೊಂದರೆಯನ್ನೂ ನಾನು ಎಕ್ಸ್‌ರೇಯಲ್ಲಿ ಕಂಡಿಲ್ಲ’ ಎಂದು ಹೇಳುವ ಮಟ್ಟಿಗೆ ನಾನು ಎಕ್ಸ್ ರೇ ನೋಡಿ ಹೇಳುವ ಮಟ್ಟಿನ ಪರಿಣಿತಿಯನ್ನು ಹೊಂದಿರಬೇಕು. ಪ್ರಸ್ತುತ ಸಂದರ್ಭದಲ್ಲಿ ನಾನು ಈ ರೋಗಿಗೆ ಯಾವ ಮೂಳೆಯೂ ಮುರಿದಿಲ್ಲ ಎಂದು ಹೇಳುವ ಮಟ್ಟಿನಲ್ಲಿಯಾದರೂ ನಾನು ಎಕ್ಸ್ ರೇಯನ್ನು ನೋಡಿ ಹೇಳುವ ಪರಿಣಿತಿಯನ್ನು ಹೊಂದಿರಬೇಕು. ಅದು ಚಿಕಿತ್ಸಾ ಕ್ರಮ. ಅಥವಾ ಸ್ಟ್ಯಾಂಡರ್ಡ್ ಆಫ್ ಕೇರ್.
ಇದರಲ್ಲೇನು ಹೆಚ್ಚುಗಾರಿಕೆ ಒಬ್ಬ ಡಾಕ್ಟರಿಗೆ ಅಷ್ಟೂ ಗೊತ್ತಾಗದಿದ್ದರೆ ಹೇಗೆ ಎನ್ನಬಹುದು. ಆದರೆ, ವಿಷಯ ಯಾವಾಗಲೂ ಅಷ್ಟು ಸುಲಭವಾಗಿರುವುದಿಲ್ಲ. ಕೆಲವೊಮ್ಮೆ ಎಕ್ಸ್‌ರೇಯಲ್ಲಿ ಸಣ್ಣ ಗೀಟುಗಳು ಕಾಣುತ್ತವೆ. ಅದು ಮುರಿದಿರುವ ಮೂಳೆಯೋ ಅಥವಾ ಅಲ್ಲವೋ ಎಂದು ನಾನು ಗ್ಯಾರಂಟಿಯಾಗಿ ಹೇಳುವುದು ಸಾಧ್ಯವಿಲ್ಲ, ಇಂತ ಸಂದರ್ಭದಲ್ಲಿ ನಾನೇನು ಮಾಡಬೇಕು? ಆ ಎಕ್ಸ್‌ರೇಯನ್ನು ಡಿಜಿಟೈಜ್ ಮಾಡಿ ರೇಡಿಯಾಲಜಿಸ್ಟಿನ ಮನೆಯ ಕಂಪ್ಯೂಟರಿಗೆ ಕಳಿಸಿ ಅವನ ಅಭಿಪ್ರಾಯವನ್ನು ಪಡೆಯುವುದು. (ಬಹುತೇಕ ಆಸ್ಪತ್ರೆಗಳಲ್ಲಿ ೨೪/೭ ರೇಡಿಯಾಲಜಿ ಸೇವೆ ಇರುವುದಿಲ್ಲ. ಬೇಕಿದ್ದರೆ ರೇಡಿಯಾಲಜಿಸ್ಟಿನ ಮನೆಗೇ ನನ್ನ ರೋಗಿಯ ಎಕ್ಸ್ ರೇಯನ್ನು ಡಿಜಿಟೈಜ್ ಮಾಡಿ ಕಳಿಸಬಹುದು) ರೇಡಿಯಾಲಜಿಸ್ಟ್ ಹಿಮ್ಮಡಿಯ ಎಕ್ಸ್‌ರೇ ಯ ರಿಪೋರ್ಟು ಕೊಡುವುದಕ್ಕೆ ಮಧ್ಯರಾತ್ರಿ ಎಬ್ಬಿಸಿದ್ದಕ್ಕೆ ಗೊಣಗುತ್ತಾನೆ. ‘ಒಂದು ಹಡಬೆ ಹಿಮ್ಮಡೀ ಎಕ್ಸ್ ರೇಯನ್ನು ಸರಿಯಾಗಿ ನೋಡಲು ಬರದೇ ಇದ್ದ ಮೇಲೆ ಯಾಕೆ ಡಾಕ್ಟರಾಗಬೇಕು’ ಎಂದು ಬಯ್ದುಕೊಂಡೇ ಆತ ಮಧ್ಯರಾತ್ರಿ ರಿಪೋರ್ಟನ್ನು ಫ್ಯಾಕ್ಸ್ ಕಳಿಸುತ್ತಾನೆ. ಮಧ್ಯರಾತ್ರಿ ಎದ್ದು ಆತ ನೋಡಿದ್ದಕ್ಕೆ ಆತನ ಫೀಸು ದುಪ್ಪಟ್ಟು. ಮಾರನೆಯ ದಿನ ಆಸ್ಪತ್ರೆಯ ಅಕೌಂಟೆಂಟು ಸುಮ್ಮನೆ ನನಗೆ ಒಂದು ಈ ರೋಗಿಯ ಎಕ್ಸ್‌ರೇಯನ್ನು ನಾನು ನೋಡಿ ರಿಪೋರ್ಟಿಸಲಾಗದೇ ರೇಡಿಯಾಲಜಿಸ್ಟ್ ನೋಡಿ ರಿಪೋರ್ಟನ್ನು ಕೊಟ್ಟಿದ್ದರಿಂದ ಆಸ್ಪತ್ರೆಗೆ ಎಷ್ಟು ಜಾಸ್ತಿ ಖರ್ಚಾಯಿತು ಎಂದು ಒಂದು ರಿಮೈಂಡರನ್ನು ನನಗೆ ‘ಎಫ್ವೈಐ’ ಎಂದು ಇಮೈಲ್ ಮಾಡುತ್ತಾನೆ.
ಅಕಸ್ಮಾತ್ ಆ ಎಕ್ಸ ರೇಯಲ್ಲಿ ಕಂಡ ಆ ಗೀಟು ಮುರಿದ ಮೂಳೆಯಾಗಿದ್ದು ಅದನ್ನು ನಾರ್ಮಲ್ ಎಂದು ತಪ್ಪಾಗಿ ನಾನು ಹೇಳಿ (ರೇಡಿಯಾಲಜಿಸ್ಟ್‌ನ ಅಭಿಪ್ರಾಯ ಪಡೆಯದೇ)ರೋಗಿಗೆ ಏನೂ ಚಿಕಿತ್ಸೆ ಮಾಡದೇ ಮನೆಗೆ ಕಳಿಸಿದೆ ಎಂದುಕೊಳ್ಳಿ. ಮಾರನೆಯ ದಿನ ರೇಡಿಯಾಲಜಿಸ್ಟ್ ಬಂದು ನನಗೆ ‘ನೀನು ನಿನ್ನೆ ನೋಡಿ ಫ್ರಾಕ್ಚರ್ ಇಲ್ಲ ಎಂದು ಹೇಳಿದ ರೋಗಿಗೆ ಕಾಲಿನ ಎಕ್ಸ್‌ರೇಯಲ್ಲಿ ಫ್ರಾಕ್ಚರ್ ಇದೆ’ ಎಂದು ಅಧಿಕೃತವಾಗಿ ಹೇಳುತ್ತಾನೆ, ನಾನು ಆ ರೋಗಿಗೆ ಫೋನು ಮಾಡಿ ‘ನೋಡಪ್ಪ, ನಿನ್ನ ಕಾಲಿನ ಎಕ್ಸ ರೇಯನ್ನು ನಾನು ನಿನ್ನೆ ನೋಡಿ ಫ್ರಾಕ್ಚರ್ ಇಲ್ಲ ಎಂದು ಹೇಳಿದನಲ್ಲ. ಸಾರಿ, ತಪ್ಪಾಗಿದೆ. ಬಹಳ ದೊಡ್ಡ ತಪ್ಪೇನಲ್ಲ. ಆದರೂ ಅದನ್ನು ಹಾಗೇ ಬಿಡುವುದು ಒಳ್ಳೇದಲ್ಲ. ಮತ್ತೆ ಎಮರ್ಜೆನ್ಸಿ ರೂಮಿಗೆ ಬಾ. ಕಾಲಿಗೆ ಒಂದು ಕ್ಯಾಸ್ಟ್ ಹಾಕುತ್ತೇನೆ. ನಂತರ ಎಲುಬು, ಕೀಲು ತಜ್ಞರನ್ನು ಹೋಗಿ ನೋಡು’ ಎಂದು ಹೇಳುತ್ತೇನೆ. ಬಹುತೇಕ ರೋಗಿಗಳು ಬಂದು ಕ್ಯಾಸ್ಟ್ ಹಾಕಿಸಿಕೊಂಡು ಹೋಗುತ್ತಾರೆ. ಆದರೆ, ಒಂದು ಸಣ್ಣ ಕಿರಿಕಿರಿ ಅವರ ಮುಖದ ಮೇಲೆ ಕಂಡೇ ಕಾಣುತ್ತದೆ. ‘ನಿನ್ನೆ ರಾತ್ರಿಯೇ ಬಂದಾಗ ಇವೆಲ್ಲ ಮುಗಿದುಹೋಗಿದ್ದರೆ ಮತ್ತೆ ಇನ್ನೊಂದು ಟ್ರಿಪ್ ಆಸ್ಪತ್ರೆಗೆ ಬರುವುದು ತಪ್ಪುತ್ತಿತ್ತಲ್ಲವೇ?’ ಎಂದು ಮೂಗು ಮುರಿಯುವವರು ಕೆಲವಾದರೆ, ಇನ್ನೂ ಕೆಲವರು ‘ ಡಾಕ್, ಇದು ನಿಮ್ಮ ತಪ್ಪು ತಾನೇ. ನನಗೆ ಮತ್ತೆ ಎರಡನೇ ಬಾರಿ ಎಮರ್ಜೆನ್ಸಿ ರೂಮಿನ ವಿಸಿಟ್‌ಗೆ ಚಾರ್ಜ್ ಮಾಡುವುದಿಲ್ಲ ತಾನೇ.’ ಎಂದು ಉಳಿದವರು ಕೇಳಬಹುದು. ಅಷ್ಟೇ ಅಲ್ಲ- ಇನ್ನೂ ಹೆಚ್ಚಿಗೆಯೆಂದರೆ ಆತ ನನ್ನ ಮೇಲೆ ಆಸ್ಪತ್ರೆಗೆ ಫಿರ್ಯಾದು ಮಾಡಬಹುದು. ಅಥವಾ ನನ್ನ ಮೇಲೆ ಕೋರ್ಟಿನಲ್ಲಿ ಕೇಸು ಹಾಕಬಹುದು.
ಅದೇ ರಾತ್ರಿ ನಾನು ರೇಡಿಯಾಲಜಿಸ್ಟಿನ ಮನೆಗೆ ಈ ಎಕ್ಸ್‌ರೇ ಯ ಕಾಪಿಯನ್ನು ಕಳಿಸಬೇಕೋ ಬೇಡವೋ ಎಂದು ಯೋಚನೆ ಮಾಡುತ್ತಾ ಇರಬೇಕಾದರೆ ಆಸ್ಪತ್ರೆಯ ಕಾರಿಡಾರಿನಲ್ಲಿ ಯಾವುದೋ ಆರ್ಥೊಪೆಡಿಕ್ ಸರ್ಜನ್ ಸುಮ್ಮನೆ ಹೋಗುತ್ತಿರುವುದು ನನ್ನ ಕಣ್ಣಿಗೆ ಬಿದ್ದಲ್ಲಿ ನಾನೇನು ಮಾಡುತ್ತೇನೆ. ‘ಹೇ, ಈ ಎಕ್ಸ್‌ರೇನ ಒಂಚೂರು ನೋಡುತ್ತೀಯ. ಇಲ್ಲಿ ಕಾಣುತ್ತಿದೆಯಲ್ಲ, ಈ ಗೀಟು ಅದು ಸೀಳಿದ ಮೂಳೆಯ ಗುರುತು ಹೌದಾ?’ ಎಂದು ಕೇಳುತ್ತೇನೆ. ಆತ ಈ ಎಕ್ಸ್ ರೇಯನ್ನು ನೋಡಬೇಕೆನ್ನುವ ಯಾವ ಒತ್ತಾಯ ಅಥವಾ ಜವಾಬ್ದಾರಿ ಅವನಿಗೆ ಇಲ್ಲ. ಆತ ಸುಮ್ಮನೆ ನನ್ನ ಮೇಲಿನ ಸ್ನೇಹದಿಂದ ಈ ಎಕ್ಸ್‌ರೇಯನ್ನು ಒಮ್ಮೆ ನೋಡುತ್ತಾನೆ, ನೋಡಿ ‘ಇಲ್ಲ ಗುರು, ಅದು ಸೀಳಲ್ಲ. ಸುಮ್ಮನೆ ಮನೆಗೆ ಕಳಿಸು. ಇನ್ನೂ ಜಾಸ್ತಿ ನೋವಾದರೆ ಆತನನ್ನು ಬಂದು ನನ್ನ ಕ್ಲಿನಿಕ್ಕಿನಲ್ಲಿ ನೋಡಲಿಕ್ಕೆ ಹೇಳು’ ಎಮ್ದು ಹೇಳುತ್ತಾನೆ. ನನ್ನ ಆತ್ಮವಿಶ್ವಾಸ ಹೆಚ್ಚುತ್ತದೆ. ನಾನು ಅವನನ್ನು ‘ಹೀಗೆ ಈ ಎಕ್ಸ್‌ರೇಯನ್ನು ಆರ್ಥೊಪೆಡಿಕ್ ಸರ್ಜನ್ನು ನೋಡಿದ್ದಾನೆ. ಆತನೂ ಇದು ಫ್ರಾಕ್ಚರ್ ಅಲ್ಲ ಎಂತ ಹೇಳಿದ್ದಾನೆ ಎಂದು ಹೇಳಿ ಅವನಿಗೆ ಧೈರ್ಯ ಹೇಳಿ ಮನೆಗೆ ಕಳಿಸುತ್ತೇನೆ. ಈ ಆರ್ತೊಪೆಡಿಕ್ ಸರ್ಜನ್ನಿನ ಮೇಲೆ ನನಗೆ ನಂಬಿಕೆಯಿಲ್ಲದಿದ್ದರೆ ನನ್ನ ಪರಿಣಿತಿಯ ಮೇಲಿರುವ ನನ್ನ ಆತ್ಮವಿಶ್ವಾಸವೇ ನನಗೆ ಶ್ರೀರಕ್ಷೆ.
ಇಲ್ಲಿ ನೋಡಿ. ನಾನು ಮತ್ತು ಆರ್ಥೊಪೆಡಿಕ್ ಸರ್ಜನ್ ಇಬ್ಬರೂ ರೇಡಿಯಾಲಜಿಸ್ಟಗಳಲ್ಲ. ಅಂದರೆ, ಈ ಎಕ್ಸ್ ರೇಗಳನ್ನು ನೋಡುವ ಪರಿಣಿತಿ ಇಬ್ಬರಲ್ಲೂ ಒಂದೇ ಮಟ್ಟದಲ್ಲಿ ಇದೆ. ನಿಜವಾಗಿ ಹೇಳಬೇಕೆಂದರೆ, ಮೂಳೆ ಮತ್ತು ಕೀಲಿನ ಡಾಕ್ಟರು ಮುರಿದ ಮೂಳೆಗಳ ಎಕ್ಸ್‌ರೇಯನ್ನು ಮಾತ್ರ ನೋಡುತ್ತಾನೆ. ನಾನು ಮುರಿದದ್ದು, ಮುರಿಯದೇ ಇರುವುದು ಎಲ್ಲ ತರದ ಎಕ್ಸ್ ರೇಯನ್ನೂ ನೋಡುವುದರಿಂದ ಈ ಸಣ್ಣ ಸಣ್ಣ ಫ್ರಾಕ್ಚರುಗಳನ್ನು ಗುರುತಿಸುವ ಪರಿಣತಿ ನನ್ನಲ್ಲಿ ಹೆಚ್ಚಾಗಿಯೇ ಇರಬೇಕು. ಆದರೂ ಆತ ಮೂಳೆ ಮತ್ತು ಕೀಲಿನ ಸ್ಪೆಷಲಿಸ್ಟಿನ ಪರಿಣಿತಿ ಬರೇ ಮೂಳೆ ಮತ್ತು ಕೀಲಿಗೆ ಮಾತ್ರ ಸ್ಟ್ರೀಂಲೈನ್ ಆಗಿ ಆತ ನನಗಿಂತ ಹೆಚ್ಚಿನ ಪರಿಣಿತನಾಗುತ್ತಾನೆ.
ನಾನು ಮಾಡಿದ್ದು ಕರ್ಬ್ ಸೈಡಿಂಗ್. ಮನೆಯ ಕಾಂಪೌಂಡಿನೊಳಗೇ ನಿಂತು ಪಕ್ಕದ ಮನೆಯ ಕಾಂಪೌಂಡಿನೊಳಗೆ ನಿಂತ ನೆರೆಮನೆಯಾತನನ್ನು ಮಾತಾಡಿಸಿದ ಹಾಗೆ ಲೋಕಾಭಿರಾಮ ಅಷ್ಟೇ. ನಾನೂ ‘ಇರಲಿ’ಒಂದು ಮಾತು ಕೇಳಿದೆ. ಆತನೂ ಇಲ್ಲ ಎನ್ನದೇ ಹೇಳಿದ. ಆದರೆ, ಇಲ್ಲಿ ಫ್ರಾಕ್ಚರೇನಾದರೂ ಇದ್ದಲ್ಲಿ ತಪ್ಪು ನನ್ನದಾಗುತ್ತದೆ. ಆತನ ಹೆಸರು ಚಾರ್ಟಿನಲ್ಲಿ ಎಲ್ಲಿಯೂ ಇರುವುದಿಲ್ಲ. ಆದ್ದರಿಂದ ಅಂತಿಮ ನಿರ್ಣಯ ನನ್ನದೇ ಆಗುತ್ತದೆ.
* * *
ಈ ಕರ್ಬ್‌ಸೈಡಿಂಗ್‌ನ ಇನ್ನೊಂದು ಮುಖ ನನ್ನನ್ನು ನನ್ನ ಸಂಬಂಧಿಕರುಗಳು, ಮಿತ್ರರು ನನ್ನನ್ನು ಅವರ ಕಾಯಿಲೆಗಳ ಬಗ್ಗೆ ವೃತ್ತಿಪರ ಅಭಿಪ್ರಾಯವನ್ನು ಕೇಳುವುದು. ನಲವತ್ತುವರ್ಷದ ನನ್ನ ದೊಡ್ದಪ್ಪನ ಮಗನಿಗೋ, ನನ್ನ ಸ್ನೇಹಿತನಿಗೋ, ರಕ್ತದೊತ್ತಡ ಜಾಸ್ತಿ ಇದೆ ಎಂದು ಆತನ ಡಾಕ್ಟರು ಹೇಳಿ ಮಾತ್ರೆಯನ್ನೂ ಕೊಟ್ಟಿರುತ್ತಾರೆ. ‘ಇದೆಲ್ಲ ಎಂಥ ಬೀಪೀರಿ. ಅದೂ ಈ ವಯಸ್ಸಲ್ಲಿ. ನಿಮಗೆ ಮಾತ್ರೇನೂ ಬೇಡ, ಏನೂ ಬೇಡ. ಸುಮ್ಮನೇ ದಿನಾ ವಾಕಿಂಗ್ ಹೋಗ್ರೀ’ ಎಂದು ಇನ್ನೊಬ್ಬ ಡಾಕ್ಟರು ಅವನಿಗೆ ಹೇಳಿರುತ್ತಾರೆ. ಮಾತ್ರೆಬೇಡ ವಾಕಿಂಗ್ ಹೋಗಿ ಬೀಪಿಯನ್ನು ಕಮ್ಮಿ ಮಾಡಿಕೋತೀನಿ ಎಂದು ನಿರ್ಣಯಿಸಿದ ಈ ನನ್ನ ಬಂಧು ‘ಇರಲಿ, ನಾನು ಏನು ಹೇಳುತ್ತೇನೆ ನೋಡೋಣ’ ಎಂದು ತಿಳಕೊಳ್ಳಲು ನನಗೊಂದು ಇಮೈಲ್ ಅಥವಾ ಫೋನು ಮಾಡುತ್ತಾನೆ.. ಕೆಲವೊಮ್ಮೆ ಇಮೈಲಿನಲ್ಲಿ ಅವರ ಮೆಡಿಕಲ್ ರಿಪೋರ್ಟು ಕೂಡ ಬರುತ್ತದೆ. ನಾನು ಇದುವರೆವಿಗೂ ಇಂಥ ಇಮೈಲ್ ರಿಪೋರ್ಟುಗಳಿಗೆ ನನ್ನ ಅಭಿಪ್ರಾಯ ಕೊಡಲಾರೆ ಎಂದು ಹೇಳಿಲ್ಲ. ನನಗೆ ಗೊತ್ತಿದ್ದನ್ನು ನೇರವಾಗಿ ಹೇಳಿದ್ದೇನೆ. ಗೊತ್ತಿಲ್ಲವಾದದ್ದನ್ನು ನನ್ನ ವೃತ್ತಿಯ ಮಿತ್ರರನ್ನು ಕೇಳಿ ಹೇಳುತ್ತೇನೆ. ಅಥವಾ ಗೊತ್ತಿಲ್ಲ ಎಂದೇ ನೇರವಾಗಿ ಹೇಳಿರುತ್ತೇನೆ. ಕೆಲವೊಮ್ಮೆ ಮಧ್ಯರಾತ್ರಿಯಲ್ಲಿ ಫೋನು ಬರುತ್ತದೆ. ಇನು ಕೆಲವೊಮ್ಮೆ ಪಾರ್ಟಿಯಲ್ಲಿರುವಾಗ, ಮಕ್ಕಳ ಜತೆ ಸಿನೆಮಾ ನೋಡುತ್ತಿದ್ದಾಗ, ಹೀಗೆ ನನ್ನ ಅನೇಕ ಸ್ವಂತ ಕೆಲಸಗಳನ್ನು ಇಟ್ಟು ನಾನು ಈ ಫೋನುಗಳಿಗೆ ಉತ್ತರ ಕೊಟ್ಟಿದ್ದೇನೆ. ಇದು ನನ್ನ ಕೆಲಸದ ಒಂದು ಭಾಗ ಎಂದು ಬಿಟ್ಟು ಬೇರೇನೂ ತಿಳಿದಿಲ್ಲ. ಅಥವಾ ನಾನು ಹೀಗೆ ಮಾಡಿ ಯಾವುದೋ ಒಂದು ಜೀವವನ್ನು ಉಳಿಸುತ್ತಿದ್ದೇನೆ ಎಂಬ ಹುಂಬ ನಂಬಿಕೆಯೂ ನನಗಿಲ್ಲ.
ಆದರೆ, ಈ ನನ್ನ ಒಪೀನಿಯನ್ ಯಾವ ಮಟ್ಟದಲ್ಲಿ ಸ್ವೀಕೃತವಾಗುತ್ತದೆ ಎನ್ನುವುದು ಕೆಲವೊಮ್ಮೆ ಮುಜುಗರ ಕೊಡುವ ವಿಷಯ. ಬಹಳಷ್ಟು ಬಾರಿ ನನ್ನ ಈ ಪ್ರೊಫೆಷನಲ್ ಅಭಿಪ್ರಾಯ, ಇನ್ನೊಂದು ಒಪೀನಿಯನ್ ಮಾತ್ರ ಆಗುತ್ತದೆ. ಅದರ ಮೇಲೆ ತಮ್ಮ ನಿರ್ಣಯಗಳನ್ನು ಬದಲಿಸಿಕೊಳ್ಳುವವರು ಬಹಳ ಕಮ್ಮಿ ಮಂದಿ. ಮೇಲಿನ ಉದಾಹರಣೆಯಲ್ಲಿ ನನ್ನ ಈ ಮಿತ್ರನಿಗೆ ಮಾತ್ರಗಳ ಅವಶ್ಯಕತೆ ಜರೂರಾಗಿತ್ತು. ಆದರೆ, ಆತ ಮುಂಚೆಯೇ ಮಾತ್ರೆ ತೆಗೆದುಕೊಳ್ಳಬಾರದು ಎಂದು ನಿರ್ಣಯಿಸಿ ಅದನ್ನು ಪುಷ್ಟೀಕರಿಸಲು ನನ್ನ ಪ್ರೊಫೆಷನಲ್ ಅಭಿಪ್ರಾಯ ಕೇಳಿದ್ದ. ನಾನು ಮಾತ್ರೆ ತೆಗೆದುಕೊಳ್ಳಬೇಕು ಎಂದು ಹೇಳಿದಾಗ ಮಾರನೆಯ ದಿನದಿಂದ ನನ್ನ ಜತೆ ಮಾತಾಡುವುದನ್ನೇ ಬಿಟ್ಟುಬಿಟ್ಟ.
ಪ್ರಾಯಶಃ ಆ ಮಿತ್ರ ಇಂದಿಗೂ ಸರಿಯಾಗಿಯೇ ಇರಬಹುದು. ಅಥವಾ ವಾಕಿಂಗ್ ಮಾಡಿ ಬೀಪಿ ಕಮ್ಮಿ ಮಾಡಿಕೊಂಡಿಯೂ ಇರಬಹುದು. ಕೆಲವೊಮ್ಮೆ ವಿಷಯ ಇನ್ನೂ ಗಂಭೀರವಾಗಿರುತ್ತದೆ. ಒಮ್ಮೆ ಯಾರಿಗೋ ಆಂಜಿಯೋಗ್ರಾಮ್ ಮಾಡಿ ತಕ್ಶಣ ಬೈಪಾಸ್ ಮಾಡಬೇಕು ಎಂದು ಬೆಂಗಳೂರಿನ ಡಾಕ್ಟರು ಒಬ್ಬರು ಸರಿಯಾಗಿಯೇ ಹೇಳಿದ್ದರು. ಆ ಆಂಜಿಯೋಗ್ರಾಮಿನ ಸೀಡಿ ನನಗೆ ಕೊರಿಯರ‍್ನಲ್ಲಿ ಬಂತು. ನಾನು ಹೃದಯರೋಗ ತಜ್ಞನಲ್ಲವಾದ್ದರಿಂದ ನಾನು ನನ್ನ ಕಾರ್ಡಿಯಾಲಜಿಸ್ಟ್ ಮಿತ್ರನಿಗೆ ಈ ಸೀಡಿಯನ್ನು ಕೊರಿಯರ್ ಮಾಡಿ ಅಭಿಪ್ರಾಯ ಪಡಕೊಂಡು ‘ಹೌದು ಆ ಬೆಂಗಳೂರು ಡಾಕ್ಟರು ಸರಿಯಾಗಿಯೇ ಹೇಳಿದ್ದಾರೆ. ಬೈಪಾಸ್ ಆಗಬೇಕು.’ ಎಂದು ಹೇಳಿದೆ. ನಂತರ ನನಗೆ ಅವರಿಂದ ಉತ್ತರವೇ ಇಲ್ಲ. ಇದನ್ನು ಹೀಗೆಯೇ ಬಿಟ್ಟಲ್ಲಿ ಇವರಿಗೆ ತೊಂದರೆಯಾಗಬಹುದು ಎಂದು ನನಗೆ ಮನಸಲ್ಲಿ ಕೊರೆಯಹತ್ತಿತ್ತು. ಹೇಗೋ ಮಾಡಿ ಅವರಿಗೆ ಫೋನು ಮಾಡಿ ‘ನೀವು ಖಂಡಿತಾ ಬೈಪಾಸ್ ಮಾಡಿಸಿಕೊಳ್ಳಲೇ ಬೇಕು’ ಎಂದು ಅವರ ಮನವೊಲಿಸಬೇಕಾಗಿ ಬಂತು.
ಹೀಗೆ ಹಲವು ಇಮೈಲ್‌ಗಳು, ಫೋನುಗಳು ಬರುತ್ತಲೇ ಇರುತ್ತವೆ. ನಾನೂ ಉತ್ತರಿಸುತ್ತಲೇ ಇರುತ್ತೇನೆ. ನನಗೆ ನನ್ನ ವೃತ್ತಿಯ ಈ ಘಟ್ಟದಲ್ಲಿರುವ ನನ್ನ ಅಭಿಪ್ರಾಯವನ್ನು ಅವರು ಮನ್ನಿಸುತ್ತಾ ಇಲ್ಲವಲ್ಲ ಎಂದು ಬೇಸರ ಆಗುವುದೂ ನಿಂತುಹೋಗಿದೆ.
* * *
ನಾನು ಆ ಆರ್ಥೊಪೆಡಿಕ್ ಸರ್ಜನ್‌ನನ್ನು ಕರ್ಬ್‌ಸೈಡ್ ಮಾಡಿದ್ದಕ್ಕೂ ಇಲ್ಲಿ ನನ್ನ ಬಂಧುಮಿತ್ರರು ನನ್ನನ್ನು ಕರ್ಬಸೈಡ್ ಮಾಡಿರುವುದಕ್ಕೂ ಏನು ವ್ಯತ್ಯಾಸ. ನನ್ನ ಉದಾಹರಣೆಯಲ್ಲಿ ನಾನು ನನ್ನ ಮಿತ್ರನಾದ ಆರ್ಥೊಪೆಡಿಕ್ ಸರ್ಜನನ್ನು, ರಾತ್ರ್ರಿ ರೇಡಿಯಾಲಜಿಸ್ಟನ್ನು ಎಬ್ಬಿಸುವ ಮುಜುಗರವನ್ನು ತಪ್ಪಿಸಿಕೊಳ್ಳಲು ಅಭಿಪ್ರಾಯ ಕೇಳಿದರೆ, ಎರಡನೆಯ ಉದಾಹರಣೆಯಲ್ಲಿ ಒಬ್ಬ ರೋಗಿ ತನ್ನ ಡಾಕ್ಟರು ತನಗೆ ಮಾಡುತ್ತಿರುವ ಚಿಕಿತ್ಸೆ ಸರಿಯಿದೆಯೇ ಎಂದು ನನ್ನನ್ನು ಕೇಳಿದ್ದಾನೆ. ಇಬ್ಬರೂ ರೋಗಿಯ ಆರೈಕೆಯಲ್ಲಿ ನೇರವಾಗಿ ಪಾತ್ರವಹಿಸಿಲ್ಲ. ನಾನು ಆ ಮೂಳೆ ಮುರಿದಿರಬಹುದಾದ ರೋಗಿಯನ್ನು ಚಿಕಿತ್ಸಿತುತ್ತಿದ್ದರೆ, ನಾನು ಫೋನಿನಲ್ಲಿ ಮಾತಾಡುವ ನನ್ನ ಬಂಧುವಿನ ಡಾಕ್ಟರು ನನ್ನಿಂದ ಬಲು ದೂರವಿರುವ ಈ ನನ್ನ ಬಂಧುವಿನ ವೈದ್ಯಕೀಯ ದೇಖರೇಖಿಯನ್ನು ಮಾಡುತ್ತಿದ್ದಾನೆ. ಇಬ್ಬರೂ ನಮಗೆ ಗೊತ್ತಿದ್ದ ಪ್ರೊಫೆಶನಲ್ ಅಭಿಪ್ರಾಯವನ್ನು ಕೊಡುತ್ತಿದ್ದೇವೆ.
ನಾನು ಡಾಕ್ಟರಾದುದರಿಂದ, ನನಗೆ ಆ ಎಲುಬು ಕೀಲು ಡಾಕ್ಟರು ಕೊಟ್ಟ ಈ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದೂ ಬಿಡುವುದೂ ನನ್ನ ಪರಿಣಿತ ಆಯ್ಕೆ. ರೋಗಿಗಳ ಹಕ್ಕಿನ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ನನ್ನನ್ನು ಈ ಕರ್ಬ್‌ಸೈಡ್ ಮಾಡುವ ಅನೇಕ ಬಂದುಮಿತ್ರರು ನನ್ನ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವ ಮಟ್ಟಿನ ಪರಿಣಿತಿ ಹೊಂದಿದ್ದಾರೆ ಎನ್ನುವ ವಿಷಯದ ಬಗ್ಗೆ ನನಗೆ ಅನುಮಾನವಿದೆ. ಅವರ ನಿರ್ಣಯಕ್ಕೆ ಅವರಿಗೆ ಬಂಧುವಾದ ನಾನು,ವೈದ್ಯನಾಗಿಯೂ ಈ ಅವರ ನಿರ್ಣಯಕ್ಕೆ ನನ್ನ ಸಮ್ಮತಿಯಿದೆ ಎಂದು ಹೇಳಿದರೆ ಅವರಿಗೆ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ‘ಇಲ್ಲ ನಿಮ್ಮ ಡಾಕ್ಟರು ಮಾಡುತ್ತಿರುವುದು ತಪು, ಬೇರೆ ಡಾಕ್ಟರ ಹತ್ತಿರ ಹೋಗು’ ಎಂದು ನಾ ಹೇಳಿದರೆ ಬಹಳಷ್ಟು ಬಾರಿ ನನಗೆ ವಾಪಸ್ಸು ಫೋನ್ ಬರುವುದಿಲ್ಲ.
ಕಾಯಿಲೆಯೆನ್ನುವುದು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ದಿನಾ ರೋಗಿಗಳ ಜತೆಯಲ್ಲಿಯೇ ಇರುವ ನಾನು ಇದನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ. ಈ ಆತ್ಮ ವಿಶ್ವಾಸ ಕಮ್ಮಿಯಾದ ಸಂದರ್ಭದಲ್ಲಿ ಅದನ್ನು ಉತ್ತೇಜಿಸುವುದಕ್ಕಾಗಿ, ರೋಗಿ ಹೀಗೆ ಎಲ್ಲರನ್ನೂ ಅಭಿಪ್ರಾಯ ಕೇಳುತ್ತಲೇ ಇರುತ್ತಾನೆ. ಕ್ಯಾನ್ಸರ್ ಇದೆ. ಇನ್ನಾರು ತಿಂಗಳು ಬದುಕಬಹುದು ಎಂದು ತಿಳಕೊಂಡಾತನಿಗೆ ‘ಇನ್ನೊಬ್ಬ ಡಾಕ್ಟರ ಹತ್ತಿರ ಕೇಳಿಕೊಂಡು ಬಾ ಎಂದೋ ಅಥವಾ ಇನ್ನೊಂದಿಷ್ಟು ಪರೀಕ್ಷೆಗಳಾಗಬೇಕು’ ಎಂದು ಹೇಳಿದರೂ ಆತನಿಗೆ ಏನೋ ನಂಬಿಕೆ ಬರುತ್ತದೆ. ಏನಾದರೂ ಒಳ್ಳೆಯ ಸುದ್ದಿಯಿರಬಹುದಾ ಎಂದು ಯೋಚಿಸತೊಡಗುತ್ತಾನೆ. ಕುಂಡಲಿ ತೆಗೆಸುತ್ತಾನೆ, ಮನೆಯ ವಾಸ್ತುವನ್ನು ಬದಲಿಸುತ್ತಾನೆ. ಅನೇಕೆ ಜನರ ಅಭಿಪ್ರಾಯವನ್ನೂ ಕೇಳುತ್ತಾನೆ. ಹಾಗೆಯೇ ನನ್ನದೂ ಇಲ್ಲಿ ಒಂದು ಅಭಿಪ್ರಾಯ ಮಾತ್ರ.
ಯಾರಿಗೆ ಅಭಿಪ್ರಾಯ ಕೊಡಬೇಕು ಎನ್ನುವುದೂ ಕಷ್ಟವಾಗಿರುವುದರಿಂದ ನಾನು ಅದರ ಆ ಕಡೆಯ ರಿಯಾಕ್ಷನ್‌ಗಳನ್ನು ಯೋಚಿಸುವುದನ್ನು ಎಂದೋ ಬಿಟ್ಟಿಬಿಟ್ಟಿದ್ದೇನೆ. ನನಗೆ ತೀರ ಆಪ್ತರೂ ನನ್ನನ್ನು ಕೇಳಿ ‘ಇಲ್ಲಾ ಸಾರ್, ನಾಳೇನೇ ನೀವು ಹೇಳಿದ ಡಾಕ್ರ ಹತ್ತಿರ ಹೋಗಿ ಬಂದು ಬಿಡುತ್ತೇವೆ’ ಎಂದು ಹೇಳಿದ್ದೂ ಇದೆ. ನಾನೇ ಖುದ್ದಾಗಿ ನಿಂತು ಆ ಡಾಕ್ಟರಿಗೆ ನಮ್ಮ ಗುರುತಿನವರು ಬರುತ್ತಾರೆ ಎಂದೂ ಫೋನುಮಾಡಿ ಹೇಳಿರುತ್ತೇನೆ. ಆದರೂ ಹೋಗದೇ ಇದ್ದಾಗ, ನಾನು ಹೇಳಿದಾತ ಬರಲಿಲ್ಲವೆಂದು ಆ ಡಾಕ್ಟರಿಗೆ ಬೇಜಾರೂ ಇಲ್ಲ. ನನಗೂ ಇಲ್ಲ.
ಏಕೆಂದರೆ ಈ ಅಭಿಪ್ರಾಯಗಳೇ ಹಾಗೆ, ಪುಕ್ಕಟೆ ಸಿಕ್ಕವು, ಬಿದ್ದುಹೋಗುವ ಮಾತು.

Friday, November 13, 2009
ಐ ಲವ್ ಯು, ಮ್ಯಾನ್
ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಪ್ರಯಾಣಮಾಡುತ್ತಿದ್ದಾಗ ಒಂದು ಸಿನೆಮಾ ನೋಡಿದೆ. ಹೆಸರು ‘ಐ ಲವ್ ಯು, ಮ್ಯಾನ್.’ ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿಯೆಂದು ಕರೆಸಿಕೊಳ್ಳುವ ಈ ಸಿನೆಮಾದ ಪಾತ್ರಗಳು, ಅವುಗಳ ನಟನೆ ಮತ್ತು ಇಡೀ ಚಿತ್ರದ ಪ್ಲಾಟ್ ಕೂಡ ಬರೇ ಹಸಿಹಸಿಯಾಗಿತ್ತೆಂದು ಹೇಳಿ ಆ ಚಿತ್ರವನ್ನು ಬದಿಗಿಡಬಹುದಾಗಿತ್ತು. ಆದರೆ, ನಾಗರಿಕತೆಯ ಹೊಡೆತಕ್ಕೆ ಸಿಕ್ಕಿ ಗೊಂದಲದ ಗೂಡಾಗಿರುವ ನಮ್ಮ ಸಂಬಂಧಗಳ ಮತ್ತೊಂದು ಆಯಾಮವನ್ನು ಇಂಥ ಬಿ ಗ್ರೇಡ್ ಹಾಲಿವುಡ್ ಚಿತ್ರವೂ ಹೇಗೆ ಒರೆಗೆ ಹಚ್ಚುತ್ತದೆ ಎಂದು ಚಿತ್ರವನ್ನು ನೋಡಿದ ಮಲೆ ಕೊಂಚ ಸೋಜಿಗವಾಯಿತು.
ಮೊದಲೇ ಹೇಳಿದ ಹಾಗ ಇದೊಂದು ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿ. ವಿಮಾನದಲ್ಲಿ ಕಾಲಿರಿಕಿಸಿಕೊಂಡು ಕೂರಲಾಗದ ಕುರ್ಚಿಯಲ್ಲಿ ಕೂತು, ಐಫೋನಿನ ಸ್ಕ್ರೀನಿಗಿಂತಾ ಕೆಲವೊಂದು ಇಂಚು ದೊಡ್ದದಾಗಿರುವ ಮಾನಿಟರ‍್ನಲ್ಲಿ, ಇಯರ‍್ಫೋನುಗಳ ಮೂಲಕ ಯಾವ ಚಿತ್ರವನ್ನು ಆಸ್ವಾದಿಸುವುದಕ್ಕಂತೂ ಸಾಧ್ಯವಿಲ್ಲ. ನೋಡಬಹುದಷ್ಟೆ. ಹಾಗೆ ನೋಡಿದಾಗಲೂ ಈ ಚಿತ್ರ ಗಮನ ಸೆಳೆಯಲು ಕಾರಣವೇನು? ಗಮನಸೆಳೆಯುವುದು ಅನ್ನುವುದಕ್ಕಿಂತಾ ಹೀಗೆ ಒಂದು ಲೇಖನ ಬರೆಯುವುದಕ್ಕೆ ವಸ್ತುವನ್ನು ಕೊಡುವಂತಹ ಚಿತ್ರವಾ ಇದು ಎಂದು ಹಲವು ಅನುಮಾನಗಳ ನಡುವೆಯೇ ಬರೆಯುತ್ತಿದ್ದೇನೆ.
ಚಿತ್ರದ ಕತೆ ಬಹಳ ಸರಳ. ನಾಯಕ, ನಾಯಕಿಗೆ ಮದುವೆ ನಿಶ್ಚಯವಾಗಿರುತ್ತದೆ. ನಾಯಕಿ ತನ್ನ ಸಂತೋಷವನ್ನು ತನ್ನ ಗೆಳತಿಯರೊಡನೆ ಹೇಳಿಕೊಂಡು ತಿರುಗುತ್ತಾಳೆ ಮದುವೆಯಲ್ಲಿ, ಬ್ರೈಡ್ಸ್‌ಮೈಡ್ ಯಾರು, ರಿಂಗ್ ಬೇರರ್ ಯಾರು, ಮತ್ತಿನ್ಯಾರ‍್ಯಾರು ಇನ್ನೇನು ಕೆಲಸ ಮಾಡಬೇಕೆಂದು ಎಲ್ಲ ವಹಿಸಿಕೊಟ್ಟು ಸಂಭ್ರಮಿಸುತ್ತಾ ಇರುತ್ತಾಳೆ.
ಆದರೆ ಸಮಸ್ಯೆಯಿರುವುದು ನಮ್ಮ ನಾಯಕನಿಗೆ. ಆತನಿಗೆ ಒಬ್ಬನೇ ಒಬ್ಬನೂ ಸ್ನೇಹಿತನಿಲ್ಲ. ತನ್ನ ಮದುವೆಯ ಸಂಭ್ರಮವನ್ನು ಹೇಳಿಕೊಂಡು ಖುಷಿಪಡಲು ಯಾರೂ ಜತೆಗಿಲ್ಲ. ಕಡೆಯಪಕ್ಷ ತನ್ನ ಮದುವೆಗೆ ಬೆಸ್ಟ್‌ಮ್ಯಾನ್ ಆಗಲೂ ಆತನಿಗೆ ಯಾರೂ ಗೆಳೆಯರಿಲ್ಲ. ಆದರೆ ತನಗೆ ಯಾರೂ ಸ್ನೇಹಿತರೇ ಇಲ್ಲವೆಂಬ ಅರಿವು ಕೂಡ ಆಗುವುದು ಅವನ ಮದುವೆ ಗೊತ್ತಾದ ಮೇಲೆಯೇ. ಮದುವೆಯ ದಿನದ ಮುಂಚೆ ಯಾರಾದರೂ ಒಬ್ಬನನ್ನಾದರೂ ಗಂಡಸನ್ನು ಸ್ನೇಹಿತನನ್ನಾಗಿ ಜತೆಮಾಡಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದು ತನ್ನ ತಮ್ಮನ ಸಹಾಯ ಪಡಕೊಂಡು ತನಗೆ ಸ್ನೇಹಿತನೊಬ್ಬನನ್ನು ಹುಡುಕುತ್ತಾ ಹೋಗುತ್ತಾನೆ.
ಹೀಗೆ ಒಬ್ಬ ಗಂಡು ಇನ್ನೊಬ್ಬ ಗಂಡನ್ನು ಬರೇ ಸ್ನೇಹಿತನಾಗಿ ಪಡೆಯುವುದು ಈ ನಾಗರಿಕ ಸಮಾಜದಲ್ಲಿ ಎಷ್ಟು ಕಷ್ಟ ಎಂಬುದೇ ಚಿತ್ರದ ಕಥೆ. ನಾಯಕಿಯೂ ನಾಯಕನಿಗೆ ಹೋಗಿ ಒಬ್ಬ ಗಂಡು ಗೆಳೆಯನನ್ನು ಗುರುತುಮಾಡಿಕೊ ಎಂದು ದುಂಬಾಲುಬಿದ್ದನಂತರ ಮುಂದೆ ನಡೆಯುವುದೆಲ್ಲ ಪ್ರಹಸನಗಳು. ಮೊದಲು ಈತ ಯಾರೋ ಒಬ್ಬನನ್ನು ಭೇಟಿಮಾಡಿ ಆತನನ್ನು ರಾತ್ರಿ ಡಿನ್ನರಿಗೆಂದು ಕರಕೊಂಡು ಹೋಗುತ್ತಾನೆ. ವೈನು, ಡೈನಿನ ನಂತರ ಆ ಹೊಸ ಗೆಳೆಯ ಈ ತಮ್ಮ ಗೆಳೆತನಕ್ಕೆ ಬೇರೇನೋ ಆಯಾಮವನ್ನೇ ಹುಡುಕುತ್ತಾನೆ. ಗೆಳೆಯ ಪ್ರಿಯತಮನಾಗುತ್ತಾನೆ. ಮ್ಯಾನ್ ಡೇಟ್ ಅಲ್ಲಿಗೆ ಮುರಿದುಬೀಳುತ್ತದೆ.
ನಂತರ ಕೆಲವೊಂದು ಕ್ಲೀಶೆ ಎನ್ನುವ ನಿಯಮಗಳನ್ನು ಹಾಕಿಕೊಂಡು ತನ್ನ ಮೇಲೆ ಯಾವ ಲೈಂಗಿಕಾಕರ್ಷಣೆಯಿಲ್ಲದೇ ಬರೇ ಗೆಳೆಯನಾಗಿ ಉಳಿಯಬಲ್ಲ ಗೆಳೆಯನನ್ನು ಮಾತ್ರ ಹುಡುಕಲೆಂದು ಆತ ಪ್ರಯತ್ನ ಮಾಡುತ್ತಾನೆ. ಹಾಗೆ ಹುಡಕೊಂಡ ಗೆಳೆಯನನ್ನು ‘ಐ ಲವ್ ಯು, ಮ್ಯಾನ್’ ಎಂದು ಸಂಭೋದಿಸುವ ಧೈರ್ಯ ಮಾಡುತ್ತಾನೆ.
* * *
ನನ್ನ ಕೆಲಸದಲ್ಲಿ ನಾನು ಹೆಣ್ಣು ಗಂಡಿನ ಬೇಧವಿಲ್ಲದೇ ವೈದ್ಯಕೀಯ ಕಾರಣಕ್ಕಾಗಿ ರೋಗಿಗಳನ್ನು ಮೇಲಿಂದ ಕೆಳಗೆ ಬಟ್ಟೆ ಬಿಚ್ಚಿಸಿ ಪರೀಕ್ಷೆ ಮಾಡುತ್ತೇವೆ. ಹತ್ತುವರ್ಷಗಳ ಹಿಂದೆ ನಾನು ರೆಸಿಡೆನ್ಸಿ ಮಾಡುತ್ತಿರಬೇಕಾದರೆ ‘ಒಬ್ಬ ಗಂಡು ಡಾಕ್ಟರು ಹೆಣ್ಣು ರೋಗಿಯನ್ನು ಪರೀಕ್ಷೆ ಮಾಡಬೇಕಾದರೆ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ಹೆಂಗಸು ಇರುವುದು ಆ ಹೆಣ್ಣು ರೋಗಿಗೆ ಸಾಂತ್ವನವನ್ನು ಕೊಡುತ್ತದೆ ಮತ್ತೆ ಪರೀಕ್ಷೆ ಮಾಡುವ ಗಂಡು ವೈದ್ಯನಿಗೂ ಕೊಂಚ ಮುಜುಗರ ಕಡಿಮೆಯಾಗುತ್ತದೆ’ ಎಂಬ ನಂಬಿಕೆಯಿಂದ ಹೆಣ್ಣು ರೋಗಿಗಳಿಗೆ ಹೆಣ್ಣು ನರ್ಸನ್ನು ಶ್ಯಾಪರೋನ್ ಆಗಿ ಬಳಸುತ್ತಿದ್ದೆವು. ಇದು ಒಂದು ರೀತಿಯ ವೈದ್ಯಕೀಯ ರಂಗದಲ್ಲಿ ಇನ್ನೂ ನಡೆದುಬಂದಿರುವ ಸಂಪ್ರದಾಯ. ಆದರೆ, ಈಗ ಕಳೆದ ಒಂದೈದು ವರ್ಷಗಳಲ್ಲಿ ನನಗೆ ಗೊತ್ತಿಲ್ಲದೇ ಆಗಿರುವ ಬೆಳವಣಿಗೆಯೆಂದರೆ ಗಂಡಸರು ರೋಗಿಗಳಿಗೂ ನಾನು ಹರ್ನಿಯಾ ಪರೀಕ್ಷೆ ಮಾಡಬೇಕಾದರೆ ಅಥವಾ ಯಾವುದೇ ಗುಪ್ತಾಂಗಗಳ ಪರೀಕ್ಷೆ ಮಾಡಬೇಕಾದರೂ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದೇ ಇರುತ್ತದೆ. ಈ ವ್ಯಕ್ತಿ ಗಂಡಸೂ ಆಗಿರಬಹುದು, ಹೆಂಗಸೂ ಆಗಿರಬಹುದು. ಸಂಕೋಚ ಅಥವಾ ಖಾಸಗೀತನಗಳು ಲಿಂಗ ಪರಿಧಿಗಳನ್ನು ಮೀರಿದೆ. ಗಂಡು ಗಂಡನ್ನು ಪರೀಕ್ಷೆ ಮಾಡಲಿ, ಹೆಣ್ಣು ಹೆಣ್ಣನ್ನು ಪರೀಕ್ಷೆ ಮಾಡಲಿ ಯಾವಾಗ ಪ್ರೈವೆಸಿಯ ಲಗ್ಗೆ ಮೀರುತ್ತದೋ ಅಲ್ಲಿ ಇನ್ನೊಬ್ಬ ವ್ಯಕ್ತಿ- ರೋಗಿಗೂ ವೈದ್ಯನಿಗೂ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ.
ಆದರೆ, ಇಲ್ಲಿ ನಾವು ನಮಗೆ ಸಾಕ್ಷಿಗಳನ್ನು, ಶ್ಯಾಪರೋನ್‌ಗಳನ್ನು ಬಳಸುವುದು ಯಾರು ಯಾರಿಗೂ ಸಾಂತ್ವನ ಕೊಡಬೇಕಾಗುವ ಕಾರಣಕ್ಕಲ್ಲ ಎನ್ನುವುದು ವಿಷಾದದ ಸಂಗತಿ. ಇಲ್ಲಿ ಈ ವ್ಯಕ್ತಿ ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೀನಾ ಇಲ್ಲವಾ ಎನ್ನುವುದನು ಗಮನಿಸಲು ಮಾತ್ರ ಕಾವಲು ನಿಂತಿರುತ್ತಾನೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ನಾನು ಪರೀಕ್ಷೆ ಮಾಡುವ ರೋಗಿ ನಾಳೆ ಈ ವೈದ್ಯ ಅನವಶ್ಯಕವಾಗಿ ನನ್ನ ಮೇಲೆ ಕೈಯಾಡಿಸಿದ ಎಂದು ಕೋರ್ಟಿನಲ್ಲಿ ಕೇಸುಹಾಕಿದಲ್ಲಿ ‘ಅದು ಹಾಗಲ್ಲ. ಈ ವೈದ್ಯ ಮಾಡಿದ್ದು ಎಲ್ಲವೂ ವೈದ್ಯಕೀಯ ಪರೀಕ್ಷೆಯ ಪರಿಮಿತಿಯಿಒಳಗೇ ಇತ್ತು ಎಂದು ನನ್ನನ್ನು ಕೆಲವೊಂದು ಪುಂಡ ರೋಗಿಗಳಿಂದ ಕಾಪಾಡಲು ಮಾತ್ರ ನಿಂತಿರುತ್ತಾರೆ. ಇದು ವೈಸವರ್ಸಾ ಕೂಡ. ಕೆಲ ಪುಂಡ ಡಾಕ್ಟರುಗಳೂ ಇರುತ್ತಾರಲ್ಲವಾ?
ಹೆಂಗಸರು ‘ನನಗೆ ಲೇಡಿ ಡಾಕ್ಟರು ಬೇಕು’ ಎಂದು ಕೇಳಿದರೆ, ಆ ವಾಕ್ಯ ಅರ್ಥವನ್ನೇ ಕಳಕೊಂಡಿದೆ.
* * *
ಈ ಬಾರಿಯ ನೀನಾಸಮ್ ಶಿಬಿರದಲ್ಲಿ ತಿರುಗಾಟದ ನಾಟಕ ‘ವೆನಿಸಿನ ವ್ಯಾಪಾರ’ ದಲ್ಲಿ ಮುಖ್ಯಪಾತ್ರಗಳಾದ ಆಂಟೋನಿಯೋ ಮತ್ತು ಬೆಸಿನಿಯೋ ಮಧ್ಯೆ ಸಲಿಂಗ ಸಂಬಂಧ ಇರಬಹುದು ಎಂಬ ಒಂದು ಅಂಶವನ್ನು ನಾಟಕದಲ್ಲಿ ಸೂಚ್ಯವಾಗಿ ತೋರಿಸಿದ್ದು ಮಾರನೆಯ ದಿನ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶೇಕ್ಸ್‌ಪಿಯರನ ಕಾಲದಲ್ಲಿ ಸಲಿಂಗ ಸ್ನೇಹ, ಕಾಮ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಶೇಕ್ಸ್‌ಪಿಯರಿನ ನಾಟಕದ ಪಠ್ಯವನ್ನು ಈ ರೀತಿ ಅರ್ಥೈಸುವುದು,ವಿರೂಪಗೊಳಿಸುವುದು ತಪ್ಪು ಎಂಬ ಅಭಿಪ್ರಾಯವೂ ಅಲ್ಲಿ ಬಂತು. ಇದೇ ನಾಟಕವನ್ನು ಆಧರಿಸಿ ೨೦೦೬ರಲ್ಲಿ ಬಂದ ‘ಮರ್ಚಂಟ್ ಆಫ್ ವೆನಿಸ್’ ಚಲನಚಿತ್ರದಲ್ಲಿಯೂ ಈ ಸಲಿಂಗಿ ಸಂಬಂಧದ ಎಳೆ ಇನ್ನೂ ಗಾಢವಾಗಿಯೇ ಇದೆ. (ಶೇಕ್ಸ್ಪಿಯರನ ಕಾಲದಲ್ಲಿ ಪ್ಲೆಟೊನಿಕ್ ಗಂಡು, ಗಂಡಿನ ಸಂಬಂಧ (ಲೈಂಗಿಕಾರ್ಷಣೆಯಿಲ್ಲದ) ಬೇರೆಲ್ಲ ಸಂಬಂಧಗಳಿಗಿಂತ ಪವಿತ್ರವಾದದ್ದು. ಪಾತ್ರಗಳ ಹೊರಗಡೆಯ ನಡುವಳಿಕೆಯಿಂದ ನಾವು ಏನೇನೋ ಅರ್ಥೈಸಲಿಕ್ಕೆ ಹೋಗಬಾರದು ಎಂದು ಆ ಚಿತ್ರದ ನಿರ್ದೇಶಕ ಹೇಳಿಕೊಂಡಿದ್ದ.) ಆ ವಿಷಯ ಇರಲಿ, ನೀನಾಸಮ್‌ನ ಆ ಚರ್ಚೆಯಲ್ಲಿ ಭಾಗವಹಿಸಿದ್ದ ಹಿರಿಯರೊಬ್ಬರು ‘ಈ ಪಾತ್ರಗಳ ಸಲಿಂಗ ಸಂಬಂಧದ ಬಗ್ಗೆ ಅನವಶ್ಯಕವಾದ ಚರ್ಚೆ ಆಗುತ್ತಾ ಇದೆ ಎಂದು ಕಾಣಿಸುತ್ತದೆ. ನಾವೆಲ್ಲ ಹಳಿಯಲ್ಲಿ ಬೆಳೆದವರು. ನಮ್ಮ ಗೆಳೆಯರನ್ನು ಒಬ್ಬರನ್ನೊಬ್ಬರು ಮುಟ್ಟುತ್ತಿದ್ದೆವು, ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಹಾಕುತ್ತಿದ್ದೆವು. ಅಷ್ಟಕ್ಕೆಲ್ಲ ಸಲಿಂಗ ಸಂಬಂಧ ಎಂದು ತಿಳಕೊಂಡರೆ ಹೇಗೆ?’ ಎಂದು ಹೇಳಿದರು.
ಆ ಹಿರಿಯರ ಮಾತಿಗೆ ಗೌರವಯುತವಾಗಿಯೇ ಅಸಮ್ಮತಿಯನ್ನು ಸೂಚಿಸುವ ಕಾಲವಿದು.
ನಾಗರಿಕತೆಯ ಪರಿಣಾಮವೋ, ಅಥವಾ ಇನ್ನೇನೋ ‘ಕೇವಲ ಸ್ನೇಹ’ ಎನ್ನುವುದು ಬರೇ ಇದ್ದು ತೋರಿಸಲಾಗದು, ಅದನ್ನು ಪುರಾವೆ ಸಮೇತ ತೋರಿಸಬೇಕಾದ ಸಂದರ್ಭ ನಮ್ಮ ಮುಂದೆ ಇದೆ. ಕಾಲೇಜಿನಲ್ಲಿದ್ದಾಗ ಒಂದೇ ಮಂಚದಲ್ಲಿ ಮಲಗಿಯೂ ಉಳಕೊಳ್ಳುತ್ತಿದ್ದ ‘ಕೇವಲ ಸ್ನೇಹ’ ಈಗ ಅಷ್ಟು ಸುಭವಾಗಿ ದೊರೆಯುವುದಿಲ್ಲ. ಎಲ್ಲ ಸಂಬಂಧಗಳಿಗೂ ಲೈಂಗಿಕ ಲಗತ್ತಿತ್ತು ಈ ನಾಗರೀಕತೆ ಅಪ್ಪಟ ಗೆಳೆತನವನ್ನು ಹಾಳುಮಾಡಿಹಾಕಿದೆ. ಅದಕ್ಕೆ ಲಿಂಗ ಪರಿಧಿಯಿಲ್ಲ ಎನ್ನುವುದನ್ನು ನಾವು ಜಾಗರೂಕರಾಗಿ ಗಮನಿಸಬೇಕಾಗಿದೆ. ನಾಲ್ವರು ಒಂದೇ ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಬಹುದೇನೋ, ಇಬ್ಬರು ಮಾತ್ರ ಒಂದು ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಲಾಗದ (ಒಂದೇ ಲಿಂಗದ ಅಥವಾ ವಿರುದ್ಧಲಿಂಗದ) ಕಾಲ ಬಂದಿದೆ.
* * *
ಕೆಲವು ವರ್ಷಗಳ ಹಿಂದೆ ನನ್ನ ಜತೆಗೆ ಕೆಲಸ ಮಾಡುತ್ತಿದ್ದ ನನ್ನ ಜತೆಕೆಲಸಗಾರರೊಬ್ಬರು ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋದಾಗ ನಾನು ಅವರನ್ನು ಡ್ರಿಂಕಿಗೆಂದು ಆಹ್ವಾನಿಸಿದ್ದೆ. ಬಹಳ ಮುಜುಗರದಿಂದ ಬರಲು ಒಪ್ಪಿಕೊಂಡಿದ್ದರು. ಬರೇ ಜೋಡಿಗಳಿದ್ದ ರೆಸ್ಟುರೆಂಟಿನಲ್ಲಿ ನಾವಿಬ್ಬರೇ ಗಂಡಸರು. ಎರಡು ಡ್ರಿಂಕು, ಊಟವಾದ ನಂತರ ಮನೆಗೆ ಹೋಗುವ ಮೊದಲು ಆತ ‘ತಪ್ಪು ತಿಳಿಯಬೇಡ ಗುರು, this pretty much amounts to date.’ ಎಂದು ಹೇಳಿ ಹೋಗಿದ್ದರು.
ಪೇಯ, ಊಟ ಮತ್ತು ಮೂವಿ ಯೆಂದರೆ ಅದೊಂದು ಡೇಟ್ ಎನ್ನುವ ಕ್ಲೀಶೆಯ ಕಲ್ಪನೆಯನ್ನು ನಾಗರಿಕತೆ ನಮಗೆ ಕಲಿಸಿದೆ. ಪಕ್ಕಪಕ್ಕದಲ್ಲಿ ದರ್ಶಿನಿಯಲ್ಲಿ ಕೂತು ತಿಂಡಿ ತಿನ್ನುವ ಕಾಲ ಹೊರಟು ಹೋಗುತ್ತಾ ಇದೆ. ಮೂರು ವರ್ಷದ ಗಂಡು ಮಗು ಬೊಂಬೆಯ ಜತೆ ಆಟ ಆಡಿದರೆ, ಪಿಂಕುಪಿಂಕಾದ ಬಟ್ಟೆ ಹಾಕಿದರೆ ಹೌಹಾರಿಹೋಗುವ ಅಮ್ಮಂದಿರುಗಳನ್ನು ಈ ಕಾಲ ತಯ್ಯಾರು ಮಾಡುತ್ತಲಿದೆ. ‘ಬ್ರೇವ್ ಎನಫ್ ಟು ವೇರ್ ಪಿಂಕ್’ ಎನ್ನುವ ಟಿ ಶರ್ಟುಗಳು ಲೈಂಗಿಕ ಲಿಬರೇಷನ್ನಿನ ಚಿಹ್ನೆಗಳಾಗಿ ಕಾಣುತ್ತಲಿವೆ.
ಇಲ್ಲಿ ಹೆಂಗಸರೇ ಇನ್ನೂ ಕೊಂಚ ಅದೃಷ್ಟವಂತರು. ಮದುವೆ ಮನೆಯಲ್ಲಿ ಜತೆಗೆ ಕೂತು ಮೆಹಂದಿ ಮಾಡಿಕೊಳ್ಳಬಹುದು, ಪರಸ್ಪರರ ಉಗುರಿಗೆ ಬಣ್ನ ಹಚ್ಚಿಕೊಳ್ಳಬಹುದು, ಲಿಪ್‌ಸ್ಟಿಕ್ ಶೇಡನ್ನು ಬದಲಿಸಿಕೊಳ್ಳಬದು, ಕಿಟ್ಟಿಪಾರ್ಟಿಗಳಲ್ಲಿ ಮಾರ್ಟಿನಿಯ ಗ್ಲಾಸುಗಳನ್ನು ಲಿಪ್‌ಸ್ಟಿಕ್ ಗುರುತನ್ನು ಒರೆಸಿ ಬದಲಿಸಿಕೊಳ್ಳಬಹುದು. ಈಗಲೂ ಅವೆಲ್ಲ ಸಲ್ಲುತ್ತದೆ. ಹೆಣ್ಣು ನನ್ನ ಗರ್ಲ್‌ಫ್ರೆಂಡಿನ ಜತೆ ಶಾಪಿಂಗ್ ಹೋಗಿದ್ದೆ ಎಂದು ಹೇಳಿದರೆ ಅಲ್ಲಿ ಇನ್ನೂ ಆಕೆ ಸ್ನೇಹಿತಳಿದ್ದರೂ ಇರಬಹುದು ಎಂಬ ಅನುಮಾನ ಕೊಂಚವಾದರೂ ಉಳಕೊಳ್ಳುತ್ತದೆ, ಆದರೆ ಒಬ್ಬ ಗಂಡು ಯಾರನ್ನಾದರೂ ತೋರಿಸಿ ‘ಈತ ನನ್ನ ಬಾಯ್‌ಫ್ರೆಂಡ್ ‘ ಎಂದಲ್ಲಿ ಅಲ್ಲಿ ಲೈಂಗಿಕವಲ್ಲದ ಬೇರೆ ಯಾವ ಸಂಬಂಧಕ್ಕೂ ಆಸ್ಪದವೇ ಕೊಡದೇ ಇರುವ ಕಾಲ ಬಂದಿದೆ.
ನಾಲ್ಕು ಜನ ಗಂಡಸರು ಸೇರಿದ ತಕ್ಷಣ ಬಿಯರು ಕುಡಕೊಂಡು, ಇಲ್ಲವೇ ಎಲೆಯಡಿಕೆ ಹಾಕಿಕೊಂಡು ಡರ್ರಂತ ತೇಗಿಯೋ ಹೂಸಿಯೋ ಇರದೆ, ಇಸ್ಪೀಟಾಟದ ಕಾರ್ಡುಗಳನ್ನು ತೆಗೆಯದಿದ್ದರೆ ಅದು ಗಂಡು ಪ್ರಪಂಚದ ಬಾಂಡಿಂಗೇ ಅಲ್ಲ. ಹಾಗಿರುವಾಗ ಯಾರೇ ಒಬ್ಬ ತನ್ನ ಇನ್ನೊಬ್ಬ ಗೆಳೆಯನನ್ನು ಕಂಡು ‘ಐ ಲವ್ ಯು, ಮ್ಯಾನ್’ ಎಂದು ಯಾವ ಲೈಂಗಿಕ ಲೇಬಲ್ಲಿಲ್ಲದೇ ಹೇಳುವುದು ನಿಜಕ್ಕೂ ಧಾಡಸೀ ಕೆಲಸವೇ,

Saturday, October 31, 2009
ಹಸ್ತಪ್ರತಿ ಓದುವ ಕಷ್ಟ.
ನಿನ್ನ ಫ.ಂಗ್ ಸ್ಕ್ರಿಪ್ಟನ್ನು ನಾನು ಓದೊಲ್ಲ.
ಸಿಂಪಲ್ಲಾಗಿ ಹೇಳ್ತಿದೀನಿ. ನಿನ್ನ ಫ..ಂಗ್ ಕತೇನ ನಾ ಓದೊಲ್ಲ. ಅರ್ಥ ಆಗ್ತಾ ಇದೇ ತಾನೇ? ತಪ್ಪು ತಿಳೀಬೇಡ. ಇದನ್ನು ಪರ್ಸನಲ್ ಆಗಿ ತಗೋಬೇಡ.
ಇದು ಅನ್ಯಾಯ ಅಂತ ಅನ್ನಿಸ್ತಾ ಇದೆಯಾ? ನಿನ್ನ ಕತೆ ಓದಿ ನನ್ನ ಅಭಿಪ್ರಾಯಾ ಹೇಳಿದರೆ ಬದಲಿಗೆ ಏನು ಮಾಡ್ತೀಯಾ? ನನ್ನ ಕಾರ್ ಒರೆಸ್ತೀಯಾ? ನನ್ನದೊಂದು ಒಳ್ಳೇ ಫೋಟೋ ತೆಗೀತೀಯಾ, ನನ್ನ ಪರವಾಗಿ ಕೋರ್ಟಲ್ಲಿ ಲಾಯರಾಗಿ ವಾದ ಮಾಡ್ತೀಯಾ ಅಥವಾ ನನ್ನ ಗಾಲ್‌ಬ್ಲಾಡರ್ ತೆಗೆಯೋ ಡಾಕ್ಟರಾ ನೀನು-ಇಂಥ ಫ..ಂಗ್ ಕೆಲಸಾನೆಲ್ಲ ನಿನ್ನ ಹತ್ರಾನೇ ಇಟ್ಕೋ.
ನೀನೊಬ್ಬ ತುಂಬಾ ಸ್ವೀಟಾದ ಮನುಶ್ಯ. ನಾವಿಬ್ಬರೂ ಒಟ್ಟಿಗೆ ಕೂತು ಸಾಹಿತ್ಯದ ಬಗ್ಗೆ ಹರಟೋದು, ಚರ್ಚಿಸೋದೂ ನನಗೂ ಖುಷಿಯೇ.
ಆದರೆ, ನಿನ್ನ ಈ ಫ..ಂಗ್ ಕತೇನ ಮಾತ್ರ ನಾ ಓದೊಲ್ಲ.
* * *
ಇಷ್ಟು ಹೊತ್ತಿಗೆ ‘ಇವನೊಬ್ಬ ಆ..ಹೋಲ್.’ ಅಂತ ನೀನು ನನ್ನ ರೂಮಿಂದ ಹೊರಗೆ ಹೋಗಿರಬೇಕು. ಆದರೆ, ಒಬ್ಬ ಮನುಷ್ಯನಾಗಿ ಬೆಳೆಯೋಕೆ ನಿನಗೆ ಇಷ್ಟ ಇದ್ದಲ್ಲಿ ಮತ್ತು ನಾನಲ್ಲ ಆ..ಹೋಲ್. ನೀನು’ ಅಂತ ನೀನು ತಿಳಕೋಬೆಕಾದರೆ ಕೆಳಗಿದನ್ನು ಓದು.
ಇತ್ತೀಚೆಗೆ ನನಗೆ ಅಷ್ಟೇನೂ ಪರಿಚಯವಿರದ ಒಬ್ಬಾತ ಎಲ್ಲೋ ತಗಲ್ಹಾಕಿಕೊಂಡ. ಇದಕ್ಕೆ ಮುಂಚೆ ಆತನ ಜತೆ ನಾನು ಅಬ್ಬಬ್ಬಾ ಅಂದರೆ ಒಂದೆರಡು ಸಲ ಮಾತಾಡಿರಬಹುದು. ಆದರೆ, ಆತ ನನಗೆ ಗೊತ್ತಿರೋ ಪೈಕಿ ಯಾವುದೋ ಒಂದು ಹುಡುಗಿಯನ್ನು ಡೇಟ್ ಮಾಡ್ತಾ ಇದಾನೆ. ಒಂತರಾ ರೈಟ್ ಟೈಮ್ ಅಟ್ ದ ರೈಟ್ ಪ್ಲೇಸ್ ಅಂತಾರಲ್ಲ-ಹಂಗೆ ನಾನು ಸಿಗಿಹಾಕಿಕೊಂಡುಬಿಟ್ಟೆ. ಆತ ಕಳೆದ ಒಂದು ವರ್ಷದಿಂದ ಬರೆಯುತ್ತಿದ್ದ ಯಾವುದೋ ಒಂದು ಸ್ಕ್ರಿಪ್ಟಿನ ಎರಡು ಪುಟದ ‘ಸಾರಾಂಶ’ವನ್ನು ಬರಕೊಂಡು ಬಂದಿದ್ದ. ಅದನ್ನು ಆತ ಯಾವುದೋ ಸ್ಪರ್ಧೆಗೋ ಅಥವಾ ಕಾರ್ಯಕ್ರಮಕ್ಕೋ ಕಳಿಸುತ್ತಿದ್ದಾನಂತೆ-ಅದಕ್ಕೆ ಮುಂಚೆ ಅವನಿಗೊಂದು ಪ್ರೊಫೆಶನಲ್ ಅಭಿಪ್ರಾಯ ಬೇಕಿತ್ತು ಅಂತ ಕಾಣಿಸುತ್ತೆ.
ಸಾಮಾನ್ಯವಾಗಿ, ಇಂಥವರಿಗೆಲ್ಲ ನಾನು ಹೇಳೋದು ಒಂದೇ ನೆವ, ಅದು ಸತ್ಯ ಕೂಡ. ನನ್ನ ಆಫೀಸಿನಲ್ಲಿ ಎರಡು ಹೊರೆ ಚಿತ್ರಕತೆಗಳಿದ್ದಾವೆ. ಒಂದು ನನ್ನ ಆತ್ಮೀಯ ಸ್ನೇಹಿತರು ಬರೆದಿರೋ ಕಥೆ, ಚಿತ್ರಕಥೆಗಳು. ಇನ್ನೊಂದು ಹೊರೆ ನಾನು ಮಾಡಬೇಕಾಗಿರೋ ಸಿನೆಮಾಗಳಿಗೆಂದು ನನ್ನ ಏಜೆಂಟುಗಳು ಶಾರ್ಟ್‌ಲಿಸ್ಟ್ ಮಾಡಿಟ್ಟಿರೋ ಹಸ್ತಪ್ರತಿಗಳು ಮತ್ತು ಪುಸ್ತಕಗಳು. ನನ್ನ ಸ್ನೇಹಿತರು ಬರೆದಿರೋದನ್ನು ಓದೋಕೆ ತಗೊಂಡರೆ, ನನ್ನ ಕೆಲಸವನ್ನು ಉದಾಸೀನ ಮಾಡ್ತಾ ಇದೀನಿ ಅನ್ನಿಸುತ್ತೆ, ಹಾಗೇ ನನ್ನ ಏಜೆಂಟುಗಳ ಸ್ಕ್ರಿಪ್ಟ್ ಓದೋಣ ಅಂತ ತಗೊಂಡರೆ ನನ್ನ ಸ್ನೇಹಿತರನ್ನು ಉದಾಸೀನ ಮಾಡ್ತಾ ಇದೀನಿ ಅನ್ನಿಸುತ್ತೆ. ಇವೆರಡೂ ಬಿಟ್ಟು ನಾನು ನಿನ್ನ ಕತೆಯನ್ನು ಹೇಗೆ ಓದಲಿ, ಹೇಳು?
ಬಹಳ ಜನಕ್ಕೆ ಇದು ಅರ್ಥ ಆಗುತ್ತೆ. ಆದರೆ, ಕೆಲವು ಬಾರಿ ಈ ತರ ಗಿಲ್ಟೋ, ಅಥವಾ ಏನೋ ಒಂದು ಕಕ್ಕುಲಾತಿಗೆ ಬಿದ್ದು ತೀರ ಒರಟಾಗಿರೋಕೆ ಆಗದೇ ಈ ಕೆಲಸ ಮಾಡೋಕೆ ಒಪ್ಪಿಕೊಳ್ಳಬೇಕಾಗುತ್ತೆ. ಸರಿ ಓದೋಕೆ ಪ್ರಯತ್ನ ಮಾಡ್ತೇನೆ. ಇಷ್ಟ ಆಗದೇ ಇದ್ದರೆ ಹತ್ತು ಪುಟ ಓದಿ ಕೆಳಗಿಡ್ತೇನೆ, ಅಂತ ಮೊದಲೇ ಹೇಳಿರುತ್ತೇನೆ. ಇದರಿಂದ ಅವರಿಗೆ ಬಹಳ ಉತ್ಸಾಹ ಕಮ್ಮಿ ಏನೂ ಆಗೊಲ್ಲ. ಯಾಕೆಂದರೆ ಯಾರಿಗೂ ತಾವು ಬರೆದ ಕಥೆ ಕೇವಲ ಹತ್ತುಪುಟ ಓದಿಸಿಕೊಳ್ಳ್ಳುವಷ್ಟರಲ್ಲಿ ಬೋರು ಹೊಡೆಸಿಬಿಡಬಹುದು ಎಂದು ಅನಿಸಿರುವುದಿಲ್ಲ.
ಹಾಳಾಗಿಹೋಗಲಿ, ಇದು ಎರಡು ಪುಟದ್ದಲ್ಲವಾ? ಎಂದು ಓದಲು ಶುರುಮಾಡಿದೆ? ಎರಡು ಪುಟ ಓದಕ್ಕೆ ಎಷ್ಟು ಹೊತ್ತು ಬೇಕಾಯ್ತು ಗೊತ್ತಾ? ...ವಾರಗಟ್ಟಲೆ.
ಅದಕ್ಕೇ ಹೇಳೋದು ನಾನು ನಿನ್ನ ಫ..ಂಗ್ ಸ್ಕ್ರಿಪ್ಟನ್ನು ಓದೊಲ್ಲ ಅಂತ.
ಓದುತ್ತಿರುವುದು ಒಳ್ಳೇ ಬರವಣಿಗೆಯಾ ಅಂತ ಹೇಳೋದಕ್ಕೆ ಒಂದು ಪುಟವಾದರೂ ಓದಬೇಕು. ಕೆಟ್ಟದ್ದು ಅಂತ ಹೇಳೋಕೆ ಒಂದೇ ಸಾಲು ಓದಿದರೂ ಸಾಕು. ( ಬೈ ದ ವೇ, ನೀನು ಬರಹಗಾರ ಹೌದೋ ಅಲ್ಲವೋ ಅಂತ ತಿಳಕೊಳ್ಳೋಕೆ ಇದೊಂದೇ ಸಾಲು ಸಾಕು. ಇದನ್ನು ಒಪ್ಪಿಕೊಳ್ಳದಿದ್ದರೆ ನೀನು ಬರಹಗಾರನೇ ಅಲ್ಲ. ಯಾಕೆಂದರೆ ಎಲ್ಲ ಬರಹಗಾರರೂ ಓದುಗರಾಗಿರುತ್ತಾರೆ, ಅಲ್ಲವಾ)
ಹೋಗಲಿ, ಮೊದಲ ಪ್ರಯತ್ನ ಅಂತ ಕೊಂಚ ಗ್ರೇಸ್‌ಮಾರ್ಕು ಕೊಡಬಹುದು, ಆದರೆ ಒಂದೇ ಒಂದು ನೇರವಾದ ವಾಕ್ಯರಚನೆಯಿರದ, ಭಾಷೆ ಮತ್ತು ಕಥನದ ಗಂಧವೂ ಇಲ್ಲದ ಈ ಬರವಣಿಗೆಯನ್ನು ಹೇಗೆ ಸಹಿಸಿಕೊಳ್ಳುವುದು. ಈತನಿಗೆ ಕತೆ ಹೇಳುವುದು ಬಹಳ ಮುಖ್ಯ ನಿಜ. ಆದರೆ, ಅಲ್ಲಿ ಕನಿಷ್ಠ ಒಬ್ಬ ಪ್ರಾಮಾಣಿಕ ಓದುಗ ಅಪೇಕ್ಷಿಸುವ ಸ್ಪಷ್ಟತೆ, ಖಚಿತತೆಗಳೂ ಇಲ್ಲ. ನಾನು ಓದಿದ್ದು ಕೆಲವು ಘಟನೆಗಳಷ್ಟೇ. ಎಲ್ಲೋ ಕೆಲವು ಒಂದಕ್ಕೊಂದು ಪೋಣಿಸಿದಂತಿದ್ದವು, ಪಾತ್ರಗಳು ದಿಕ್ಕುದೆಸೆಯಿಲ್ಲದೇ ಸುಮ್ಮನೇ ಓಡಾಡುತ್ತವೆ, ಇದ್ದಕ್ಕಿದ್ದಂತೆ ಮಾಯವಾಗಿಬಿಡುತ್ತವೆ, ಮತ್ತೆ ಪ್ರತ್ಯಕ್ಷವಾಗುತ್ತವೆ, ಬದುಕಿನ ಗತಿಯೇ ಬದಲಾಗುವ ನಿರ್ಣಯಗಳನ್ನು ಏಕ್‌ದಂ ತೆಗೆದುಕೊಳ್ಳುತ್ತವೆ. ಯಾವುದೋ ತಿನಿಸಿನ ವಾಸನೆ ಮತ್ತು ನವಿರನ್ನು ಇಡೀ ಅರ್ಧ ಪ್ಯಾರಾ ಬರೆದಿದ್ದ, ಆದರೆ ಅಂತ್ಯ ಮಾತ್ರ ಒಂದು ಸಣ್ಣ ವಾಕ್ಯ. ನಾಯಕ ಸಾಯುತ್ತಾನೆಂದು ಎಲ್ಲೂ ಬರೆದುಕೂಡ ಇಲ್ಲ. ಒಂದು ಸೀನಿನಲ್ಲಿ ಆತ ಇದ್ದಾನೆ, ಮುಂದಿನ ವಾಕ್ಯದಲ್ಲಿ ಅವನ ಅಂತ್ಯಕ್ರಿಯೆಯಲ್ಲಿಯ ಜನಗಳ ಬಗ್ಗೆ ಬರೀತಾನೆ. ಅಬ್ಬಬ್ಬಬ್ಬ. ಹಿಂಗೇ ಹೇಳ್ತಾ ಹೋಗಬಹುದು.
ನಮ್ಮ ಸ್ಕ್ರಿಪ್ಟ್ ಬರಿಯೋ ಮಂದಿ ಬಗ್ಗೆ ನೀನು ತಿಳಕೋಬೇಕಾದ ಕಹಿಯಾದ ಸತ್ಯವೊಂದಿದೆ. ಬಹಳ ಜನಕ್ಕೆ ಈ ಸ್ಕ್ರಿಪ್ಟ್ ಬರೆಯೋದು ಬರವಣಿಗೆ ಅಂತ ಅನ್ನಿಸಿಯೇ ಇಲ್ಲ. ಒಂದು ಕೂಲಾಗಿರೋ ಕತೆ ಇದ್ದರೆ ಅಷ್ಟೇ ಕೂಲಾಗಿರೋ ಸಿನೆಮಾ ಆಗುತ್ತೆ ಅಂತ ತಿಳ್ಕೋತಾರೆ. ಚಿತ್ರಕತೆ ಬರೆಯೋದು ಈ ಬಿಸಿನೆಸ್ಸಿಗೆ ಬರೋಕೆ ಅತಿ ಸುಲಭವಾದ ದಾರಿ, ಇದಕ್ಕೆ ಎಂಥ ತರಬೇತಿ, ಅರ್ಹತೆ, ಅಥವಾ ಸಿದ್ಧತೆಗಳೂ ಬೇಡ ಅಂತ ಬಹಳ ಜನ ತಿಳಕೊಂಡಿದಾರೆ. ಯಾರು ಏನು ಬೇಕಾದರೂ ಬರೀಬಹುದಲ್ವಾ? ಅದಕ್ಕೆ ಈಗ ಈ ವೃತ್ತಿಯಲ್ಲಿ ಪಳಗಿರೋರ ಬಗ್ಗೆ ಅವರಿಗೆ ಯಾವ ಮರ್ಯಾದೆಯೂ ಇಲ್ಲ. ಎಂಥದೋ ಒಂದು ಬರೆದು ನಿನ್ನ ಕೈಗಿಡುತ್ತಾರೆ.
ಸರಿ ನಾನು ಬಹಳ ಹಿಂಸೆಯಿಂದ ಓದಿದೆ. ಅದರ ಬಗ್ಗೆ ಏನಾದರೂ ಒಳ್ಳೇದನ್ನು ಹೇಳಬೇಕು ಅಂತ ಬಹಳ ಕಷ್ಟ ಪಟ್ಟೆ, ಆದರೆ ಒಂದು ತಿಳಕೋ ಇಂತ ಬರವಣಿಗೆಗಳ ಬಗ್ಗೆ ಪಾಸಿಟಿವ್ ಆಗಿ ಹೇಳೋದು ಬರೇ ಸುಳ್ಳಷ್ಟೇ ಅಲ್ಲ, ಅತಿ ಪಾಪದ ಕೆಲಸ ಅದು. ಕೆಟ್ಟ ಬರವಣಿಗೆಯನ್ನು ಪ್ರೋತ್ಸಾಹಿಸೋದು ಬಹಳ ಕ್ರೂರವಾದ ಕೆಲಸ, ಇರಲಿ. ಆದರೆ, ಒಬ್ಬ ನಿಜವಾದ ಬರಹಗಾರನಿಗೆ ಬರೆಯಬೇಡ ಎಂದು ಯಾರೂ ತಡೆದು ನಿಲ್ಲಿಸಲಾರರು. ಯಾರೂ ಎಂದೂ ಎದೆಗುಂದಿಸಲಾರರು. ನೀನು ಬರಹಗಾರನಲ್ಲ ಅಂತ ನಾನು ನಿನಗೆ ಕನ್‌ವಿನ್ಸ್ ಮಾಡಬಲ್ಲನಾದರೆ ನೀನು ನಿಜಕ್ಕೂ ಬರಹಗಾರನೇ ಅಲ್ಲ. ನೀನು ನಿಜಕ್ಕೂ ನನ್ನ ಮಾತಿಂದ ಕನ್‌ವಿನ್ಸ್ ಆಗಿ ಬರೆಯುವುದನ್ನು ಬಿಟ್ಟುಬಿಟ್ಟರೆ ನಾನು ನಿನಗೆ ಒಂದು ದೊಡ್ಡ ಉಪಕಾರ ಮಾಡಿದ್ದೀನಿ ಅಂತ ತಿಳಕೋ. ಯಾಕೆಂದರೆ, ಬರವಣಿಗೆ ಬಿಟ್ಟು ನಿನ್ನ ಬೇರೆ ಯಾವ ಪ್ರತಿಭೆ ಇದೆಯೋ ಅದನ್ನು ಹುಡುಕಿಕೊಂಡು ಹೋಗ್ತೀಯ. ಎಲ್ಲರಿಗೂ ಏನಾದರೂ ಒಂದು ವಿಶೇಷವಾದ ಪ್ರತಿಭೆ ಇದ್ದೇ ಇರುತ್ತೆ. ಅದೃಷ್ಟವಂತರಿಗೆ ಅದೇನು ಅಂತ ಬಹಳ ಬೇಗ ಗೊತ್ತಾಗುತ್ತೆ. ನತದೃಷ್ಟರು ಇಂಥ ಹೊಲಸನ್ನು ಬರೆದು, ಬರೆದು ನನ್ನಂಥವರಿಗೆ ಓದು ಅಂತ ತಂದು ಕೊಡ್ತಾ ಇರ್ತಾರೆ.
ಹಾಳಾಗಿಹೋಗಲಿ ಅಂತ ಓದಿದರೆ ಈತ ಇದರ ಬಗ್ಗೆ ನಿಮ್ಮ ಪ್ರಾಮಾಣಿಕ ಅಭಿಪ್ರಾಯ ಹೇಳಿ ಅಂತ ಬೇರೆ ಬಲವಂತ ಮಾಡಿದ್ದ. ಅವನ ಸ್ನೇಹಿತರ ಅಭಿಪ್ರಾಯದಿಂದ ಆತನಿಗೆ ಸಮಾಧಾನವಾಗಿರಲಿಲ್ಲ. ಅವರು ಸುಮ್ಮಸುಮ್ಮನೆ ‘ಎಲ್ಲ ಚೆನ್ನಾಗಿದೆ’ ಅಂತ ಹೇಳ್ತಿದಾರೆ ಅಂತ ಅವನಿಗನಿಸಿತ್ತಂತೆ. ಅವನಿಗೆ ಪ್ರಾಮಾಣಿಕ ವಿಮರ್ಶೆ ಬೇಕಿತ್ತಂತೆ. ಯಾರಿಗೂ ಪ್ರಾಮಾಣಿಕ ವಿಮರ್ಶೆ ಬೇಡಪ್ಪ. ಇಂಥವರಿಗೆ ಏನು ಬೇಕು ಅಂದರೆ ‘ಇಲ್ಲಿ ಇನ್ನೊಂದು ಚೂರು ಚೆನ್ನಾಗಿರ್ಬೇಕಾಗಿತ್ತು, ಇದು ನನಗಿಷ್ಯವಾಗಲಿಲ್ಲ’ ಅಂತ ನಯವಾಗಿ ಬಯ್ದಹಾಗೆ ಮಾಡಿ ಆದರೂ ಒಟ್ಟಾರೆ ಚೆನ್ನಾಗಿದೆ ಅಂತ ಬೆನ್ನುತಟ್ಟಿ ಪ್ರಾಮಾಣಿಕತೆಯ ನಾಟಕ ಆಡಬೇಕು. ಇವರಿಗೆ ಯಾವಾಗಲೂ ಏನು ಬೇಕು? ಪ್ರೋತ್ಸಾಹ.
ಇಂಥ ಕೆಟ್ಟ ಬರವಣಿಗೋಸ್ಕರ ನಿನ್ನ ಬದುಕಿನ ಒಂದು ವರ್ಷವನ್ನು ಹಾಳುಮಾಡಿಕೊಂಡೆ ಅಂತ ಯಾರಿಗಾದರೂ ಹೇಳೋದು ಎಷ್ಟು ಕಷ್ಟ ಅಂತ ನಿನಗೆ ಗೊತ್ತಿದೆಯಾ? ಈ ತರ ವಿಮರ್ಶೆ ಬರೆಯೋಕೆ ಅಥವಾ ಹೇಳೋಕೆ ಎಷ್ಟು, ರಕ್ತ ಬೆವರು ಖರ್ಚು ಮಾಡಬೇಕು ಅನ್ನೋ ಐಡಿಯಾ ಆದರೂ ನಿನಗಿದೆಯಾ? ಇಲ್ಲಿ ಸತ್ಯವನ್ನೇ ಹೇಳಬೇಕು. ಆದರೆ ಅದು ಪ್ರಾಮಾಣಿಕವಾಗಿರಬೇಕು, ಕಹಿಯಾಗಿರಬಾರದು. ಅವನಿಗೆ ಬರೆದ ಫ..ಂಗ್ ಇ-ಮೈಲನ್ನು ನಾನು ನನ್ನ ಕಳೆದ ಸಿನೆಮಾದ ಸ್ಕ್ರಿಪ್ಟಿಗಿಂತಾ ಹೆಚ್ಚು ಆಸ್ಥೆಯಿಂದ ತಿದ್ದಿದೆ.
ನನ್ನ ಮೊದಲ ಡ್ರಾಫ್ಟ್ ತೀರ ಹಾಸ್ಯಾಸ್ಪದವಾಗಿತ್ತು. ಪ್ರತಿಯೊಂದಕ್ಕೂ ಸ್ಪಷ್ಟವಾಗಿ ಟಿಪ್ಪಣಿಗಳನ್ನು ಮಾಡಿಕೊಂಡಿದ್ದೆ. ನಂತರ ನೋಡಿದರೆ, ಅವನ ಎರಡು ಪ್ಯಾರಾದ ಬಗ್ಗೆ ನಾನು ಮೂರು ಪುಟ ಬರೆದಿದ್ದೆ. ಅದನ್ನು ಎಸೆದೆ. ಮತ್ತೆ ಮುಗಿಸಿದಾಗ ನೋಡಿದೆ. ಚಿಕ್ಕದಾಗಿ, ಚೊಕ್ಕದಾಗಿ, ಸ್ಪಷ್ಟವಾಗಿ ಬರೆದಿದ್ದೆ ಆದರೆ ನನ್ನ ಉತ್ತರ ನನಗೇ ನಾಚಿಕೆಯಾಗುವಷ್ಟು ಸಪ್ಪೆಯಾಗಿತ್ತು, ಮೆತ್ತಗಿತ್ತು. ನನ್ನ ಪಾಯಿಂಟಿದ್ದಿದ್ದು ಇಷ್ಟೇ. ಎಲ್ಲ ಹೊಸಬರಂತೆ ನಿನಗೂ ನಿನ್ನ ಕತೆ ಹೇಳುವುದೇ, ಬರೆಯುವುದಕ್ಕಿಂತ ಮುಖ್ಯವಾಗಿದೆ. ಇದು ಹೇಗಪ್ಪ ಅಂದರೆ, ಕಾರಿಗೆ ಬೇಕಾದ ಇಂಜಿನ್ನು, ಇತರ ಬಿಡಿಭಾಗಗಳನ್ನು ಕೊಂಡುಕೊಂಡು ಕಾರನ್ನು ನಾನೇ ಜೋಡಿಸಿಬಿಡ್ತೀನಿ ಅಂತ ಹೋಗೋದು. ಮೊದಲು ಕಾರಿನ ಮೆಕ್ಯಾನಿಕ್ಸ್ ಅನ್ನು ಕಲಿಯಬೇಕಲ್ಲವಾ? ಜೋಡಿಸ್ತಾ ಜೋಡಿಸ್ತಾ ಕಲೀತೀನಿ ಅಂತ ಹೋದರೆ ಓಡುವ ಕಾರನ್ನು ಕಟ್ಟೋಕೆ ಆಗುತ್ತಾ.
ನಿನಗೆ ನಿಜವಾಗಿಯೂ ಈ ಕಥೆಯ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದರೆ ಯಾರಾದರೂ ಒಬ್ಬ ಕಥೆಗಾರರಿಗೆ ಇದನು ಕೊಟ್ಟು ಬರೆಸು. ನೀನು ನಿಜವಾಗಿಯೂ ಬರಹಗಾರನಾಗಬೇಕು ಅಂತ ಆಸೆ ಇದ್ದರೆ, ಯಾವುದಾದರೂ ರೈಟಿಂಗ್ ಕೋರ್ಸುಗಳನ್ನು ತೆಗೆದುಕೋ, ಮತ್ತೆ ಸರಿಯಾಗಿ ಏನು ಬೇಕೋ ಅದನ್ನು ಓದು. ಎಂದು ಹೇಳಿ ಮುಗಿಸಿದೆ.
ಒಟ್ಟು ಏನಾಯಿತು ಕಡೆಗೆ? ಈ ಆಸಾಮಿ ಮತ್ತೆ ಅವನ ಗರ್ಲ್‌ಫ್ರ್ರೆಂಡ್‌ಗೆ ನಾನು ನನ್ನನ್ನು ಒಬ್ಬ ತೀರ ನೀಚ, ಆ.. ಹೋಲ್ ಅಂತ ಪ್ರೂವ್ ಮಾಡಿದ್ದಾಯಿತು. ಆತನ ಕಥೆಯನ್ನು ನನ್ನ ಕೈಗೆ ಕೊಟ್ಟಿದ ತಕ್ಷಣ ಅದನ್ನು ಓದದೇ ಸುಮ್ಮನೇ ಹಿಂದಿರುಗಿಸಿಬಿಟ್ಟಿದ್ದರೂ ಅವರು ನನ್ನನ್ನು ಕೊಳಕ, ಜಂಭದ ಕೋಳಿ ಅಂತ್ಲೇ ತಿಳಕೊಳ್ಳುತ್ತಿದ್ದರು. ಒಂದೇ ವ್ಯತ್ಯಾಸವೆಂದರೆ, ಬರೇ ಬೆನ್ನುತಟ್ಟಿಸಿಕೊಳ್ಳುವ ತವಕದಲ್ಲಿ ಮಾತ್ರ ಇರುವ ಒಬ್ಬನಿಗೆ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಹೇಳಿದ ನಂತರವೂ ಅವರುಗಳ ಹತ್ತಿರ ಅನ್ನಿಸಿಕೊಳ್ಳಬೇಕಾಗುತ್ತಿರಲಿಲ್ಲ. ಮುಖ್ಯವಾಗಿ, ಆ ಕೆಟ್ಟ ಸ್ಕ್ರಿಪ್ಟಿನ ಓದುವ ಭಯಂಕರ ಹಿಂಸೆಯಿಂದ ಮುಕ್ತನಾಗುತ್ತಿದ್ದೆ.
ಒಬ್ಬ ವೃತಿಪರ ಬರಹಗಾರನಿಗೆ ಈ ರೀತಿ ಹಸ್ತಪ್ರತಿಯನ್ನು ಕೊಟ್ಟು ಓದಿಸುವುದಕ್ಕೆ ನಿನಗೆ ಯಾವುದೇ ಹಕ್ಕಿಲ್ಲ. ಇದೇನು ಮಹಾ ಕೆಲಸ, ಎರಡು ಪುಟವಷ್ಟೇ ಅಲ್ಲವಾ ಅಂತ ನೀನಂದಕೊಳ್ಳುವುದು ತಪ್ಪು. ಒಂದು ವಿಷಯ ಸ್ಪಷ್ಟವಾಗಿರಲಿ-ಒಬ್ಬ ಸೀನಿಯರ್ ಬರಹಗಾರನಿಗೆ ನೀನು ನಿನ್ನ ಬರಹವನ್ನು ಓದಿ ಅವರ ಅಭಿಪ್ರಾಯ ಕೇಳುತ್ತಿರುವುದರಿಂದ ಬರೇ ಅವರ ಎರಡು ಗಂಟೆಯನ್ನಷ್ಟು ಮಾತ್ರ ನೀನು ಕೇಳುತ್ತಿಲ್ಲ. ಅವರ ವರ್ಷಗಟ್ತಲೆ ಓದಿದ ಅನುಭವ, ಜ್ಞಾನ ಮತ್ತು ಅವರ ಕಲೆಯನ್ನು ಹಂಚಿಕೋ ಅಂತ ಕೇಳ್ತಾ ಇದೀಯ, ಇದು ನಿನ್ನ ತಲೆಯಲ್ಲಿರಲಿ. ನಿನಗೊಬ್ಬ ಪೇಂಟರ್ ಸ್ನೇಹಿತನಿದ್ದರೆ ಅವನ ಬಿಡುವಿನ ಅವಧಿಯಲ್ಲಿ ಬಂದು ನಿನ್ನ ಮನೆಯ ರೂಮೊಂದನ್ನು ಪೇಯಿಂಟ್ ಮಾಡಿಕೊಡುತ್ತೀಯ ಎಂದು ಕೇಳಿದಹಾಗೆ. ಎರಡಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ.
ಪ್ಯಾಬ್ಲೊ ಪಿಕಾಸೋನ ಬಗ್ಗೆ ಒಂದು ಒಳ್ಳೆಯ ಕತೆ ಇದೆ, ಕೇಳಿದ್ದೀಯಾ? ಯಾರೋ ಬಂದು ಪಿಕಾಸೋಗೆ ತನ್ನ ಕರ್ಚೀಫಿನ ಮೇಲೆ ಒಂದು ಸ್ಕೆಚ್ ಬರೆಯಲು ಕೇಳಿದರಂತೆ. ಪಿಕಾಸೋ ಚಕ್ಕಂತ ಒಂದು ಪೆನ್ನನ್ನು ತೆಗೆದವನೇ ಏನೋ ಬರೆದು ‘ಒಂದು ಮಿಲಿಯ ಡಾಲರುಗಳು’ ಎಂದನಂತೆ.
‘ಒಂದು ಮಿಲಿಯ ಡಾಲರ‍್ಗಳಾ? ಬರೆಯೋಕೆ ನಿಮಗೆ ಹಿಡಿದದ್ದು ಕೇವಲ ಮೂವತ್ತು ಸೆಕೆಂಡುಗಳು ಮಾತ್ರ’ ಎಂದನಂತೆ ಆ ವ್ಯಕ್ತಿ.
‘ಹೌದು, ಆದರೆ ಮೂವತ್ತು ಸೆಕೆಂಡುಗಳಲ್ಲಿ ಇದನ್ನು ಬರೆಯೋದನ್ನು ಕಲಿಯೋಕ್ಕೆ ನನಗೆ ಐವತ್ತು ವರ್ಷಗಳು ಬೇಕಾದವು’
ಒಬ್ಬ ಪ್ರೊಫೆಶನಲ್ ಬರಹಗಾರನಿಂದ ಪುಕ್ಕಟೆ ಅಭಿಪ್ರಾಯ ಪಡೆದುಕೊಳ್ಳುವ ನನ್ನ ಈ ಗೆಳೆಯನ ಹಾಗೆ ಈ ಮನುಷ್ಯನಿಗೂ ಪಿಕಾಸೊನಂತ ಕಲಾವಿದನಿಂದ ಏನನ್ನು ಕೇಳುತ್ತಿದ್ದೇನೆ ಎನ್ನುವ ಅರಿವೂ ಇರಲಿಲ್ಲ. ಓದೋದಕ್ಕೆ ಬರೇ ಬಿಡುವಿನ ಸಮಯ ಮಾತ್ರ ಬೇಕು ಅನ್ನೋ ಅಭಿಪ್ರಾಯ ನಿನಗಿದ್ದರೆ, ನಿನ್ನ ಈ ‘ಓದೋ’ ಗೆಳೆಯರನ್ನು ಓದೋದಕ್ಕೆ ಕೇಳಿಕೋ. ಯಾರಿಗ್ಗೊತ್ತು, ಇದನ್ನು ಓದಿ ಅವನಿಗೆ ಖುಷಿಯೂ ಆಗಬಹುದು. ನಿನ್ನ ಬಗ್ಗೆ ಆತನಿಗೆ ತೀರಾ ಗೌರವವೂ ಮೂಡಬಹುದು. ಅವರಿಗ್ಯಾರಾದರೂ ಈ ಸಿನೆಮಾರಂಗದಲಿ ಪರಿಚಯವಿದ್ದರೆ ನಿನ್ನ ಕತೆಯನ್ನಿಟ್ಟುಕೊಂಡು ಸಿನೆಮಾ ಕೂಡ ಮಾಡಬಹುದು. ಆದರೆ, ನನಗೆ ಕಾಟ ಕೊಡ್ಬೇಡ.
ನಿನ್ನ ಫ.ಂಗ್ ಸ್ಕ್ರಿಪ್ಟನ್ನು ನಾ ಓದೋದಿಲ್ಲ.
* * *
ಜಾನ್ ಓಲ್‌ಸನ್ ಎಂಬ ಹಾಲಿವುಡ್ಡಿನ ಚಿತ್ರಕಥೆ ಬರೆಯುವವ ಬರೆದ ಲೇಖನದ ಆಯ್ದ ಭಾಗಗಳಿವು. ಈತ ಬರೆದ ಚಿತ್ರಕಥೆ ‘ದಿ ಹಿಸ್ಟರಿ ಆಫ್ ವಯಲೆನ್ಸ್’ ಎಂಬ ಇತ್ತೀಚಿನ ಚಿತ್ರ ಅನೇಕ ಪ್ರಶಸ್ತಿಗಳನ್ನು ಪಡಕೊಂಡಿದೆ. ಹೊಸಬರಹಗಾರರು ಬರೆದು ಪಾಪವನ್ನೇನೂ ಮಾಡುತ್ತಿಲ್ಲವಲ್ಲ ಎಂದು ಬಹಳಷ್ಟು ಹೊಸಬರವಣಿಗೆಗಳಿಗೆಗಳನ್ನು ಪ್ರೋತ್ಸಾಹಿಸಿದ ಗೌರೀಶ ಕಾಯ್ಕಿಣಿ, ಮತ್ತು ಬರವಣಿಗೆಯನ್ನು ಹಸ್ತಪ್ರತಿಯ ಘಟ್ಟದಲ್ಲಿ ಓದಿ ಮೆಚ್ಚಿಗೆಯಾದಲ್ಲಿ ಕೇಳದೇ ಮುನ್ನುಡಿಯನ್ನೂ ಬರೆದುಕೊಡುತ್ತಿದ್ದ ಕೀರ್ತಿನಾಥ ಕುರ್ತಕೋಟಿಯವರ ಪರಿಚಯವಿರುವ ನಮಗೆ ಇಂಥ ಅಭಿಪ್ರಾಯಗಳು ಹೊಸದು.
ಆದರೆ, ಹಸ್ತಪ್ರತಿಯನ್ನು ಓದುವಾಗ ಇಂಥ ಅಭಿಪ್ರಾಯಗಳು ಬರುವುದಿಲ್ಲ ಎಂದು ಹೇಳುವುದು ಕೊಂಚಮಟ್ಟಿಗಾದರೂ ಅಪ್ರಾಮಾಣಿಕವಲ್ಲವೇ?

Wednesday, October 21, 2009
ಕೆಂಡಸಂಪಿಗೆಯ ಮರಣ
ಅಂತರ್ಜಾಲದ ಕನ್ನಡದ ತಾಣ ಕೆಂಡಸಂಪಿಗೆ ಅಕಾಲಿಕ ಮರಣವನ್ನಪ್ಪಿದೆ. ಇದ್ದಕ್ಕಿದ್ದಂತೆ ಈ ತಿಂಗಳ ಮೊದಲ ದಿನದಂದು ‘ಇನ್ನುಮುಂದೆ ಕೆಂಡಸಂಪಿಗೆ ಯ ಪ್ರಕಟಣೆಯನ್ನು ನಿಲ್ಲಿಸಿದ್ದೇವೆ, ಇದುವರೆವಿಗೂ ನಮ್ಮೊಂದಿಗೆ ಸಹಕರಿಸಿದ ಎಲ್ಲ ಬರಹಗಾರರಿಗೆ ಮತ್ತು ಓದುಗವರ್ಗಕ್ಕೆ ಧನ್ಯವಾದಗಳು’ ಎಂಬ ಒಂದು ಸಾಲಿನ ಓಬಿಚುಯರಿಯೊಂದಿಗೆ ಕೆಂಡಸಂಪಿಗೆ ತನ್ನ ಅಂತರ್ಜಾಲ ತಾಣವನ್ನು ಶಾಶ್ವತವಾಗಿ ಮುಚ್ಚಿದೆ. ಇನ್ನುಮುಂದೆ ದಿನಂಪ್ರತಿ ಈ ತಾಣವನ್ನು ನೋಡಹೋಗುತ್ತಿದ್ದ ಜಾಲತಾಣಿಗರಿಗೆಲ್ಲ ಏನೋ ಕಳಕೊಂಡ ಇರುಸುಮುರುಸು.
ಕನ್ನಡದ ಅಂತರ್ಜಾಲ ಓದುಗರಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದ್ದು ಕೆಂಡಸಂಪಿಗೆ. ವಿನ್ಯಾಸ, ವಸ್ತು, ಭಾಷೆ ಹಾಗೂ ಲಯದ ತಾಜಾತನದಿಂದ ಎಲ್ಲರ ಗಮನ ಸೆಳೆದಿತ್ತು. ಅನೇಕ ಹೊಸಬರಹಗಾರರನ್ನು ಹುಟ್ಟುಹಾಕಿದ್ದಷ್ಟೇ ಅಲ್ಲದೇ, ಅಂತರ್ಜಾಲವೆಂದರೆ ಮೂಗುಮುರಿಯುತ್ತಿದ್ದ ಅನೇಕ ಹಳೇಮಂದಿಯ ಕೈಯಲ್ಲಿಯೂ ಕೀಲಿಮಣೆ ಕೊಟ್ಟು ಕೆಲಸ ಮಾಡಿಸಿತು. ಎರಡು ವರ್ಷಗಳ ಕಾಲ ದಿನ ಬೆಳಗಾದರೆ ಕೆಂಡಸಂಪಿಗೆಯನ್ನು ಎದುರು ನೋಡುತ್ತಿದ್ದವರು ಎಷ್ಟೋ ಮಂದಿ. ಆದರೆ, ಈಗ ಏಕಾಏಕಿ ಮುಚ್ಚಿನಿಂತು ತನ್ನನ್ನು ನಂಬಿದ ಓದುಗ ಬಳಗಕ್ಕೆ ಬಹುದೊಡ್ಡ ನಿರಾಶೆಯನ್ನುಂಟುಮಾಡಿ ಹೊರಟುಹೋಗಿದೆ, ಕೆಂಡಸಂಪಿಗೆ.
ಅಂತರ್ಜಾಲದ ಪತ್ರಿಕೆಗಳ ವ್ಯಾಕರಣವನ್ನು ಚೆನ್ನಾಗಿ ಅರ್ಥಮಾಡಿಕೊಂಡೇ ತನ್ನ ಕೆಲಸವನ್ನು ಮಾಡುತ್ತಿತ್ತಂದಿತ್ತು, ಕೆಂಡಸಂಪಿಗೆಯ ಬಳಗ. ಒಂದಿಷ್ಟು ಸುದ್ದಿ, ಒಂದಷ್ಟು ಕತೆ, ಸುಂದರವಾದ ಕವನಗಳು, ಆತ್ಮಚರಿತ್ರೆ, ಪ್ರವಾಸಕಥಾನಕಗಳು, ಧಾರಾವಾಹಿ, ಕೊಂಚ ವಿಚಾರ, ಅಲ್ಲಲ್ಲಿ ಟಾಂಗುಗೊಡಿಸುವ ಬರಹಗಳು, ಬೇಕಿದ್ದಾಗ ಸುದ್ದಿಗೆ ಗುದ್ದುಕೊಡುವ ವಿವಾದಗಳು, ಚರ್ಚೆ, ಎಲ್ಲವೂ ಹದವಾಗಿ ಬೆರೆತಿದ್ದವು. (ಕೆಲವೊಮ್ಮೆ ಚರ್ಚೆ ಅತಿರೇಕವೆನಿಸಿದರೂ ಅಂತರ್ಜಾಲದ ಜಾಲತಾಣದ ಉಳಿಗಾವಿಗೆ ಇಂಥ ಚರ್ಚೆಗಳು ಅನಿವಾರ್ಯವೆಂಬುದನ್ನು ಇದರ ಸಂಪಾದಕವರ್ಗದವರು ಅರಿvದ್ದರೆಂದೇ ಈ ಮಾತನ್ನು ಹೇಳಬೇಕಾಗಿದೆ)
ಆದರೆ, ಈ ಕೆಂಡಸಂಪಿಗೆ ನಿಂತದ್ದೇಕೆ?
ಅಂತರ್ಜಾಲದಲ್ಲಿ ಕನ್ನಡದ ಇತಿಹಾಸ ಬಹಳ ಹಳೆಯದೇನಲ್ಲ. ನನಗೆ ಗೊತ್ತಿದ್ದಹಾಗೆ ಸಮಾಚಾರಪತ್ರಿಕೆಗಳಲ್ಲಿ ‘ಸಂಜೆವಾಣಿ’ ಮೊಟ್ಟಮೊದಲಬಾರಿಗೆ ತನ್ನ ಅಸ್ಮಿತೆಯನ್ನು ಅಂತರ್ಜಾಲದಲ್ಲಿ ಸ್ಥಾಪಿಸಿದ್ದು ಪ್ರಾಯಶಃ ೧೯೯೫-೧೯೯೬ರ ಸುಮಾರಿಗೆ. ಆ ಸಂದರ್ಭದಲ್ಲಿ ಅಲೊಂದು ಇಲ್ಲೊಂದು ಜಿಯೋಸಿಟಿ ಮತ್ತಿತರ ವೆಬ್‌ಸೈಟುಗಳಿಂದ ಕೊಂಚವೇ ಕೊಂಚ ಎರವಲು ಪಡಕೊಂಡು ನಡೆಸುತ್ತಿದ್ದ ಕೆಲವು ತಾಣಗಳು ತಮ್ಮ ಕೆಲಸವನ್ನು ಕುಂಟಿಕೊಂಡು ನಡೆಸುತ್ತಲೇನೋ ಇದ್ದವು. ನಂತರ ಅನೇಕ ದಿನಪತ್ರಿಕೆಗಳು ತಮ್ಮ ಮುದ್ರಿತ ಪತ್ರಿಕೆಯ ಅಂತರ್ಜಾಲ ಆವೃತ್ತಿಯನ್ನು ಜಾಲದಲ್ಲಿ ಪ್ರಕಟಿಸಿ ತಮ್ಮ ಓದುಗವರ್ಗವನ್ನು ಹಿಗ್ಗಿಸಿಕೊಳ್ಳುತ್ತಿದ್ದವು. ನಂತರ ಬಂದ ಕನ್ನಡಸಾಹಿತ್ಯ.ಕಾಮ್, ವಿಶ್ವಕನ್ನಡ.ಕಾಮ್, ಮುಂತಾದವುಗಳೂ ಆರಂಭದಲ್ಲಿ ವಿಶ್ವಾಸವನ್ನು ಮೂಡಿಸಿದ್ದಾದರೂ ನಂತರ ನೆಲಕಚ್ಚಿದ್ದಾವೆ. ಕನ್ನಡಸಾಹಿತ್ಯ.ಕಾಮ್ ಈಗ ಅಂತರ್ಜಾಲದ ವ್ಯಾಪ್ತಿಯ ಹೊರಗೆ ತನ್ನ ಕೆಲಸವನ್ನು ಮಾಡಿಕೊಂಡು ಬರುತ್ತಿದೆಯಾದರೂ ಅಂತರ್ಜಾಲದಲ್ಲಿ ಕನ್ನಡದ ಬೆಳವಣಿಗೆಗೆ ಲೈಬ್ರರಿಯ ಅಥವಾ ಪ್ರಮುಖ ಲೇಖಕರ ಬರಹಗಳ ಆರ್ಕೈವ್ ಆಗುವುದನ್ನು ಬಿಟ್ಟರೆ ಹೆಚ್ಚಿನ ಕೆಲಸವನ್ನು ಮಾಡಲು ಇಲ್ಲಿ ಸಾಧ್ಯವಾಗಿಲ್ಲ. ನಮ್ಮೆಲ್ಲರನ್ನೂ ಬೆಳೆಸಿದ ದಟ್ಸ್‌ಕನ್ನಡ.ಕಾಮ್‌ನ ಆದ್ಯತೆಗಳು ಈಗ ಸಂಪೂರ್ಣವಾಗಿ ಬೇರೆಯಾಗಿದೆ.
ಒಂದು ಪತ್ರಿಕೆ ನೆಲಕಚ್ಚುವುದರ ವಿಷಯದಲ್ಲಿ ಪತ್ರಿಕೆಯ ಆಡಳಿತವರ್ಗಕ್ಕೆ ಒಂದು ಹೊಣೆಗಾರಿಕೆ ಇರಬೇಕಲ್ಲವೇ? ಇಲ್ಲಿ ಹೊಣೆಗಾರಿಕೆಯೆಂದರೆ ಬರೇ ಆರ್ಥಿಕವಾದದ್ದಷ್ಟೇ ಅಲ್ಲ, ಸಾಂಸ್ಕೃತಿಕ ಜವಾಬ್ದಾರಿ ಎಷ್ಟಿರಬೇಕು? ಬರೇ ಬಾಟಮ್‌ಲೈನ್ ನೋಡುತ್ತಾ ಈ ಪತ್ರಿಕೆಯಿಂದ ನಮಗೆ ಲಾಭವಿಲ್ಲವೆಂದು ಇಡೀ ಪತ್ರಿಕೆಯನ್ನು ನಿಲ್ಲಿಸಿದರೆ ಅದನ್ನು ಓದುವ ವರ್ಗದ ಆಶಯಗಳನ್ನು ಬಲಿಕೊಟ್ಟಂತೆ. ಆದ್ದರಿಂದ ಒಂದು ಪತ್ರಿಕೆಯನ್ನು ಕಟ್ಟಿ ಬೆಳೆಸುತ್ತಿರುವಾಗ ಅದರ ವ್ಯವಸ್ಥಾಪಕ ಮಂಡಳಿ ಅದರ ಸೃಜನಶೀಲ ಸಂಪನ್ಮೂಲಗಳನ್ನು ಬೆಳೆಸುವುದರ ಜತೆಗೆ ಆ ಪತ್ರಿಕೆ ತನ್ನನ್ನು ತಾನು ಪೋಷಿಸಿಕೊಂಡು ಹೇಗೆ ಬೆಳೆಯಬಲ್ಲದೆನ್ನುವುದಕ್ಕೆ ರೂಪುರೇಷೆಗಳನ್ನು ಹಾಕಿಕೊಳ್ಳುವುದು ಬಹಳ ಅವಶ್ಯ. ಇಲ್ಲದಿದ್ದರೆ ಓದುಗವರ್ಗವನ್ನು ಬೆಳೆಸುವುದರ ಖುಷಿಯ ಜತೆಗೆ ಅದನ್ನು ಸಾಯಿಸುವುದರ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ.
ಕೆಂಡಸಂಪಿಗೆಯಂತ ಪತ್ರಿಕೆ ಶುರುವಾಗಿ ಬೆಳೆದಾಗ ಅದೊಂದು ಪತ್ರಿಕೆಯಾಗಿ ಉಳಿಯುವುದಿಲ್ಲ. ಒಂದು ಸಮುದಾಯದ ಆಶಯವಾಗುತ್ತದೆ. ಮುಖವಾಣಿಯಾಗುತ್ತದೆ. ತಾನೇ ಒಂದು ಸಮುದಾಯವಾಗುತ್ತದೆ. ತಾನೂ ಬೆಳೆಯುವುದರ ಜತೆಗೆ ತನ್ನನ್ನು ಬೆಳೆಸುತ್ತಿರುವ ಸಮುದಾಯವನ್ನೂ ಬೆಳೆಸುತ್ತದೆ.
ಹಾಗೆಯೇ ತಾನು ಸಾಯುವುದರ ಜತೆಗೆ ಈ ಸಮುದಾಯವನ್ನೂ ಅದರ ಆಶಯವನ್ನೂ ಸಾಯಿಸುತ್ತದೆ.
ಕನ್ನಡದ ಬಹಳಷ್ಟು ಲಿಟ್ ಮ್ಯಾಗಜೀನುಗಳು ಒಂದು ನಿರ್ದಿಷ್ಟ ಸಮುದಾಯದ ಮುಖವಾಣಿಯೆನ್ನುವುದು ಒಂದು ರೀತಿ ನಿಜ. ಎಲ್ಲವೂ ಸಮಷ್ಟಿಯ ಸಂಸ್ಕೃತಿ, ಸಾಹಿತ್ಯದ ಪೋಷಣೆಯ ಹೆಸರಲ್ಲೇ ಪ್ರಾರಂಭವಾದರೂ ಎಲ್ಲೋ ಒಂದು ಕಡೆ ಅವು ತಮ್ಮದೇ ಆದ ಒಂದು ಓದುಗವರ್ಗವನ್ನು ಸೃಷ್ಟಿಸಿಕೊಳ್ಳುತ್ತವೆ. ಹಾಗೆ ಸೃಷ್ಟಿಮಾಡಿದ ಓದುಗ ವರ್ಗಕ್ಕೆ ತಾನೇ ಬೆಳೆಸಿದ ಸಂವೇದನೆಯಿಂದಲೋ ಅಥವಾ ಅದೇ ಸಂವೇದನೆಯಿರುವ ಓದುಗರು ಮಾತ್ರ ಆ ಪತ್ರಿಕೆಗಳನ್ನು ಓದುತಾರೋ, ಓದುಗರೂ, ಪತ್ರಿಕೆಯೂ ಪರಸ್ಪರರ ಆಶಯಕ್ಕೆ ಧೋರಣೆಗೆ ಪರಸ್ಪರ ಪೂರಕವಾಗಿ ಕೆಲಸ ಮಾಡಿರುತ್ತಾರೆ. ಆ ಆಶಯಗಳು, ನಂಬಿಕೆಗಳು ತನ್ಮೂಲಕ ಒಂದು ಚಳುವಳಿಯೇನಾದರೂ ಸೃಷ್ಟಿಯಾಗಿದ್ದಲ್ಲಿ ಅವುಗಳೆಲ್ಲದರ ನಿರ್ಗಮನದ ಜತೆಗೆ ಆ ಪತ್ರಿಕೆಯ ಆಯಸ್ಸೂ ಮುಗಿದಿರುತ್ತದೆ. ನಂತರ ಪತ್ರಿಕೆ ಇರಬೇಕೆಂದು ಯಾರೂ ಕೇಳುವುದೂ ಇಲ್ಲ. ಮುಚ್ಚಿಹೋಯಿತೆಂದು ಯಾರೂ ದುಃಖಿಸುವುದೂ ಇಲ್ಲ. ಇದೊಂದು ಪತ್ರಿಕೆಯ ಸ್ವಾಭಾವಿಕ ಮರಣ. ಅಂದರೆ ಪ್ರತೀ ಪತ್ರಿಕೆಗೂ ಒಂದು ನಿರ್ದಿಷ್ಟ ಆಶಯವಿದೆ, ಆಯಸ್ಸಿದೆ ಎಂದು ನಂಬಿದ ಸಂಪನ್ಮೂಲ ವ್ಯಕ್ತಿಗಳಿರುವವರೆಗೆ ಅದರ ಸಾವೂ ಕೂಡ ಅರ್ಥಪೂರ್ಣವಾಗುತ್ತದೆ. ಅದರ ಬದುಕು ಮಾತ್ರ ಮುಖ್ಯವಾಗುತ್ತದೆ.
ಹಾಗೆಯೇ ಕೆಂಡಸಂಪಿಗೆಯೂ ಒಂದು ಸಮುದಾಯದ ಮುಖವಾಹಿನಿಯಾಗಿತ್ತೆಂಬುದನ್ನು ನಾವು ಗಮನದಲ್ಲಿದಬೇಕು. ಈ ಸಮುದಾಯ ಬಹುಸಂಖ್ಯಾತವೇನಲ್ಲ. ಬದಲಾದ ಜೀವನ ಶೈಲಿ, ಮೌಲ್ಯಗಳು, ಭೌಗೋಳಿಕ ರೇಖೆಯನ್ನು ಮೀರಿದ ಡಯಾಸ್ಪೊರಕ್ಕೆ ಹಾಗೆಯೇ ಎಲ್ಲದಕ್ಕೂ ಸಾಮಾನ್ಯವಾದ ನಮ್ಮ ಅವಸರ, ಧಾವಂತಕ್ಕೆ ಒಂದು ಅರ್ಥಪೂರ್ಣತೆಯನ್ನು ತಂದಿತ್ತು. ಹಾಗೆ ನೋಡಿದರೆ ಈ ಅಂತರ್ಜಾಲವೆನ್ನುವುದೇ ಒಂದು ಅವಸರದ ಓದಿಗೆ ಪ್ರಶಸ್ತವಾದ ತಾಣ. ಇಲ್ಲಿ ನಾವು ಅಂತರ್ಜಾಲವನ್ನು ಸರ್ಪ್ ಮಾಡುತ್ತೇವೆ, ಬ್ಲಾಗುಗಳನ್ನು ಸ್ಕ್ರೋಲಿಸುತ್ತೇವೆ. ಒಂದು ತಾಣದಿಂದ ಇನ್ನೊಂದು ತಾಣಕ್ಕೆ ಜಿಗಿಯುತ್ತೇವೆ. ನಮ್ಮ ಅಟೆಂಶನ್ ಸ್ಪಾನ್ ಕೇವಲ ಸೆಕೆಂಡುಗಳಲ್ಲಿ ಅಳತೆಮಾಡಲ್ಪಡುವ ಈ ಲೋಕದಲ್ಲಿ ಪ್ರತಿದಿನ ಬೆಳಿಗ್ಗೆ ಹದಿನೈದು ನಿಮಿಷವಾದರೂ ನಮ್ಮನ್ನು ಕೆಂಡಸಂಪಿಗೆ.ಕಾಮ್ ಎಂಬ ತಾಣ ತನ್ನ ಮುಂದೆ ಕೂರಿಸಿಕೊಳ್ಳಲು ಸಫಲವಾಗಿತ್ತು. ಕೆಲವೊಮ್ಮೆ ಸ್ಕ್ರೋಲಿಸುತ್ತಾ, ಮಗದೊಮ್ಮೆ ಓದುತ್ತಾ, ಆಗಾಗ ಕಮೆಂಟಿಸುತ್ತಾ, ಬಹಳಬಾರಿ ಬರೇ ಕಮೆಂಟುಗಳನ್ನು ಮಾತ್ರ ಓದುತ್ತಾ, ಕಮೆಂಟಿಗೊಂದು ಕಮೆಂಟಿಸುತ್ತಾ, ಒಮ್ಮೆ ಓದಲಿಕ್ಕಾಗದನ್ನು ಮತ್ತೆ ಮಧ್ಯಾಹ್ನವೋ, ಸಂಜೆಯೋ ಓದಲಿಕ್ಕೆ ಮತ್ತೆ ಮತ್ತೆ ತನ್ನ ಬಳಿ ಬರುವಂತೆ ಮಾಡಲೂ ಸಫಲವಾಗಿತ್ತು.
ಆದರೆ, ಸೃಜನಶೀಲತೆಯೆನ್ನುವುದು ಬರೇ ಬೌದ್ಧಿಕತೆಯ ಮಟ್ಟದಲ್ಲಿ ನಿಂತುಬಿಟ್ಟರೆ ಆಗುವುದೇ ಹೀಗೆ. ವ್ಯವಹಾರದಲ್ಲಿ ಕ್ರಿಯೇಟಿವ್ ಆಗದಿದ್ದಲ್ಲಿ ಇಂಥ ಅಕಾಲ ಮರಣಗಳು ಬರಬಹುದೇನೋ? ಈ ಅಂತರ್ಜಾಲದ ಜಾಲತಾಣವನ್ನು ನಿರ್ವಹಿಸಿಕೊಂಡು ಹೋಗುವುದರ ಲೊಜಿಸ್ಟಿಕ್ಸ್ ನನಗೆ ಗೊತ್ತಿಲ್ಲ, ಈಗಂತೂ ಕಾಸಿಗೊಂದು ಕೊಸರಿಗೊಂದು ಬ್ಲಾಗುಗಳು ಇರುವ ಈ ಕಾಲದಲ್ಲಿ ಇಂಥ ಒಂದು ಸೈಟು ತನ್ನ ಉಳಿಕೆಯನ್ನು ಸೃಜನಶೀಲವಾಗಿ ಗ್ರಹಿಸಲಿಲ್ಲವಲ್ಲ ಎನ್ನುವ ವ್ಯಥೆಯಿದೆ. ಇದಕ್ಕೆ ಬೇಕಾದ ಜಾಹಿರಾತುಗಳು ಸಿಗಲಿಲ್ಲವೇ? ಹೂಡಿಕೆದಾರರಿಲಿಲ್ಲವೇ? ಎಲ್ಲವೂ ವೇದ್ಯ. ಆದರೆ, ಯಾಕಾಗಲಿಲ್ಲ.
ಅಂತರ್ಜಾಲವೆನ್ನುವುದೇ ಒಂದು ಮಿಥ್ಯಾಪ್ರಪಂಚ. ಇಲ್ಲಿ ಎಲ್ಲವೂ ವರ್ಚುಯಲ್. ಪತ್ರಿಕೆ ಪ್ರಿಂಟಾಗಿದ್ದರೆ ಎಷ್ಟು ಖರ್ಛಾಗಿದೆ ಎನ್ನುವ ಲೆಕ್ಕವಾದರೂ ಸಿಗುತ್ತದೆ. ಆದರೆ, ಬರೇ ಹಿಟ್‌ಗಳನ್ನು ನಂಬಿಕೊಂಡು ಇದರ ಮೇಲೆ ಬಂಡವಾಳ ಹೂಡುವ ಜಾಹಿರಾತು ಹೂಡುವ ಮಂದಿ ಸಿಗಲಿಲ್ಲವೇ?
ಬಲ್ಲವರು ಯಾರೋ ಹೇಳಿದ್ದರು. ನಾವು ಯಾವುದೇ ವೆಬ್‌ತಾಣವನ್ನು ಕ್ಲಿಕ್ಕಿಸಿದರೆ ಸಾಕು ಅದನ್ನು ನಾವು ಓದುತ್ತಿದ್ದೇವೆ ಎಂತಲೇ ಅರ್ಥ. ಇದಕ್ಕೆ ಹತ್ತಿರವಾದ ಹೋಲಿಕೆಯೆಂದರೆ ಅಂಗಡಿಯಿಂದ ಒಂದು ಪುಸ್ತಕವನ್ನು ಖರೀದಿಸಿ ತಂದರೆ ಆಯಿತು, ಅದನ್ನು ಓದಿದಂತೆಯೇ. ಪುಸ್ತಕವ್ಯಾಪಾರಿಗೆ ನೀವು ಆ ಪುಸ್ತಕವನ್ನು ಓದುತ್ತೀರೋ ಇಲ್ಲವೋ ಅನ್ನುವುದು ಮುಖ್ಯವಾಗುವುದೇ ಇಲ್ಲ.
ನಾನೂಹಿಸಿಕೊಳ್ಳುವ ಕಾರಣ ಬಹಳ ಸರಳ. ತಪ್ಪಿರಲೂ ಬಹುದು. ಸಂಪನ್ಮೂಲದ ಕೊರತೆಯಿದ್ದರೂ ಇರಬಹುದು. ಕನ್ನಡದ ಬಹಳಷ್ಟು ಈ ತರದ ಸೃಜನಶೀಲ ಚಟುವಟಿಕೆಗಳು ನಡೆಯುವುದು ಲಾಭವನ್ನು ನೆಚ್ಚಿಕೊಂಡು ಅಲ್ಲ ಎನ್ನುವುದು ಪ್ರಾಯಶಃ ನಮಗೆಲ್ಲ ಗೊತ್ತಿರುವ ವಿಷಯ. ಎಲ್ಲಿಯವರೆಗೆ ಲಾಭ, ನಷ್ಟಗಳ ಮೊಬಲಗು ಸರಿಹೋಗುತ್ತದೆಯೋ ಅಲ್ಲಿಯವರೆಗೆ ಇದು ನಡಕೊಂಡು ಹೋಗಬೇಕು. ಆದರೆ ಈ ಲಾಭ ನಷ್ಟಗಳ ಲೆಕ್ಕಚುಕ್ಕಿಗ ಬೇರೆ ವ್ಯಾಪಾರಿಯಾಗಿ, ಈ ಸೃಜನಶೀಲ ಸಂಪನ್ಮೂಲ ಬೇರೆಯಾಗಿದ್ದಲಿ, ಈ ಎರಡೂ ಶಕ್ತಿಗಳು ಸಮಾನಾಂತರವಾಗಿ ಕೆಲಸ ಮಾಡಲು ಶುರುಮಾಡುತ್ತವೆ. ಕ್ರಿಯೇಟಿವ್ ಟೀಮ್ ಹೆಚ್ಚು ಕ್ರಿಯಾಶೀಲವಾದಲ್ಲಿ ತಾಣದ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಓದುಗವರ್ಗದಲ್ಲಿ ಮೂಡಿಸಲಾಗುತ್ತದೆ. ಆದರೆ, ಯಾವ ಕಾರಣದಿಂದ ಈ ಪತ್ರಿಕೆ ನಿಂತರೂ ಕೆಲವಾದರೂ ಓದುಗರಿಗೆ ‘ಛೆ ಐ ವಾಸ್ ಟೇಕನ್ ಫಾರ್ ಅ ರೈಡ್’ ಎಂಬ ಭಾವನೆ ಬಂದಲ್ಲಿ ಅನುಮಾನವೇನಿಲ್ಲ. ಜಯಂತ ಕಾಯ್ಕಿಣಿಯವರ ಸಂಪಾದಕತ್ವದಲ್ಲಿ ಬರುತ್ತಿದ್ದ ‘ಭಾವನಾ’ ನಿಂತಾಗ ಕೂಡ ಪತ್ರಿಕೆಯ ಓನರ‍್ಮಂದಿಯ ಬಾಟಮ್‌ಲೈನಿನ ಲೆಕ್ಕವನ್ನು ನೋಡಿ ಓದುಗರಿಗೆ ಮೈ ಉರಿದುಹೋಗಿತ್ತು.
ಆದರೆ, ಯಾರ ಮೈ ಉರಿದುಹೋಗುತ್ತದೆ ಅನ್ನುವುದೂ ಇಲ್ಲಿ ಮುಖ್ಯ. ಬಹಳಷ್ಟು ಮಂದಿ ಕನ್ನಡದ ಓದುಗರು, ಬರಹಗಾರರು ತಂಪಾಡಿಗೆ ತಾವು ಓದಿ ಖುಷಿಪಡುವವರು. ಪತ್ರಿಕೆ ಇದ್ದರೆ ಓದುತ್ತೇವೆ, ಇಲ್ಲವಾ ಇನ್ನೇನಾದರೂ ಓದುತ್ತೇವೆ ಎನ್ನುವ ಧೋರಣೆ ಯಿರುವವರು, ಮತ್ತು ಒಂದು ಪತ್ರಿಕೆ ಬರೆ ಪತ್ರಿಕೆಯಾಗಿ ಉಳಿದು ನಿಮ್ಮ ಜೀವನಶೈಲಿಯ ಯಾವ ಭಾಗವೂ ಆಗದೇ ಇದ್ದಲ್ಲಿ ಅದರ ಉಳಿವು ಅಸಾಧ್ಯ.
ಇದರ ಪರಿಣಾಮವೆಂದರೆ, ಇನ್ನಾರಾದಾರೂ ಕನ್ನಡದಲ್ಲಿ ಒಂದು ವೆಬ್ ಪತ್ರಿಕೆಯನ್ನು ಶುರುಮಾಡುತ್ತೀವೆಂದರೆ ಅದನ್ನು ಹೇಗೆ ನಂಬುವುದು ಎನ್ನುವ ಪರಿಸ್ಥಿತಿ ಬಂದು ಹೋಗಿದೆ. ಅಸಂಖ್ಯಾತ ಬ್ಲಾಗುಗಳು ಮತ್ತು ಮುದ್ರಣದಲ್ಲಿ ಲಭ್ಯವಿರುವ ಪತ್ರಿಕೆಗಳ ಅಂತರ್ಜಾಲ ಆವೃತ್ತಿಗಳನ್ನು ಬಿಟ್ಟರೆ ಅಂತರ್ಜಾಲ ಕ್ಕೇ ಎಕ್ಸ್‌ಕ್ಲ್ಯೂಸಿವ್ ಆದ ಒಂದು ಸದಭಿರುಚಿಯ ಪತ್ರಿಕೆ ಕನ್ನಡದಲ್ಲಿ ಬರುತ್ತದೆ ಎಂದರೆ ಅದರ ಬಗ್ಗೆ ನಂಬುವುದೇ ಅಸಾಧ್ಯವೇನೋ ಎಂಬ ಪರಿಸ್ಥಿತಿ ಬಂದು ಕೂತಿದೆ.
ಇದಕ್ಕೆ ಬರೇ ಕೆಂಡಸಂಪಿಗೆಯ ವ್ಯವಸ್ಠಾಪಕರನ್ನು ದೂರಿದಲ್ಲಿ ತಪ್ಪಾಗುತ್ತದೆ. ಇದರಲ್ಲಿ ನಮ್ಮ ಪಾಲೂ ಇದೆ ಎಂದು ನಂಬಿದಲ್ಲಿ ಮಾತ್ರ ಏನಾದರೂ ಅರ್ಥಪೂರ್ಣವಾಗಿ ಮಾಡಬಹುದು.

Wednesday, October 14, 2009
ಅಧಿಕಾರ- ಅಂತರ ಮಾಪಕ
೧೯೯೦ ರ ಜನವರಿ ತಿಂಗಳಲ್ಲಿ ಕೆರಿಬಿಯನ್‌ನ ‘ಏವಿಯಂಕ ಏರ್‌ಲೈನ್’ನ ವಿಮಾನವೊಂದು ನ್ಯೂಯಾರ್ಕಿನ ಲಾಂಗ್ ಐಲ್ಯಾಂಡಿನ ಬಳಿ ಒಂದು ಎಸ್ಟೇಟಿನ ಬಳಿ ಅಪಘಾತಕ್ಕೀಡಾಗಿತ್ತು. ಕಾರಣ ಬಹಳ ಸರಳವಾಗಿತ್ತು-ವಿಮಾನದಲ್ಲಿ ಇಂಧನ ಮುಗಿದುಹೋಗಿತ್ತಂತೆ. ಅಂದು ನ್ಯೂಯಾರ್ಕಿನ ಜಾನ್ ಎಫ್ ಕೆನಡಿ ವಿಮಾನನಿಲ್ದಾಣದಲ್ಲಿ ಕೆಟ್ಟ ಹವೆ, ವಿಪರೀತ ವಿಮಾನಜಂಗುಳಿ ಮತ್ತು ರನ್‌ವೇ ಅಭಾವದಿಂದ ಬಹಳಷ್ಟು ವಿಮಾನಗಳನ್ನು ಸರಿಯಾದ ಸಮಯದಲ್ಲಿ ಇಳಿಸಲಾಗಲಿಲ್ಲ. ಬಹಳಷ್ಟು ವಿಮಾನಗಳು ಗಾಳಿಯಲ್ಲಿ ಹಾರಾಡುತ್ತಾ ತಮ್ಮ ಸರದಿಗಾಗಿ ಕಾಯುತ್ತಿದ್ದವು. ಆ ಸಮಯದಲ್ಲಿ ಹಾಗೇ ಹಾರಾಡುತ್ತಿದ್ದ ಏವಿಯಂಕ ವಿಮಾನವು ತನ್ನಲ್ಲಿ ಉಳಿದಿದ್ದ ಇಂಧನವನ್ನೆಲ್ಲ ಉರಿಸಿ ಖಾಲಿಯಾಯಿತು. ಪೈಲಟ್ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದ್ದರೆ ಇದೇ ಇಂಧನವನ್ನು ಉಪಯೋಗಿಸಿಕೊಂಡು ಈ ವಿಮಾನ ಹತ್ತಿರವಿದ್ದ ಬಾಸ್ಟನ್ ಅಥವಾ ಫಿಲಡೆಲ್ಫಿಯಾದಲ್ಲಿ ಬಹಳ ಸುಲಭವಾಗಿ ಲ್ಯಾಂಡ್ ಆಗಬಹುದಾಗಿತ್ತು. ಆದರೆ, ಹಾಗೆ ಆಗಲಿಲ್ಲ.
ವಿಮಾನದ ಪೈಲಟ್ ನ್ಯೂಯಾರ್ಕಿನ ಏರ್ ಟ್ರಾಫಿಕ್ ಕಂಟ್ರೋಲರ‍್ಗಳಿಗೆ ತನ್ನ ವಿಮಾನದಲ್ಲಿ ಇಂಧನದ ಮಟ್ಟ ಅಪಾಯಕಾರಿ ಮಟ್ಟಕ್ಕೆ ಇಳಿದಿದೆ ಎಂಬ ವಿಷಯವನ್ನು ಪರಿಣಾಮಕಾರಿಯಾಗಿ ಅರ್ಥಮಾಡಿಸುವುದರಲ್ಲಿ ಎಡವಿದ್ದ. ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ಭಾಶೆಯಲ್ಲಿ ಈ ಪೈಲಟ್ ಹೇಳಿದ ‘We are running out of gas’ ಅಂಥಾ ದೊಡ್ದ ವಿಷಯವೇ ಅಲ್ಲ. ಯಾಕೆಂದರೆ, ಎಲ್ಲ ವಿಮಾನಗಳಲ್ಲಿಯೂ ಲ್ಯಾಂಡ್ ಆಗುವ ಮುನ್ನ ಸಾಮಾನ್ಯವಾಗಿ ಇಂಧನ ಮುಗಿಯುವ ಮಟ್ಟಕ್ಕೆ ಬಂದಿರುತ್ತದೆ. ‘ತಾನು ಈಗ ಲ್ಯಾಂಡ್ ಆಗದಿದ್ದರೆ ವಿಮಾನಕ್ಕೆ ತೊಂದರೆಯಾಗುವ ಸಂಭವವಿದೆ. ಈಗ ಕೆಳಗಿಳಿಯಲೇ ಬೇಕು’ ಎಂದು ಅಧಿಕಾರಯುತವಾಗಿ ಆ ಪೈಲಟ್ ಹೇಳಿರಲಿಲ್ಲ. ನಂತರ ಈ ವಿಮಾನಕ್ಕೆ ರನ್‌ವೇ ಸಿಕ್ಕಿ ಅದು ನೆಲಕ್ಕೆ ಮುಟ್ಟುವ ಮುನ್ನ ವಿಮಾನದ ನಾಲ್ಕೂ ಇಂಜಿನ್‌ಗಳೂ ಸ್ಥಗಿತಗೊಂಡಿದ್ದವು. ವಿಮಾನ ನಿಲ್ದಾಣದ ಪಕ್ಕದಲ್ಲಿದ್ದ ಯಾವುದೋ ಒಂದು ಎಸ್ಟೇಟಿನಲ್ಲಿ ಅಪಘಾತಕ್ಕೊಳಗಾಯಿತು. ಎಪ್ಪತ್ಮೂರು ಜನ ಸ್ಥಳದಲ್ಲಿಯೇ ಸತ್ತರು.
ಮಾಲ್ಕಮ್ ಗ್ಲಾಡ್‌ವೆಲ್ ಎಂಬ ಬೆಸ್ಟ್‌ಸೆಲ್ಲರ್ ಸಾಹಿತಿಯೊಬ್ಬ ಬರೆದಿರುವ ‘The Outliers’ ಎನ್ನುವ ಪುಸ್ತಕದಲ್ಲಿ ಇಂಥ ಅಪಘಾತಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋಗುತ್ತಾನೆ. ‘ಮೇಲಣ ಅಧಿಕಾರಿಗಳ ನಿರ್ಣಯವನ್ನು ಕೊಂಚವೂ ಪ್ರಶ್ನಿಸಬಾರದೆಂಬ ಸಂಸ್ಕೃತಿಯಲ್ಲಿ ಬೆಳೆದುಬಂದ ಈ ಕೊಲಂಬಿಯನ್ ಪೈಲಟ್ಟುಗಳು ನ್ಯೂಯಾರ್ಕಿನ ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಿರ್ಣಯವನ್ನು ಪ್ರಶ್ನಿಸಲಾಗದೇ ಅಥವಾ ತಮ್ಮ ತುರ್ತನ್ನೂ ಅವರಿಗೆ ಸ್ಪಷ್ಟವಾದ ಪದಗಳಲ್ಲಿ ಸಂವಹಿಸಲಾಗದೇ ಇದ್ದುದೇ ಈ ಅಪಘಾತಕ್ಕೆ ಮೂಲ ಕಾರಣ’ ಎಂದು ನಿರ್ಧರಿಸುತ್ತಾನೆ.
ಇದೇ ನಿಟ್ಟಿನಲ್ಲಿ ಇಂಥ ವಿಮಾನಾಪಘಾತದ ಸಂಸ್ಕೃತಿಯನ್ನು ವಿಶ್ಲೇಷಿಸುತ್ತಾ “ ಕೆಲವೊಂದು ವಿಮಾನಗಳಲ್ಲಿ ಪೈಲಟ್ಟು-ಕೋಪೈಲಟ್ಟುಗಳ ಸಂಬಂಧ ಬಹಳ ಬೇರೆಯಾಗಿರುತ್ತದೆ. ಕೋ ಪೈಲಟ್ಟುಗಳು ಬಹಳಷ್ಟು ಬಾರಿ ಪೈಲಟ್ಟುಗಳಿಗೆ ಊಟ ಬಡಿಸುತ್ತಾರೆ, ಒಂದೇ ಹೋಟೆಲಿನಲ್ಲಿ ಉಳಿದುಕೊಳ್ಳುವುದಿಲ್ಲ. ಕೆಲವೊಮ್ಮೆ ಆತನಿಗೆ ವಿಸ್ಕಿ ಬೇಕಿದ್ದರೆ ಅದನ್ನು ತಂದುಕೊಟ್ಟು ಪೂರೈಸುತ್ತಾನೆ. ತನಗೆ ಕುಡಿಯಬೇಕೆನ್ನಿಸಿದರೆ ಮರೆಯಲ್ಲಿ ಹೋಗಿ ಕೈಮುಚ್ಚಿ ಕುಡಿಯುತ್ತಾನೆ. ಇದು ಧಣಿ-ಆಳಿನ ಸಂಬಂಧ’ ಎನ್ನುತ್ತಾನೆ.
ಏವಿಯಂಕ ವಿಮಾನದ ಕಾಕ್‌ಪಿಟ್‌ನಲ್ಲಿ ಆಡಿರಬಹುದಾದ ಸಂಭಾಷಣೆಯನ್ನು ಆಧರಿಸಿ ಗ್ಲಾಡ್‌ವೆಲ್ ಈ ತೀರ್ಮಾನಕ್ಕೆ ಬರಬಹುದು. ಕಾಕ್‌ಪಿಟ್ನಲ್ಲಿರುವ ಕೊ ಪೈಲಟ್ ಮತ್ತು ಫ್ಲೈಟ್ ಇಂಜಿನಿಯರ್ ಇಬ್ಬರಿಗೂ ತಮ್ಮ ವಿಮಾನ ಅಪಾಯಕಾರಿಯಾಗಿ ಹಾರಾಡುತ್ತಿದೆ ಎಂದು ಗೊತ್ತಿದ್ದರೂ ಪೈಲಟ್ಟಿನ ನಿರ್ಣಯವನ್ನು ಪ್ರಶ್ನಿಸುವ ಹಕ್ಕಿಲ್ಲ, ಎಂದು ತಿಳಿದಿದ್ದರೇ? ಹಾಗೆಯೇ, ಆ ಪೈಲಟ್ಟೂ ಕೂಡ ಅಷ್ಟೇ. ತನಗಿಂತ ಮೇಲಣ ಆಫೀಸರ್ ಎಂದು ಭಾವಿಸಿರುವ ನ್ಯೂಯಾರ್ಕಿನ ಏರ್‌ಟ್ರಾಫಿಕ್ ಕಂಟ್ರೋಲರುಗಳ ನಿರ್ಣಯವನ್ನು ಪ್ರಶ್ನಿಸುವುದಿರಲಿ, ತನ್ನ ತುರ್ತನ್ನೂ ಅವರಿಗೆ ತಲುಪಿಸಲಾಗಲಿಲ್ಲ. ಒಂದು ಘಟ್ಟದಲ್ಲಿ ‘ನನಗೆ ಸ್ಪಾನಿಶ್ ದುಭಾಷಿ ಬೇಕು’ ಎಂದು ಕೇಳಿದ್ದನಂತೆ.
ಆ ಕಾಕ್‌ಪಿಟ್ಟಿನ ಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳೋಣ. ಸ್ಪಾನಿಶ್ ಭಾಶೆಯನ್ನು ಮಾತಾಡುತ್ತಿರುವ ಇಬ್ಬರು ಪೈಲಟ್ಟುಗಳು, ವಿಮಾನದಲ್ಲಿ ಇಂಧನ ಮುಗಿದಿದೆ ಎಂದು ಎಲ್ಲರಿಗೂ ಗೊತ್ತಿದೆ. ತನ್ನ ವಿಮಾನ ಅಪಾಯದಲ್ಲಿದೆ ಎಂದು ಗೊತ್ತಿದ್ದ ಕ್ಯಾಪ್ಟನ್ ಇದನ್ನು ತನ್ನ ಮೇಲಧಿಕಾರಿಗಳಿಗೆ ಹೇಳಲಾಗದೇ ಇದ್ದುದಕ್ಕೆ ಕಾರಣವೇನಿರಬಹುದು. ಒಂದು, ಪರಿಣಾಮಕಾರಿಯಾಗಿ ಇಂಗ್ಲಿಶ್ ಭಾಷೆಯನ್ನು ಬಳಸುವುದು ಆತನಿಗೆ ಸಾಧ್ಯವಾಗಿಲ್ಲ. ಎರಡನೆಯದು ಅಧಿಕಾರಯುತವಾದ ಅಮೆರಿಕನ್ ಉಚ್ಚಾರದಲ್ಲಿ ‘I am asking you a direct question. Do you consider your situation as emergency or priority? ಎಂದು ಕೇಳಿದಾಗ ತನ್ನ ಜತೆಗಿರುವ ಕೈಕೆಳಗಿನ ಅಧಿಕಾರಿಗಳ ಮುಂದೆ ತನ್ನ ಮ್ಯಾಚಿಸ್ಮೋವನ್ನು ಬಿಡಲಾಗದೆ ‘ಪ್ರಯಾರಿಟಿ’ಎಂದು ಹೇಳಿದ್ದಾನೆ. ಇಡೀ ವಿಮಾನದಲ್ಲಿರುವ ಜೀವಗಳ ಜವಾಬ್ದಾರಿ ತನ್ನದು ಎಂದು ಗೊತ್ತಿದ್ದಾಗಲೂ ತಾನು ಕೊಲಂಬಿಯನ್, ಕಂದು ಬಣ್ಣದವ, ಬಿಳೀ ಬಣ್ಣದ ಇಂಗ್ಲಿಶ್ ಮಾತಾಡುವ ಜಗತ್ತಿನ ಅತಿದೊಡ್ಡ ವಿಮಾನನಿಲ್ದಾಣದ ಏರ‍್ಟ್ರಾಫಿಕ್ ಕಂಟ್ರೊಲರ್ ಜತೆ ಮಾತಾಡುತ್ತಿದ್ದೇನೆ ಎನ್ನುವ ಅಂಶ ಅವನ ಬಾಯನ್ನು ಕಟ್ಟಿಹಾಕಿದೆ. ತನ್ನ ತುರ್ತನ್ನೂ ಸಂವಹಿಸಲಾಗದೇ ಹೋಗಿದ್ದಾನೆ.
* * *
ಇದನ್ನು ಮಾಲ್ಕಮ್ ಗ್ಲಾಡ್‌ವೆಲ್ ‘ಅಧಿಕಾರ-ಅಂತರ- ಮಾಪಕ’ ಎಂದು ಕರೆಯುತ್ತಾನೆ. (Power distance index). ಶ್ರೇಣೀಕೃತ ಸಂಸ್ಕೃತಿಯಲ್ಲಿ ಮೇಲಧಿಕಾರಿಯ ಜತೆ ಕೆಳಗಿನ ಅಧಿಕಾರಿ ಅಥವಾ ಒಂದು ಸಂಸಾರದ ಮುಖ್ಯಸ್ಥನ ಜತೆ ಸಂಸಾರದ ಇನ್ನಿತರರು ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನು ಕೆಳಗಿನಿಂದ ನೋಡುವ ಮಾಪಕ ಇದು. ಈ ಸೂಚಿ ಹೆಚ್ಚಿದ್ದಷ್ಟೂ ಅಧಿಕಾರಗಳ ನಡುವಿನ ಅಂತರವೂ ಹೆಚ್ಚಿರುತ್ತದೆ. ಜರ್ಮನಿಯಲ್ಲಿ ಈ ಮಾಪಕ ೩೫ರಷ್ಟಿದ್ದರೆ, ಕೆಲವೊಂದು ಅರಬ್ ರಾಷ್ಟ್ರಗಳಲ್ಲಿ ಇದು ೮೦ರಷ್ಟು ಇದೆ. ಅಮೆರಿಕಾದಲ್ಲಿ ಇದು ೪೦ರ ಸಮೀಪದಲ್ಲಿದೆ. ಭಾರತ, ಪಾಕಿಸ್ತಾನ, ಕೊರಿಯಾ, ಚೀನಾ ಮುಂತಾದ ಏಷಿಯಾದ ದೇಶಗಳಲ್ಲಿ ಇದು ಹೆಚ್ಚಾಗಿದ್ದರೆ, ಜಪಾನ್, ಸಿಂಗಪೂರ್, ಜರ್ಮನಿ, ಅಮೆರಿಕ, ಇಂಗ್ಲೆಂಡುಗಳಲ್ಲಿ ಇದು ಕಡಿಮೆ ಇದೆ.
ಇದನ್ನು ನಾವು ದಿನನಿತ್ಯದ ವ್ಯವಹಾರದಲ್ಲಿಯೂ ಮತ್ತು ನಾವು ಉಪಯೋಗಿಸುವ ಭಾಷೆಯಲ್ಲಿಯೂ ಕಾಣಬಹುದು. ಇಂಗ್ಲಿಷಿನಲ್ಲಿ ಮರ್ಯಾದಾಸೂಚಕ ಬಹುವಚನವಿಲ್ಲ. ಅಂದರೆ, ಕನ್ನಡದಲ್ಲಿದ್ದಂತೆ ನೀನು, ನೀವು, ತಾವುಗಳ ಅಂತರ ಇಂಗ್ಲಿಶ್ ಭಾಶೆಯಲ್ಲಿಲ್ಲ. ಇಲ್ಲಿ ಮೇಲಧಿಕಾರಿಗಳು ಮತ್ತು ಕೆಳಗಿನ ಅಧಿಕಾರಿಗಳು ಇಬ್ಬರೂ ಒಂದೇ ಪ್ರತ್ಯಯವನ್ನು ಉಪಯೋಗಿಸಿ ಮಾತಡುತ್ತಾರೆ. ಹೆಚ್ಚೆಂದರೆ, ಮಿಸ್ಟರ್, ಡಾಕ್ಟರ್ ಎಂಬ ನಾಮಪೂರ್ವ ವಿಶೇಷಣಗಳನ್ನು ಉಪಯೋಗಿಸಿದರೆ ಅಥವಾ ಕೊನೆಯ ಹೆಸರನ್ನು ಉಪಯೋಗಿಸಿದಾಗ ಅದು ಮರ್ಯಾದೆಯನ್ನು ಸೂಚಿಸುವಂತಾಗುತ್ತದೆ. (ಎ ಕೆ ರಾಮಾನುಜನ್ ರವರ ಸಂಸ್ಕಾರದ ಇಂಗ್ಲಿಶ್ ತರ್ಜುಮೆಯಲ್ಲಿ ‘You have to respect me . Call me in Pleural. (ಮರ್ಯಾದೆ ಕೊಟ್ಟು ಮಾತನಾಡು,ಬಹುವಚನದಲ್ಲಿ ಕರೆ) ಎಂಬ ಉಪಯೋಗ ಅನೇಕ ಇಂಗ್ಲಿಶ್ ಓದುಗರಿಗೆ ಗೊಂದಲವನ್ನುಂಟುಮಾಡಿತ್ತಂತೆ.
ಅಂದರೆ, ಭಾಷೆಯ ಉಪಯೋಗ ಕೂಡ ಈ ಶ್ರೇಣೀಕೃತ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಏ. ಏನೋ, ಏನ್ರೀ, ಏನಪ್ಪಾ, ಏನ್ಸಾರ್ ಹೀಗೆ ಒಬ್ಬ ವ್ಯಕ್ತಿ ತನ್ನ ಅಂತಸ್ತಿಗನುಗುಣವಾಗಿ ಜನರನ್ನು ಸಂಭೋದಿಸುವುದು ಈ ಅಂತರ ಮಾಪಕ ಹೆಚ್ಚಾಗಿರುವ ದೇಶಗಳಲ್ಲಿ ನಾವು ಕಾಣಬಹುದು. ಕನ್ನಡ ಕೂಡ ಇದಕ್ಕೆ ಹೊರತಲ್ಲ.
ಕಾಕ್‌ಪಿಟ್ಟಿನಲ್ಲಿದ್ದ ಇಬ್ಬರೂ ಅಮೆರಿಕನ್ನರಾಗಿದರೆ ಕೊಪೈಲಟ್ ‘Hey.. listen here, buddy. We need to land this flight.. like right now’ ಎಂದು ಹೇಳುತ್ತಿದ್ದನೇ.
ಬಹುಶಃ ಹೌದು
* * *
ನಾನು ಕೆಲಸ ಮಾಡುತ್ತಿರುವ ಕಡೆ ಅನೇಕ ಬೇರೆಬೇರೆ ದೇಶಗಳಿಂದ ಅಮೆರಿಕಾಕ್ಕೆ ವಲಸೆಬಂದಿರುವ ಕುಟುಂಬಗಳಿವೆ. ಮಿನೆಸೊಟಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೊಮಾಲಿಯಾದಿಂದ ರಾಜಕೀಯ ಸಂತ್ರಸ್ತರ ಕೋಟಾದಡಿಯಲ್ಲಿ ಜನ ವಲಸೆ ಬಂದಿದ್ದಾರೆ. ಅವರಿಗೆ ಒಂದಕ್ಷರವೂ ಇಂಗ್ಲಿಶ್ ಬರುವುದಿಲ್ಲ. ಆದರೆ ಮಿನೆಸೊಟದಲ್ಲಿ ಇವರ ಹಕ್ಕುಗಳನ್ನು ಸರಿಯಾಗಿ ಅವರಿಗೆ ತಿಳಿಯಪಡಿಸುವ ಅನೇಕ ರಾಜಕೀಯ ಅಥವಾ ಎನ್ಜೀಓ ತರದ ಸಂಸ್ಥೆಗಳಿದ್ದಾವೆ. ಯಾವುದೇ ಆರೋಗ್ಯವಿಮೆ ಇವರಿಗಿಲ್ಲವಾದರಿಂದ ಇವರ ಸಣ್ಣಪುಟ್ಟ ಕಾಯಿಲೆಗಳಿಗೂ ಇವರು ಅತಿ ದುಬಾರಿಯಾದ ಎಮೆರ್ಜೆನ್ಸಿ ಡಿಪಾರ್ಟ್‌ಮೆಂಟನ್ನೇ ಅವಲಂಬಿಸಿರುತ್ತಾರೆ. (ಇವರಿಗೆ ಎಲ್ಲ ಆಸ್ಪತ್ರೆಗಳಲ್ಲಿಯೂ ಸೇವೆ ಪುಕ್ಕಟೆ ಎನ್ನುವುದು ಒಂದು ಅಂಶ) ಅಷ್ಟೇ ಅಲ್ಲ, ಮಗುವಿಗೆ ಸಣ್ಣಗೆ ನೂರು ಡಿಗ್ರಿ ಜ್ಚರ ಬಂದರೂ ಇವರು ಆಂಬುಲೆನ್ಸನ್ನು ಕರೆಯುತ್ತಾರೆ. (ಆಸ್ಪತ್ರೆಗೆ ಬರಲು ಇವರ ಬಳಿ ಕಾರಿಲ್ಲದೇ ಇರುವುದೂ ಇದಕ್ಕೆ ಕಾರಣವಾಗಿರಬಹುದು)
ಬರೇ ಬಿಳೀವರ್ಣದ ಪ್ಯಾರಮೆಡಿಕ್‌ಗಳು, ನರ್ಸುಗಳು ತುಂಬಿರುವ ಆಸ್ಪತ್ರೆಗೆ ಮಗುವನ್ನೂ ಅಮ್ಮನನ್ನೂ ಆಂಬುಲೆನ್ಸಿನಲ್ಲಿ ಕರಕೊಂಡು ಬರಲಾಗುತ್ತದೆ. ಆಸ್ಪತ್ರೆಗಾಗಲೀ, ಆಂಬುಲೆನ್ಸಿಗಾಗಲೀ ಇವರು ನಯಾಪೈಸೆ ಕೊಡಲಾರರು ಎಂಬುದು ಎಲ್ಲರಿಗೂ ಗೊತ್ತು. ಮತ್ತು ಇವರೆಲ್ಲರ ಈ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ತಮ್ಮ ತೆರಿಗೆಯ ಹಣದಿಂದ ಎಂಬ ಅಂಶ ಬಿಳಿಯ ಪ್ಯಾರಮೆಡಿಕ್ ಮತ್ತು ನರ್ಸುಗಳನ್ನೂ ಆಗಾಗ್ಗೆ ರೊಚ್ಚಿಗೇಳಿಸುತ್ತದೆ. ‘bloddy, my tax dollars are at works, here’ ಎಂದು ಕೆಲವೊಮ್ಮೆ ಖುಲ್ಲಂಖುಲ್ಲ ಮಾತಾಡುತ್ತಾರೆ. ಆದರೆ, ನನ್ನನ್ನು ನೋಡಿದಾಕ್ಷಣ ಅವರಿಗೆ ಒಮ್ಮೊಮ್ಮೆ ತಬ್ಬಿಬ್ಬಾಗುತ್ತದೆ. ಕೆಲವರಿಗೆ ನನ್ನ ರಾಷ್ಟ್ರೀಯತೆಯೂ ಗೊತ್ತಿಲ್ಲ. ಆದರೂ, ನಾನು ಅವರಿಗಿಂತ ಹೆಚ್ಚು ಸೊಮಲಿಯಾಕ್ಕೆ ಹತ್ತಿರವೆಂದು ತಿಳಿದು ಕೆಲವೊಮ್ಮೆ ಕ್ಷಮೆ ಕೋರಿದ್ದಾರೆ.
ಇಲ್ಲಿ ಬರೇ ಅಧಿಕಾರ-ಅಂತರ ಮಾತ್ರ ಬರುವುದಿಲ್ಲ. ಈ ಅಧಿಕಾರ-ಅಂತರ ಸೂಚಿ ಹೆಚ್ಚಿರುವ ಭಾರತ ಮೂಲದವನಾದ ನಾನು ಮೇಲಿನ ಅಧಿಕಾರಿಗಳಿಗೆ ಮರ್ಯಾದೆಯನ್ನು ಕೊಡುವುದನ್ನೇನೋ ಕಲಿತಿದ್ದೇನೆ. ಆದರೆ, ನನ್ನ ಕೈಕೆಳಗಿರುವ ಕೆಲಸಗಾರರಿಂದ ಅದೇ ಮರ್ಯಾದೆಯನ್ನು ಪಡೆಯುವುದನ್ನು ನನ್ನ ಸಂಸ್ಕೃತಿ, ಪರಂಪರೆ ನನಗೆ ಕಲಿಸಿರಬೇಕು, ಅಲ್ಲವೇ? ಯಾಕೆಂದರೆ, ಆಸ್ಪತ್ರೆಯ ನಮ್ಮ ಡಿಪಾರ್ಟ್‌ಮೆಂಟಿನ ಬಾಸ್ ನಾನು. ಏನಿಲ್ಲದಿದ್ದರೂ ಈ ಪ್ಯಾರಮೆಡಿಕ್ ವೃತ್ತಿಪರವಾಗಿ ನಡಕೊಂಡಿಲ್ಲವೆಂದು ಅವನನ್ನು ಎಚ್ಚರಿಸುವುದು ನನ್ನ ಕರ್ತವ್ಯ ಮತ್ತು ಹೊಣೆಗಾರಿಕೆ ಕೂಡ.
ಆದರೆ, ಈ ಅಧಿಕಾರವೆನ್ನುವುದು ಬರೇ ಓದು ಅಥವಾ ಕೆಲಸದ ಅನುಭವದಿಂದ ಬರುವುದಿಲ್ಲ. ಅದೊಂದು ಮನಸ್ಥಿತಿ. ನನ್ನ ಕಂದು ಬಣ್ಣ, ಇಂಗ್ಲಿಷ್ ಉಚ್ಚಾರ ಮನಸ್ಸಿನ ಯಾವುದೋ ಮೂಲೆಯಲ್ಲಿ ಒಂದು ಕೀಳರಿಮೆಯನ್ನು ನನ್ನಲ್ಲಿ ಮೂಡಿಸಿಟ್ಟಿದೆಯಾ ಎಂದು ಅನುಮಾನವಾಗುತ್ತದೆ. ಅದು ನಾನಾಗೇ ಮೂಡಿಸಿಕೊಂಡಿದ್ದಲ್ಲ. ನಿಜ ಹೇಳಬೇಕೆಂದರೆ ನಾನು ಆ ಪ್ಯಾರಮೆಡಿಕ್‌ಗೆ ‘ನಿನ್ನ ವರ್ತನೆ ಉಚಿತವಾದದ್ದಲ್ಲ’ ಎಂದು ಹೇಳಿದ್ದರೆ ಆತ ಗ್ಯಾರಂಟಿ ‘ಸಾರಿ’ ಕೇಳುತ್ತಿದ್ದ. ಆದರೆ, ಸುತ್ತ ಕೆಲಸಮಾಡುತ್ತಿರುವ ಬಿಳೀ ಮಧ್ಯಮವರ್ಗ ಮತ್ತು ನಾನು ಉತ್ತಮ ಜೀವನ ಶೈಲಿಯನ್ನು ಹುಡಕೊಂಡು ಅಮೆರಿಕೆಗೆ ಬಂದಿದ್ದೇನೆ ಎಂದು ನನ್ನೊಳಗೆ ಇರುವ ಸುಪ್ತವಾದ ಒಂದು ಭಾವನೆ, ಕೀಳರಿಮೆ ನನ್ನ ಅಧಿಕಾರವಾಣಿಯನ್ನು ಕಿತ್ತುಕೊಂಡಿದೆ.
* * *
ಕೆಲವು ದಿನಗಳ ಹಿಂದೆ ಹೀಗೇ ಆಯಿತು. ಮೂರುವರ್ಷದ ಸೊಮಾಲಿ ಮಗುವೊಂದು ವಾಂತಿ ಮಾಡುತ್ತಿದೆಯೆಂದು ಅದರಮ್ಮ ಆಸ್ಪತ್ರೆಗೆ ಕರಕೊಂಡು ಬಂದಿದ್ದಳು. ಪರೀಕ್ಷೆ ಮಾಡಿದ ತಕ್ಷಣ ಮಗುವಿಗೆ ಏನೂ ತೊಂದರೆಯಿಲ್ಲವೆಂದು ನನ್ನ ವೈದ್ಯಬುದ್ಧಿ ಹೇಳಿತು. ನಾನು ಹೋಗಿ ಆಕೆಗೆ ‘ನಿನ್ನ ಮಗುವಿಗೆ ಏನೂ ತೊಂದರೆಯಿಲ್ಲ. ಅರಾಮಾಗಿ ಮನೆಗೆ ಕರಕೊಂಡು ಹೋಗು’ ಎಂದು ಹೇಳಿದೆ. ಆಕೆ, ದುಭಾಶಿಯೊಬ್ಬಳ ಮೂಲಕ ‘ಮಗುವಿಗೆ ನಾನು ಎಕ್ಸ್ ರೇ ಯಾಕೆ ಮಾಡುತ್ತಿಲ್ಲ? ಐವಿ ಯಾಕೆ ಹಾಕುತ್ತಿಲ್ಲ? ರಕ್ತಪರೀಕ್ಷೆ ಯಾಕೆ ಮಾಡುತ್ತಿಲ್ಲ?’ ಹೀಗೇ ಅನೇಕ ಪ್ರಶ್ನೆಗಳನ್ನು ಕೇಳಿದಳು. ನಾನು ರೋಸಿಹೋಗಿ ‘ಮಗುವಿಗೆ ಏನೂ ತೊಂದರೆಯಿಲ್ಲ. ನೀನು ಸುಮ್ಮನೆ ಹೀಗೆ ಸಣ್ಣ್ನಸಣ್ಣದಕ್ಕೆಲ್ಲಾ ಆಸ್ಪತ್ರೆಗೆ ಕರಕೊಂಡು ಬರುವುದನ್ನು ನಿಲ್ಲಿಸು’ ಎಂದು ಕೊಂಚ ಗದರಿದಹಾಗೇ ಹೇಳಿ ಆಕೆಯನ್ನು ಮನೆಗೆ ಕಳಿಸಿದೆ.
ಮನೆಗೆ ಬರುತ್ತಾ ನನಗೆ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಇದೇ ಒಂದು ಬಿಳಿಯ ಮಗು ಇದೇ ಪರಿಸ್ಥಿತಿಯಲ್ಲಿ ಬಂದಿದ್ದರೆ ನಾನು ಇದೇ ರೀತಿ ಮಾಡುತ್ತಿದ್ದೆನಾ ಎಂದು. ಪ್ರಾಯಶಃ ಮಗುವಿನ ಅಮ್ಮ ಏನು ಕೇಳುತ್ತಾಳೋ ಎಲ್ಲವನ್ನೂ ಮಾಡಿ ಕಳಿಸುತ್ತಿದ್ದನೇನೋ? ಸೊಮಾಲಿ ಮಗುವಿನ ಅಮ್ಮನಿಗೆ ಭಾಷೆ ಬರದಿರುವುದು ಮತ್ತು ನಾನು ಮತ್ತು ಆಕೆ ಇಬ್ಬರೂ ಹೊರಗಿನಿಂದ ಅಮೆರಿಕಾಕ್ಕೆ ಬಂದಿರುವುದರಿಂದ ನಾನು ನನ್ನ ಸಹಜ ಅಧಿಕಾರಯುತವಾದ ಭಾಷೆಯಲ್ಲಿ ನನ್ನ ಕೆಲಸವನ್ನು ಮಾಡಿದ್ದೆ. ಬಹುಷಃ ಆಕೆ ಸೊಮಾಲಿ ಎಂದು ನಾನು ನನ್ನ ಅಧಿಕಾರವನ್ನು ಹೆಚ್ಚಾಗಿಯೇ ಉಪಯೋಗಿಸಿದ್ದನೇನೋ.
ಆದರೆ, ಆಕೆಯೂ ನನ್ನ ಹಾಗೆ ಅಮೆರಿಕಾಕ್ಕೆ ಬಂದು ಇಲ್ಲಿಯೇ ನೆಲಸುವ ಪ್ರಯತ್ನದಲ್ಲಿರುವವಳಲ್ಲವೇ? ಆಕೆ ಬಿಡಲಿಲ್ಲ. ಮತ್ತೆ ಮಗುವನ್ನು ಕರಕೊಂಡು ಬಂದಳು. ಬಂದವಳೇ ‘ಮಗು ಒಂದು ತೊಟ್ಟೂ ನೀರು ಕುಡಿಯುತ್ತಿಲ್ಲ. ನೀನು ಐವಿ ಹಾಕಲೇಬೇಕು’ ಎಂದು ಗಲಾಟೆ ಮಾಡಹತ್ತಿದಳು. ಮತ್ತೆ ಮಗುವನ್ನು ಕೂಲಂಕಶವಾಗಿ ಪರೀಕ್ಷೆಮಾಡಿ, ಮಗುವಿಗೆ ಏನೂ ತೊಂದರೆಯಿಲ್ಲದಿದ್ದರೂ- ಒಂದು ಐವಿಹಾಕಿ ಒಂದು ಲೀಟರ್ ಸಲೈನ್ ಕೊಟ್ಟರೆ ನನ್ನ ಗಂಟೇನೂ ಹೋಗುವುದಿಲ್ಲ, ಎಂದು ನಿರ್ಧರಿಸಿ ಮಗುವನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡುವಾ ಎಂದು ಆಸ್ಪತ್ರೆಯಲ್ಲಿ ಈ ಮಗುವನ್ನು ನೋಡಿಕೊಳ್ಳುವ ಡಾಕ್ಟರಿಗೆ ಫ಼ೋನಾಯಿಸಿದೆ.
ಆದರೆ, ಏನು ಮಾಡಿದರೂ ಮೈಕೈ ತುಂಬಿಕೊಂಡು ಗುಂಡುಗುಂಡಾಗಿದ್ದ ಆ ಮಗುವಿಗೆ ಐವಿ ಹಾಕಲು ಆಸ್ಪತ್ರೆಯ ಯಾವ ನರ್ಸಿಂದಲೂ ಸಾಧ್ಯವಾಗಲಿಲ್ಲ. ಮಗುವನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿ ಆ ಆಸ್ಪತ್ರೆಯ ಡಾಕ್ಟರುಗಳಿಗೆ ಫೋನು ಮಾಡಿ ಎಲ್ಲವನ್ನೂ ಸಜ್ಜುಗೊಳಿಸಿ ಅಮ್ಮನ ಜತೆ ಮಾತಾಡಲು ಹೋದೆ.
ಅಷ್ಟರಲ್ಲಿ ಆ ಮಗುವಿನ ಅಪ್ಪ ಬಂದಿದ್ದ. ಆತನಿಗೆ ಕೊಂಚ ಇಂಗ್ಲಿಶ್ ಬರುತ್ತಿತ್ತು. ‘ನಾಳೆ ಬೆಳಗಾದರೆ ನನ್ನದು ಮತ್ತು ನನ್ನ ಹೆಂಡತಿಯದು ಸಿಟಿಜನ್‌ಶಿಪ್ ಸಂದರ್ಶನ ಇದೆ. ಮಗುವನ್ನು ಆಸ್ಪತ್ರೆಗೆ ಯಾಕೆ ಅಡ್ಮಿಟ್ ಮಾಡಬೇಕು? ಮಗು ಆರಾಮಾಗೇ ಇದೆಯಲ್ಲ’ ಎಂದು ಕೇಳಿದಾಗ ನಾನು ಹೆಚ್ಚು ಮಾತಾಡದೇ ಮಗುವಿನ ತಾಯಿಯ ಮುಖನೋಡಿದೆ. ‘ನನ್ನ ಪ್ರಕಾರ ಮಗುವಿಗೆ ವಾಂತಿ ನಿಲ್ಲಲು ಒಂದೆರಡು ಮಾತ್ರೆಕೊಟ್ಟು ಮನೆಗೆ ಕರಕೊಂಡು ಹೋದರೆ ಸಾಕು. ಆದರೆ, ನಿನ್ನ ಹೆಂಡತಿ ನನ್ನ ಮಾತು ಕೇಳಬೇಕಲ್ಲ. ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಂತೆ. ಇಲ್ಲಿ ಈ ಆಸ್ಪತ್ರೆಯಲ್ಲಿರುವವರೆಲ್ಲ ನಿನ್ನ ಮಗುವಿಗೆ ಐವಿ ಹಾಕಲು ಪ್ರಯತ್ನಪಟ್ಟು ಸೋತಿದ್ದೇವೆ. ನಿನ್ನ ಮಗುವನ್ನು ಇನ್ನೊಂದು ಆಸ್ಪತ್ರೆಗೆ ಕರಕೊಂಡು ಹೋಗಬೇಕು. ನಾನು ಎಲ್ಲ ಸಜ್ಜುಗೊಳಿಸಿದ್ದೇನೆ’ ಎಂದು ಹೇಳಿದೆ.
ಗಂಡಹೆಂಡತಿ ಸುಮಾರು ಹೊತ್ತು ಮಾತಾಡಿಕೊಂಡು ನಂತರ ಮಗುವನ್ನು ಆ ಆಸ್ಪತ್ರೆಗೆ ಕರಕೊಂಡು ಹೋಗುತ್ತೇನೆಂದು ಹೇಳಿ ಕರಕೊಂಡು ಹೋದರು.
ಮಾರನೆಯ ದಿನ ನಾನು ಆಸ್ಪತ್ರೆಗೆ ಬಂದಾಗ ನನ್ನ ಮೈಲ್‌ಬಾಕ್ಸಿನಲ್ಲೊಂದು ಸಣ್ನ ನೋಟಿತ್ತು’ ನೀನು ಕಳಿಸಿದ ಆ ಮಗು ನಮ್ಮ ಆಸ್ಪತ್ರೆಗೆ ಬರಲಿಲ್ಲ.’
ಆಕೆಯ ಮನೆಗೆ ಫೋನುಮಾಡಿದಾಗ ಮಗುವಿನ ಅಮ್ಮ ಫೋನು ತೆಗೆದುಕೊಂಡಳು. ಹಿಂದೆ ಮಗು ಜೋರಾಗಿ ಕೂಗುತ್ತಾ ಆಟವಾಡುತ್ತಿರುವುದು ಕೇಳಿಸುತ್ತಿತ್ತು. ನನ್ನ ಧ್ವನಿಯನ್ನು ಕೇಳಿದ ಕೂಡಲೇ ಫೋನು ಡಿಸ್‌ಕನೆಕ್ಟ್ ಆಯಿತು.
ಇಲ್ಲಿ ಯಾರ ಯಾರ power distance index ಗಳು ಹೇಗೆ ಕೆಲಸ ಮಾಡಿವೆ ನೋಡೋಣ. ಇಂಗ್ಲೀಷು ಮಾತಾಡಬಲ್ಲ ಗಂಡು ಡಾಕ್ಟರಾದ, ನಾನು ಇಂಗ್ಲಿಷು ಮಾತಾಡಲಾರದ ಸೊಮಾಲಿ ಹೆಣ್ಣು ಮಗಳ ಮೇಲೆ ನನ್ನ ಅಧಿಕಾರವನ್ನು ಉಪಯೋಗಿಸಿದ್ದೇನೆ. ಮಗುವಿನ ಆರೋಗ್ಯ ಇಲ್ಲಿ ಇಶ್ಯೂ ಅಲ್ಲವೇ ಅಲ್ಲ ಅನ್ನುವುದನ್ನು ನಾವೆಲ್ಲರೂ ಗಮನಿಸಬಹುದು. ಮಗು ಆರಾಮಾಗಿಯೇ ಇದೆ. ನಾನು ಮೊದಲು ಅಡ್ಮಿಟ್ ಮಾಡೊಲ್ಲ ಎಂದೆ. ನಂತರ ಮನೆಗೆ ಹೋದ ಆ ಸೊಮಾಲಿ ಹೆಂಗಸು ‘ನಾನೇನು ಬೇರೆಯವರಿಗಿಂತ ಕಡಿಮೆ.’ ಎಂದು ನಿರ್ಧರಿಸಿ ಮತ್ತೆ ಬಂದಳು. ನಾನು ಕೊಂಚ್ವ ಮಣಿದು ಅಡ್ಮಿಟ್ ಮಾಡಲು ನಿರ್ಧರಿಸಿದರೆ ಆ ಮಗುವಿಗೆ ಐವಿ ಹಾಕುವವರು ಯಾರೂ ಇಲ್ಲ, ನಮ್ಮ ಆಸ್ಪತ್ರೆಯಲ್ಲಿ. ಬೇರೆ ಕಡೆ ಹೋಗಬೇಕೆಂದು ನಿರ್ಧರಿಸಿದ್ದನ್ನು ಬಂದು ಪೂರಕ್ಕೆ ಪೂರ ನಿಲ್ಲಿಸಿದ್ದು ಮನೆಯ ಯಜಮಾನ ಮಗುವಿನ ಅಪ್ಪ. ಕೊನೆಗೂ ಗೆದ್ದದ್ದು ಮಗುವಿನ ಕುಟುಂಬದ ಶ್ರೇಣೀಕೃತ ವ್ಯವಸ್ಥೆಯೇ? ಮಗುವಿಗೆ ಐವಿ ಬೇಕಾ ಬೇಡವಾ ಎಂಬುದು ಡಾಕ್ಟರಲ್ಲದ ಆ ಆಪ್ಪನಿಗೆ ಗೊತ್ತಿಲ್ಲ. ಆದರೂ ಆತ ನಿರ್ಧರಿಸಿದ್ದ, ಮಗುವಿಗೆ ಹೀಗೇ ಮಾಡಬೇಕೆಂದು.
ಇದೇ ಒಂದು ಮಧ್ಯಮವರ್ಗದ ಬಿಳಿಯ ಅಮ್ಮ ಬಂದಿದ್ದರೆ ಏನಾಗುತ್ತಿತ್ತು. ಹೊಂಗೂದಲುಗಳ, ಚ್ಯೂಯಿಂಗ್‌ಗಮ್ ಅಗಿದುಕೊಂಡು ಮಾತಾಡುವ ಅಮ್ಮ ಮಗುವನ್ನು ಕರಕೊಂಡು ಬರುತ್ತಿದ್ದಳು. ‘The baby is obviously dehydrated. She hasn’t eaten or drunk in the last two days.’ ಎಂದು ಮೊದಲ ಬಾರಿಗೇ ನನ್ನನ್ನು ಚಿತ್ತುಮಾಡುಬಿಡುತ್ತಿದ್ದಳು. ನಂತರ ನಾನು ಮಾತಾಡುವ ಹೊತಿಗೆ ಆಕೆಯ ಸೆಲ್‌ಫೋನಿಗೆ ಎರಡು ಕಾಲ್‌ಗಳು ಬರುತ್ತಿದ್ದವು. ‘ನಾನು ಡಾಕ್ಟರ ಹತ್ತಿರ ಈಗ ಮಾತಾಡುತ್ತಾ ಇದೀನಿ. ಇಲ್ಲ. ಇಲ್ಲ. ಮಗು ಮನೆಗೆ ಬರುವ ಪರಿಸ್ಥಿತಿಯಲ್ಲಿಲ್ಲ. ಇಲ್ಲೇ ಇರ್ತೇವೆ. ಇವತ್ತು’ ಎಂದು ಅಕೆ ಗಂಡನ ಜತೆ ಮಾತಾಡುತ್ತಾಳೆ. ನಮಗ್ಯಾರಿಗೂ ಐವಿ ಹಾಕಲಾಗದಿದ್ದರೆ, ಆಕೆ ‘ಬೇರೆ ಏನೂ ದಾರಿಯೇ ಇಲ್ಲವಾ, ಆಸ್ಪತ್ರೆ ಯಾಕೆ ನಡೆಸುತ್ತಿದ್ದೀರಿ, ನೀವುಗಳು. ಒಂದು ಮಗುವಿಗೆ ಐವಿ ಹಾಕಲು ಬರದಿದ್ದರೆ’ ಎನ್ನುವ ಅರ್ಥದಲ್ಲಿ ಮಾತಾಡುತ್ತಾಳೆ. ನಾನು ಇನ್ನೂ ಕಷ್ಟಪಟ್ಟೋ ಅಥವಾ ಸರ್ಜನ್ನನ್ನೋ, ಅಥವಾ ಮಕ್ಕಳ ತಜ್ಞರನ್ನೋ ಕಾಡಿಬೇಡಿ ಹೇಗೋ ಮಾಡಿ ಐವಿ ಹಾಕುತ್ತೇವೆ. ಹಾಕಲಾಗದಿದ್ದರೆ ಬೇರೆ ಆಸ್ಪತ್ರೆಗೆ ಆಂಬುಲೆನ್ಸಿನಲ್ಲಿ ಸಾಗಿಸುತ್ತೇವೆ.
ಅಧಿಕಾರ ನಮ್ಮ ನಡುವಣ ಅಂತರವನ್ನು ಉಳಿಸುತ್ತದೆ. ಬಣ್ಣ, ಇಂಗ್ಲಿಷ್ ಭಾಶೆ, ಲಿಂಗ, ವಯಸ್ಸು ಇವೆಲ್ಲ ಯಾರು ಹೆಚ್ಚು ಶಕ್ತಿಶಾಲಿ, ಯಾರಿಗೆ ಏನು ಬೇಕು ಎಂಬುದನ್ನು ನಿರ್ಧರಿಸುತ್ತದೆ.
ಮಗುವಿನ ಆರೋಗ್ಯ ರೋಗಿಗೂ, ಡಾಕ್ಟರಿಗೂ ಮುಖ್ಯವಾಗುವುದೇ ಇಲ್ಲ.

Subscribe to:
Posts (Atom)